ಔರಾದ್: ಶಾಸಕ ಪ್ರಭು ಚೌಹಾಣ್ ಮನೆಗೆ ನುಗ್ಗಿ ಬೀಗರು ಗಲಾಟೆ ಮಾಡಿಕೊಂಡಿರೋ ಘಟನೆ ತಡರಾತ್ರಿ ಔರಾದ್ ತಾಲೂಕಿನ ಭೋಂತಿ ತಾಂಡಾದಲ್ಲಿ ನಡೆದಿದೆ.
ಔರಾದ್ ಶಾಸಕ ಪ್ರಭು ಚೌಹಾಣ್ ಮನೆಗೆ ನುಗ್ಗಿ ಗಲಾಟೆ ಮಾಡಿರೋ ವಿಡಿಯೋ ವೈರಲ್ ಆಗಿದೆ. ಪ್ರಭು ಚೌಹಾಣ್ ಅವರ ನಿವಾಸಕ್ಕೆ ಮಹಾರಾಷ್ಟ್ರದ ಉದಗೀರ್ ಮೂಲದ ಯುವತಿ ಕುಟುಂಬಸ್ಥರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಇದೇ ಗಲಾಟೆಯಲ್ಲಿ ಚೌಹಾಣ್ ಅವರು ಕಪಾಳಮೋಕ್ಷ ಮಾಡುವ ವಿಡಿಯೋ ವೈರಲ್ ಆಗಿದೆ.
ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ಮದುವೆ ವಿಚಾರವಾಗಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ, ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್‌ಪಿ ಪ್ರದೀಪ್ ಭೇಟಿ ನೀಡಿದ್ದಾರೆ.
ಪ್ರಭು ಚೌಹಾಣ್ ಅವರ 56ನೇ ವರ್ಷದ ಹುಟ್ಟು ಹಬ್ಬ. ಈ ಮಧ್ಯೆ ಮಗನ ಮದುವೆ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದು ಹೋಗಿದೆ.
2008 ರಿಂದ ಔರಾದ್ ವಿಧಾನಸಭಾ ಕ್ಷೇತ್ರದಿಂದ ಶಾಸಕರು. ಅವರು ಬಿಎಸ್‌ವೈಡಿಯೂರಪ್ಪ ಸಂಪುಟದಲ್ಲಿ 20 ಆಗಸ್ಟ್ 2019 ರಿಂದ 13 ಮೇ 2023 ರವರೆಗೆ ಕರ್ನಾಟಕದ ಪಶುಸಂಗೋಪನಾ ಇಲಾಖೆಯ ರಾಜ್ಯ ಸಚಿವರಾಗಿದ್ದರು.
ಆಗಸ್ಟ್ 4, 2020 ರಂದು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಎರಡನೇ ಬಾರಿಗೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ಜರು. ಯಾದಗಿರಿಯ ಉಸ್ತುವಾರಿ ಸಚಿವರು ಕೂಡ ಆಗಿದ್ದರು.
