CRIME NEWS

ಫೇಕ್ ನ್ಯೂಸ್: ಪ್ರಕರಣ ರದ್ಧತಿಗೆ ಹೈಕೋರ್ಟ್ ನಕಾರ: ಪೊಲೀಸರಿಗೆ ನೈತಿಕ ಬಲ

Share

ಬೆಂಗಳೂರು /ಪುತ್ತೂರು:

ವೆಬ್‌ ನ್ಯೂಸ್‌ DTv ಸುಳ್ಳು ಸುದ್ದಿ ಪ್ರಸಾರದ ಪ್ರಕರಣವನ್ನು ರದ್ದುಗೊಳಿಸಲು  ಹೈಕೋರ್ಟ್ ನಿರಾಕರಿಸಿದೆ.

ಈ ಮೂಲಕ ದಕ್ಷಿಣ ಕನ್ನಡ ಜಿಲ್ಲಾ  ಪೊಲೀಸರ ಫೇಕ್ ನ್ಯೂಸ್ ಮತ್ತು ದ್ವೇಷ ಭಾಷಣಗಳ ವಿರುದ್ಧ ಸಾರಿರುವ ಕಾನೂನು ಕ್ರಮಕ್ಕೆ ನೈತಿಕ ಬಲ ಲಭಿಸಿದೆ.

ಪೊಲೀಸರಿಗೆ ನೈತಿಕ ಬಲ

ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ D TV ಕನ್ನಡ ಎಂಬ ವೆಬ್‌ ನ್ಯೂಸ್‌ ಪೋರ್ಟಲ್ ವಿರುದ್ದ ಜೂನ್ 21 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ರದ್ದುಗೊಳಿಸುವಂತೆ ಪುತ್ತೂರು ನಿವಾಸಿ ಅಜರುದ್ದೀನ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ನ್ಯಾಯವಾದಿಗಳಾದ ಆಸ್ಮಾ  ವಾದ ಮಂಡಿಸಿದ್ದರು. ಪ್ರಕರಣದ ರದ್ದತಿಗಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅರ್ಜಿದಾರ ಹಿಂಪಡೆದಿದ್ದಾರೆ.

ಪ್ರಕರಣದ ತನಿಖೆಯು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಮುಂದುವರಿಯಲಿದೆ.

To Top