ಮಂಗಳೂರು: ಹಿರಿಯರಾದ ತುಕರಾಮ್ ಬಂಗೇರ ರವರು ಶನಿವಾರ ಸಂಜೆ 5.45 ಕ್ಕೆ ನಗರದ ಕೆ ಎಂ ಸಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿರುವರು.
ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದು ಹಲವಾರು ವರ್ಷಗಳ ಕಾಲ ಸಮಾಜಕ್ಕಾಗಿ ದುಡಿದ ಶ್ರೀಯುತರು ಭಾರತೀಯ ಜನತಾ ಪಾರ್ಟಿ ಯ ಹಿರಿಯ ಪ್ರಮುಖರಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾಗಿದ್ದರು.
ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟ್, ಯುವಜನ ಸಂಘ ಬೊಕ್ಕಪಟ್ಣ ಅಕ್ಷಯ ಇದರ ಸ್ಥಾಪಕ ಪ್ರಮುಖರಲ್ಲಿ ಒರ್ವರಾಗಿದ್ದರು.
ಮೃತರು ಮಡದಿ ಕುಸುಮ, ಪುತ್ರ ಕಾರ್ತಿಕೇಯ ಬಂಗೇರ, ಸೊಸೆ , ಅಣ್ಣ ತಮ್ಮಂದಿರು, ಸಹೋದರಿ ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿರುವರು. ತುಕರಾಮ ನಿಧನವು ಸಮಾಜಕ್ಕೆ , ಭಾರತೀಯ ಜನತಾ ಪಾರ್ಟಿ, ಆರ್ ಎಸ್ ಎಸ್ ಗೆ ತುಂಬಲಾರದ ನಷ್ಟವಾಗಿದೆ. ಮೃತರ ಅಂತಿಮ ವಿಧಿಯು ನಾಳೆ ಆದಿತ್ಯವಾರ ಜುಲೈ 29 ಬೆಳಗ್ಗೆ 11 ಗಂಟೆಗೆ ಅವರ ಬೊಕ್ಕಪಟ್ಣದ ಸ್ವ ಗೃಹದಲ್ಲಿ ನೆರವೇರಲಿರುವುದು .