ಕರಾವಳಿ ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಸಬೇಕು ದ.ಕ. ಜಿಲ್ಲೆಯನ್ನು ಮಂಗಳೂರು ಜಿಲ್ಲೆಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜ ಮನವಿ ಮಾಡಿದ್ದಾರೆ.
ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆಯನ್ನು ಈಗಾಗಲೇ ನಡೆಸಿದ್ದು, ಗುಲ್ಬರ್ಗಾ,ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈಗಾಗಲೇ ಸಚಿವ ಸಂಪುಟ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ವಿಜಯಪುರದಲ್ಲಿ ನಡೆಯಲಿದೆ.
ಆನಂತರದ ಸಚಿವ ಸಂಪುಟ ಸಭೆಯನ್ನು ಕರಾವಳಿಯ ಭಾಗದ ಮಂಗಳೂರಿನಲ್ಲಿ ನಡೆಸುವ ಮೂಲಕ ಕರಾವಳಿ ಭಾಗದ ಅನೇಕ ನೆನೆಗುದಿಗೆ ಬಿದ್ದ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು
– ಐವನ್ ಡಿʼಸೋಜ, ವಿಧಾನ ಪರಿಷತ್ ಸದಸ್ಯರು
ಮುಖ್ಯಮಂತ್ರಿಗಳನ್ನು ಗೃಹ ಕಛೇರಿಯಲ್ಲಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಈ ಮನವಿಯನ್ನು ಸ್ವೀಕರಿಸಿದ ಸಿದ್ದರಾಮಯ್ಯನವರು ದೆಹಲಿ ಪ್ರವಾಸದಿಂದ ವಾಪಾಸ್ಸಾದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ದ.ಕ. ಜಿಲ್ಲೆಯಮತ್ತು ಕರಾವಳಿ ಭಾಗದ ತಲಪಾಡಿಯಿಂದ ಕಾರವಾರದವರೆಗೆ ಇರುವ ಕೋಸ್ಟಲ್ ಭಾಗದ ಜನರ ಸಮಸ್ಯೆಗಳಿಗೆ ಮತ್ತು ಪ್ರವಾಸೋಧ್ಯಮಕ್ಕೆ ಸೂಕ್ತವಾದ ಜಿಲ್ಲೆಗಳಿಗೆ & ಪ್ರತ್ಯೇಕವಾದ ಪ್ರವಾಸೋಧ್ಯಮಕ್ಕೆ ನೀಡಿ ಮೀನುಗಾರಿಕೆಗೆ ಇರುವ ಸಮಸ್ಯೆಗಳು ಈ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳು ಅದೇ ರೀತಿ ಬೀಡಿ ಕಾರ್ಮಿಕರು ಅತ್ಯಂತ ಹೆಚ್ಚು ಇರುವ ಜಿಲ್ಲೆ ಇದಾಗಿದ್ದು, ಅವರಿಗೆ ಪುನರ್ವಸತಿ ಕಲ್ಪಿಸುವ ಜೊತೆಯಲ್ಲಿ ಮಂಗಳೂರಿನ NITK ಯನ್ನು IITK ಯಾಗಿ ಪರಿವರ್ತಿಸುವಂತಹದ್ದು.
ಕೈಗಾರಿಕಾ ಮತ್ತು ಇತರ ಉದ್ಯಮಗಳಿಂದ ಉದ್ಯೋಗ ಅವಕಾಶವನ್ನು ದೊರಕಿಸುವಂತದ್ದು, ಶೈಕ್ಷಣಿಕವಾಗಿ ಈಗಾಗಲೇ ಪ್ರಸಿದ್ದಿ ಪಡೆದಿರುವ ದ.ಕ. ಜಿಲ್ಲೆಯನ್ನು ಮುಂದಕ್ಕೆ ಶೈಕ್ಷಣಿಕಕೇಂದ್ರವನ್ನಾಗಿ ಮಾಡಿ ಶಿಕ್ಷಣಕ್ಕೆ ಸಂಬಂಧಪಟ್ಟಂತಹ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟಂತಹ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳುವಂತದ್ದು ಮತ್ತು ಅನೇಕ ಇತರ ಯೋಜನೆಗಳ ಬಗ್ಗೆ ಚರ್ಚೆ ನಡೆಸುವಲ್ಲಿ ಕರ್ನಾಟಕದ ಕರಾವಳಿ ಭಾಗದ ಅಭಿವೃದ್ದಿ ಹೈಕೋರ್ಟ್ ಸಂಚಾರಿ ಪೀಠದ ಬಗ್ಗೆ ಸರಕಾರ ಕ್ರಮಕೈಗೊಳ್ಳುವ ಅಗತ್ಯವಿರುವಿರುದರಿಂದ ಸಚಿವ ಸಂಪುಟ ಸಬೆ ಕರಾವಳಿ ಭಾಗದ ಅತ್ಯಂತ ಸೂಕ್ತವಾದ ಪ್ರದೇಶವಾಗಿದೆ. ಕರಾವಳಿ ಭಾಗದಲ್ಲಿ ಅಭವೃದ್ದಿಗೊಳ್ಳುವುದಕ್ಕೆ ಸಹಾಯವಾಗುತ್ತದೆ. ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜ ಮುಖ್ಯಮಂತ್ರಿಯವರಲ್ಲಿ ಮನವರಿಕೆ ಮಾಡಿದ್ದಾರೆ.
ಅದೇ ರೀತಿ ದ.ಕ. ಜಿಲ್ಲೆಯು ಎರಡೂ ಜಿಲ್ಲೆಗಳಾಗಿ ಇಬ್ಬಾಗವಾಗಿ ಉಡುಪಿ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದು, ದ.ಕ. ಜಿಲ್ಲೆಯ ಹೆಸರು ಹಾಗೇಯೇ ಉಳಿದಿದ್ದು, ಮಂಗಳೂರು ಜಿಲ್ಲೆ ಎಂದು ಮಾಡಲು ಅನೇಕ ಜನರ ಬೇಡಿಕೆ ಇದ್ದು, ಈ ಬೇಡಿಕೆಯನ್ನು ಪರಿಶೀಲಿಸಿ ಸಚಿವ ಸಂಪುಟ ಸಭೆ ನಡೆದಲ್ಲಿ ಸರಕಾರ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಐವನ್ ಡಿʼಸೋಜಾರವರು ಮುಖ್ಯಮಂತ್ರಿಯವರಲ್ಲಿ ವಿನಂತಿಸಿದ್ದಾರೆ.
