CRIME NEWS

ವಂಚನೆಯಲ್ಲೂ ಕೋಮು ಸೌಹಾರ್ದ! ವೀಸಾ ವಂಚನೆ ಆರೋಪಿಗಳು ಮುಂಬೈಯಲ್ಲಿ ಬಂಧನ

Share

ಮಂಗಳೂರು: ವಿದೇಶದಲ್ಲಿ ಕೈ ತುಂಬಾ ಸಂಬಳವಿರುವ ಉದ್ಯೋಗ ಕೊಡಿಸುವುದಾಗಿ ನಂಬಿಸಿ 4 ಕೋಟಿ 50 ಲಕ್ಷ ರೂಪಾಯಿಗೂ ಹೆಚ್ಚು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ಇಬ್ಬರು ಸೂತ್ರಧಾರಿ ಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸತಾರ್ ಖಾನ್- ಕಿಶೋರ್ ಕುಮಾರ್

  • ದಿಲ್ ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಇನ್ನೊಬ್ಬ ಸಾಹುಕಾರಿ ಕಿಶೋರ್ ಕುಮಾರ್ (34). ಇಬ್ಬರೂ ಮುಂಬೈಯವರು. ಸತಾರ್ ಖಾನ್ ನವೀ ಮುಂಬೈ, ಕಿಶೋರ್ ಕುಮಾರ್  ಥಾಣೆ ನಿವಾಸಿ.
  • ಇವರ ನೆಟ್ವರ್ಕ್ ನಲ್ಲಿ ಮಂಗಳೂರಿನ ಬೆಂದೂರ್ ವೆಲ್ ನಲ್ಲಿ ಹೈಯರ್ ಗ್ರೋ ಇಂಟರ್ನ್ಯಾಷನಲ್ ಸಂಸ್ಥೆ ಕಚೇರಿ ತೆರೆದು ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ, ವೀಸಾ ಮಾಡಿಸುವುದಾಗಿ ಅನೇಕ ಮಂದಿಯಿಂದ ಹಣ ಪಡೆದುಕೊಂಡಿದ್ದರು. ಸುಮಾರು 282 ಮಂದಿ ಮೋಸ ಹೋಗಿದ್ದರು. 4 ಕೋಟಿ 50 ಲಕ್ಷ ರೂ ವಂಚನೆ ನಡೆದಿತ್ತು.
    ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಈ ಸಂದರ್ಭ ತನಿಖೆ ನಡೆಸಿದ ಪೊಲೀಸರು ವಸೀಉಲ್ಲಾ‌ಖಾನ್ ಎಂಬಾತನನ್ನ ಬಂಧಿಸಿ ಜೈಲಿಗೆ ತಳ್ಳಿದ್ದರು.
  • ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಆದೇಶದಂತೆ ಮಂಗಳೂರು ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿ ಮುಂಬೈಗೆ ತೆರಳಿ ಇಡೀ ಜಾಲದ ಸೂತ್ರಧಾರಿಗಳಾದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
  • ಈ ಪ್ರಕರಣದ ವಿಶೇಷತೆ
  • ಈ ಇಂತಹ ದೂರುಗಳು ದಾಖಲಾಗುವುದೇ ಅಪರೂಪ. ದಾಖಲಾದ ಮೇಲೆ ಕಚೇರಿಗೆ ದಾಳಿ ನಡೆಸುವುದು ಒಂದು ಎಫ್ ಐ ಆರ್ ದಾಖಲಿಸುವುದು. ಬಳಿಕ ಮ್ಯಾನೇಜರ್ ಒಬ್ಬರನ್ನು ಬಂಧಿಸುವುದು. ಅಲ್ಲಿಗೆ ಮುಗಿಯುತ್ತಿತ್ತು.
    ಆದರೆ ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಮುಂಬೈಗೆ ತೆರಳಿ ಸೂತ್ರಧಾರಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದು ಪೊಲೀಸರ ಮೇಲೆ ನಂಬಿಕೆ ಬರುವಂತೆ ಮಾಡಿದೆ.
    ದಕ್ಷಿಣ ಕನ್ನಡ ಮಂಗಳೂರು ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ/ ಪೊಲೀಸಿಂಗ್ ಕಾರ್ಯ ಶೈಲಿ ಅತ್ಯುತ್ತಮವಾಗುತ್ತಿರುವುದು ಇದೊಂದು ನಿದರ್ಶನ.
To Top