DAKSHINA KANNADA

ಕೊಳತ್ತಮಜಲು ರಹಿಮಾನ್ ಕುಟುಂಬಕ್ಕೆ 50 ಲಕ್ಷ ನೀಡಿದ ಸಚಿವ ಜಮೀರ್

Share

ಬೆಂಗಳೂರು/ ಮಂಗಳೂರು
ಕೊಲೆಯಾದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕುಟುಂಬಸ್ಥರಿಗೆ ಸಚಿವ ಜಮೀರ್ ಅಹ್ಮದ್ ಖಾನ್ 50 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.
ಮೇ 27ರಂದು ಬಂಟ್ವಾಳದ ಕೊಳತ್ತಮಜಲಿನಲ್ಲಿ ಅಬ್ದುಲ್ ರಹಿಮಾನ್ ಮತ್ತು ಶಫಿ ಎಂಬರ ಮೇಲೆ ದುಷ್ಕರ್ಮಿಗಳು ತಳವಾರ್ ಗಳಿಂದ ದಾಳಿ ನಡೆಸಿದ್ದು ಅಬ್ದುಲ್ ರಹಿಮಾನ್ ಮೃತಪಟ್ಟಿದ್ದರು.
ಜಿಲ್ಲಾಧ್ಯಂತ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳು ನಡೆದು ಕ್ರಮೇಣ ಕೋಮುಗಲಭೆಯ ಸ್ವರೂಪ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಜಿಲ್ಲೆಯ ಆಡಳಿತದಲ್ಲಿ ಮಹತ್ವದ ಮಾರ್ಪಾಡು ನಡೆದಿತ್ತು.
ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿತ್ತು. ಕೊಲೆಯಾದ ಬಳಿಕ ಸಚಿವ ಜಮೀರ್ ಅಹ್ಮದ್ ಮೃತ ಅಬ್ದುಲ್ ರಹಿಮಾನ್ ಕುಟುಂಬಸ್ಥರಿಗೆ 50 ಲಕ್ಷ ರೂ. ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದರು.

ಮೃತ ಅಬ್ದುಲ್ ರಹಿಮಾನ್

ಬಳಿಕ ಬಂಟ್ವಾಳಕ್ಕೆ ಮನೆಗೆ ಬಂದು ಪರಿಹಾರದ ಮೊತ್ತ ವಿತರಿಸುವುದಾಗಿ ಹೇಳಿಕೆ ನೀಡಿದ್ದರು.

ಇದೀಗ ಮೃತ ಅಬ್ದುಲ್ ರಹಿಮಾನ್ ಮನೆಯವರನ್ನು ಬೆಂಗಳೂರಿಗೆ ಕರೆತರಿಸಿ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಅವರ ಸಮ್ಮುಖದಲ್ಲಿ ಪರಿಹಾರದ ಮೊತ್ತವನ್ನು ಕುಟುಂಬಸ್ಥರಿಗೆ ನೀಡುವ ಮೂಲಕ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ಜಮೀರ್ ಅಹಮದ್ ಖಾನ್

ಈ ಹಿಂದೆಯೂ ಮಂಗಳೂರಿಗೆ ಸಚಿವನಾಗಿ ಬಂದಿದ್ದ ವೇಳೆ ಬಡಬಗ್ಗರಿಗೆ ಸಿಕ್ಕವರಿಗೆ ತನ್ನ ಜೋಳಿಗೆಯಿಂದ ನೋಟಿನ ಬಂಡಲ್ ಗ ಳನ್ನ ತೆಗೆದು ತೆಗೆದು ಹಂಚುತ್ತಿದ್ದರು ಇದನ್ನು ಕಂಡು ದಕ್ಷಿಣ ಕನ್ನಡ ಜಿಲ್ಲೆಯ ನಾಯಕರು, ಹಿಂಬಾಲಕರು ರಾಜಕಾರಣಿಗಳು ಮಾತ್ರವಲ್ಲದೆ ಪತ್ರಕರ್ತರು ಅಚ್ಚರಿಗೊಂಡಿದ್ದರು.
ಇವರ ಹೃದಯ ವೈಶಾಲ್ಯತೆಯ ಬಗ್ಗೆ ಇಡೀ ಕರಾವಳಿಯ ಕೊಂಡಾಡಿತ್ತು.

ದಾರಿ ಮಧ್ಯೆ ಭೇಟಿಯಾಗಲು ಬಂದ ಬಡವರಿಗೆ ನಗದು ನೀಡುತ್ತಿರುವ ಜಮೀರ್ ( ಫೈಲ್ ಚಿತ್ರ)

ಇದೀಗ ಮತ್ತೊಮ್ಮೆ ಜಮೀರ್ ಹೃದಯ ವೈಶಾಲ್ಯ ಸಮುದಾಯದವರಿಗೆ ಅರಿವಾಗಿದೆ.

ವಸತಿ ಹಂಚಿಕೆ ಅವ್ಯವಹಾರದಲ್ಲಿ ಸಚಿವರ ಮೇಲೆ ಆರೋಪ ಹೊರಿಸಿದಾಗ ಸ್ವಪಕ್ಷಿಯರಿಂದ ಬೆಂಬಲದ ಮಹಾಪೂರವೇ ಬಂದಿತ್ತು.

ಹೃದಯವಂತ ಸಚಿವ, ದಿಲ್ ದಾರ್.. ಶ್ಹಾನ್ ದಾರ್ ಮನುಷ್ಯ.. ಉತ್ಸಾಹದಲ್ಲಿ ಅಲ್ಪಸಂಖ್ಯಾತರ ಪರ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಜಮೀರ್ ಶ್ರೀಮಂತ, ಚಿಲ್ಲರೆ ದುಡ್ಡು ಅವರಿಗೆ ಯಾಕ್ ಬೇಕರ್ರೀ.. ಅವರು ರಾಜೀನಾಮೆ ನೀಡುವ ಅಗತ್ಯ ಇಲ್ಲ. ಅವರು ಮುಂದುವರಿಬೇಕು
– ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ

To Top