CRIME NEWS

ಧರ್ಮಸ್ಥಳ: ಮಹಿಳೆಯರ ಅಸ್ಥಿಪಂಜರಗಳ ಫೋಟೋ ಪತ್ತೆ! ನಿಜವಾಗಿಯೂ ಧರ್ಮಸ್ಥಳದ್ದೆ? ಯಾವ ಸಂದರ್ಭದಲ್ಲಿ ತೆಗೆದದ್ದು! Digvijaya news ಫ್ಯಾಕ್ಟ್ ಚೆಕ್

Share

ಧರ್ಮಸ್ಥಳದಲ್ಲಿ ಹೆಣ್ಣು ಮಕ್ಕಳ ಅಸ್ಥಿಪಂಜರ ಪತ್ತೆಯಾಗಿದೆ ಎಂದು ತೆಲುಗು ಭಾಷೆಯಲ್ಲಿ ಒಕ್ಕಣೆ ಬರೆದಿರುವಂತಹ ಅಸ್ಥಿಪಂಜರಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ದಿಗ್ವಿಜಯ ನ್ಯೂಸ್ ಫ್ಯಾಕ್ಚ್ ಚೆಕ್ ಮಾಡಿದಾಗ ತಿಳಿದು ಬಂದದ್ದು ಇಷ್ಟು. ಈ ಫೋಟೋವು 2011 ಮತ್ತು 2013 ರ ನಡುವೆ ಫ್ರಾನ್ಸ್‌ನ ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಲ್ಲಿ ನಡೆದ ಉತ್ಕನನ ಸಂದರ್ಭ ಪತ್ತೆಯಾಗಿರುವ ಅಸ್ತಿಪಂಜರಗಳ ಫೋಟೋ.

ಆದರೆ, ವೈರಲ್ ಫೋಟೋವು ತಲೆಬುರುಡೆಗಳನ್ನು ಹೊಂದಿರುವ ಹಲವಾರು ಅಸ್ಥಿಪಂಜರಗಳನ್ನು ತೋರಿಸುತ್ತಿದೆ.

ಆದರೆ ಧರ್ಮಸ್ಥಳ ಪರಿಸರದಲ್ಲಿ ನಡೆಸಿದ ಎಸ್ ಐ ಟಿ ಇದುವರೆಗಿನ ಉತ್ಕನನದಲ್ಲಿ ಒಂದು ಕಡೆ ಅಸ್ತಿಪಂಜರ ಸಿಕ್ಕಿದ್ದರೆ ಇನ್ನೊಂದು ಕಡೆ ಭೂಮಿಯ ಮೇಲ್ಭಾಗದಲ್ಲಿ ಅಸ್ತಿ ಪಂಜರ ಪತ್ತೆಯಾಗಿದೆ. ಎರಡೂ ಗಂಡಸಿನ ಅಸ್ತಿ ಪಂಜರ ಎಂಬುದು ವಿಶ್ವವಾಣಿಯ ಪತ್ರಿಕೆಯಲ್ಲಿ ಬರೆಯಲಾಗಿದೆ.

 

ಅಲ್ಲದೆ ಎಸ್​ಐಟಿ ಈವರೆಗೆ ಉತ್ಖನನದ ಕುರಿತು ಯಾವುದೇ ಫೋಟೋ ಬಿಡುಗಡೆ ಮಾಡಿಲ್ಲ. ಹೀಗಾಗಿ ಇದು ಧರ್ಮಸ್ಥಳ ಉತ್ಖನನಗಳಿಗೆ ಸಂಬಂಧಿಸಿದ್ದಲ್ಲ ಎಂದು ಪ್ಯಾಕ್ಟ್ ಚೆಕ್ನಲ್ಲಿ ದೃಢಪಟ್ಟಿದೆ.♦

To Top