ಕಾರ್ಕಳ: ಹಿರ್ಗಾನ ಚಿಕ್ಕಲ್ ಬೆಟ್ಟು ನಿವಾಸಿ ಗೋಪಾಲ ಕೃಷ್ಣ ಎಂಬಾತ ತನ್ನ ಪತ್ನಿ ಸುರೇಖಾ ಗೆ ಕತ್ತಿಯಿಂದ ಕಡಿದು ತಾನು ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಂಗಳವಾರ ಮಧ್ಯಾಹ್ನ ಹೊತ್ತಿನಲ್ಲಿ ಚಿಕ್ಕಲ್ ಬೆಟ್ಟುವಿನ ಮನೆಯಲ್ಲಿ ಗಂಡ ಹೆಂಡತಿಗೆ ಜಗಳ ಆಗಿದೆ. ಜಗಳ ತಾರಕಕ್ಕೆ ಹೋಗಿ ಮನೆಯಲ್ಲಿದ್ದ ಕತ್ತಿಯಿಂದ ಪತ್ನಿಗೆ ಕಡಿದಿದ್ದಾನೆ.
ಇವರ ಗಲಾಟೆ ಕೇಳಿ ಆಕೆಯ ಸಂಬಂದಿಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಈ ಘಟನೆ ಬಳಿಕ ಮನ ನೊಂದ ಆತ ನೇಣು ಬಿಗಿದು ಆತ್ಮ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
