CRIME NEWS

ನವ ವಿವಾಹಿತ ಹಠಾತ್ ಸಾವು: ಬಿಪಿ ನಿರ್ಲಕ್ಷ ಮಾಡದಿರಿ

Share

ಮಂಗಳೂರು: ಮದುವೆಯಾಗಿ ಸಂಸಾರ ಆರಂಭಿಸಬೇಕು ಎನ್ನುವ ಸಂಭ್ರಮದಲ್ಲಿದ್ದ ನವವಿವಾಹಿತ ಯುವಕ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಮಂಜನಾಡಿಯ ಭರತ್

ಉಳ್ಳಾಲ ಯ ಮಂಜನಾಡಿ ಪೆರಡೆ ದಿ. ವೆಂಕಪ್ಪ ಹಾಗೂ ಪಾರ್ವತಿ ದಂಪತಿಯ ಪುತ್ರ ಭರತ್ (32) ಮೃತಪಟ್ಟವರು.

ಟೈಲರಿಂಗ್ ಕೆಲಸ ಮಾಡುವ ಭರತ್ 4 ದಿನದ ಹಿಂದೆ ರಕ್ತದೊತ್ತಡದಿಂದ ಕುಸಿದು ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ.

ಏಪ್ರಿಲ್ 22ರಂದು ಭರತ್ ವಿವಾಹ ಸಮಾರಂಭ ವಿಜೃಂಭಣೆಯಿಂದ ನಡೆದಿತ್ತು, ಇವರ ಪತ್ನಿ ನಗರದ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಭರತ್ ಅವರಿಗೆ ತಾಯಿ ಹಾಗೂ ಮೂವರು ಸೋದರಿಯರು ಇದ್ದಾರೆ.

ರಕ್ತದೊತ್ತಡ ವ್ಯತ್ಯಾಸವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿರಿ.

 

To Top