DAKSHINA KANNADA

ಮೊತ್ತ ಮೊದಲ ಬಾರಿಗೆ ಪತ್ರಕರ್ತರ ವಿರುದ್ಧ ಗುಡುಗಿದ ಶಾಸಕ ಪ್ರತಾಪಸಿಂಹ ನಾಯಕ್‌ !

Share

 

ಮಂಗಳೂರು: ದರ್ಮಸ್ಥಳ ತಲೆ ಬುರುಡೆ ತೋರಿಸುವುದಾಗಿ ಹೇಳುತ್ತಿರುವ ಅನಾಮಿಕ ದೂರು ದಾರನ ಮೇಲೆ ಸಂಶಯ ಇದೆ, ಮಂಪರು ಪರೀಕ್ಷೆ ನಡೆಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದ್ದಿಗೋಷ್ಠಿಯಲ್ಲಿ ಹೇಳುತ್ತಿದ್ದಂತೆಯೇ ಪತ್ರಕರ್ತರು ಮತ್ತು ಶಾಸಕರ ನಡುವೆ ಮಾತಿನ ವಾಗ್ವಾದ ನಡೆಯಿತು.

 

ಒಂದು ಹಂತದಲ್ಲಿ ಪತ್ರಕರ್ತರು ಅಲ್ಲಿ ಅಷ್ಟೆಲ್ಲಾ ಕೊಲೆ ಅತ್ಯಾಚಾರಗಳು ನಡೆದಿಲ್ಲವೇ ಎಂದು ಪ್ರಶ್ನಿಸಿದರು. ಈ ಸಂದರ್ಭ ತಾಳ್ಮೆ ಕಳೆದುಕೊಂಡ ಪುತ್ತೂರು ವಿಧಾನಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಅಲ್ಲಿ ಸರಣಿ ಕೊಲೆಗಳು ನಡೆದಿವೆ ಎಂದು ನೀವೇ ಪೂರ್ವಗ್ರಹ ಪೀಡಿತರಾಗಿದ್ದೀರಿ, ಎಸ್‌ಐಟಿ ಅವರು ಇದನ್ನು ಪ್ರೂವ್‌ ಮಾಡಿಲ್ಲ. ಅನಾಮಿಕ ದೂರುದಾರ ಮೇಲೆಯೇ ಸಂಶಯ ಇದೆ ಎಂದು ಗುಡುಗಿದರು. ಈ ಸಂದರ್ಭ ಸುರತ್ಕಲ್‌ (ಮಂಗಳೂರು ಉತ್ತರ) ಶಾಸಕ ಡಾ.ವೈ. ಭರತ್‌ ಶೆಟ್ಟಿ ಇದಕ್ಕೆ ನಾನು ಉತ್ತರಿಸುವುದಾಗಿ ಮಧ್ಯಪ್ರವೇಶಿಸಿದರು. ಎಸ್‌ಐಟಿ ತನಿಖೆ ಕುರಿತು ಯಾವುದೇ ಆಕ್ಷೇಪಗಳಿಲ್ಲ. ಆದರೆ ಎಸ್‌ಡಿಪಿಐ, ಎಡಪಕ್ಷಗಳು ಅನಗತ್ಯ ಹಸ್ತಕ್ಷೇಪ ಮಾಡುತ್ತಿವೆ ಎಂದು ಆಕ್ಷೇಪಿಸಿದರು.
ಶಾಸಕ ವೇದವ್ಯಾಸ ಕಾಮತ್‌ ಕೂಡಾ ದನಿ ಗೂಡಿಸಿದರು.
ಎಡಪಂಥೀಯರ ಒತ್ತಾಯದ ಮೇರೆಗೆ ಧರ್ಮಸ್ಥಳ ಗ್ರಾಮದ ಕೇಸನ್ನು ಎಸ್‌ಐಟಿಗೆ ಹಸ್ತಾಂತರಿಸಿದ್ದಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ. ಎಸ್‌ಐಟಿ ತನಿಖೆಗಾಗಿ ತಮಿಳುನಾಡಿನ ಕಾಂಗ್ರೆಸ್ ಸಂಸದರೊಬ್ಬರು ತಮ್ಮ ಪಕ್ಷದ ವರಿಷ್ಠರ ಮೂಲಕ ಒತ್ತಡ ಹಾಕಿರುವ ಸಂಗತಿಗಳು ಕೇಳಿಬರುತ್ತಿವೆ. ಇವೆಲ್ಲ ಹಿಂದುಗಳ ಶ್ರದ್ಧಾಕೇಂದ್ರಗಳನ್ನು ದಮನಿಸುವ ಷಡ್ಯಂತ್ರದ ಭಾಗವೇ ಆಗಿದೆ. ಇಂತಹ ಷಡ್ಯಂತ್ರಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುವ ಅಗತ್ಯವಿದೆ ಎಂದು ಜಿಲ್ಲಾದ್ಯಕ್ಷ ಸತೀಶ್‌ ಕುಂಪಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್, ಡಾ.ಭರತ್ ಶೆಟ್ಟಿ, ಪ್ರತಾಪ್‌ಸಿಂಹ ನಾಯಕ್, ಕಿಶೋರ್ ಕುಮಾರ್, ಮುಖಂಡರಾದ ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು, ಮಹೇಶ್, ಅರುಣ್ ಶೇಟ್ ಇದ್ದರು.

ಅಲ್ಲಿ ಸರಣಿ ಕೊಲೆಗಳು ನಡೆದಿವೆ ಎಂದು ನೀವೇ ಪೂರ್ವಗ್ರಹ ಪೀಡಿತರಾಗಿದ್ದೀರಿ, ಎಸ್‌ಐಟಿ ಅವರು ಇದನ್ನು ಪ್ರೂವ್‌ ಮಾಡಿಲ್ಲ. ಅನಾಮಿಕ ದೂರುದಾರ ಮೇಲೆಯೇ ಸಂಶಯ ಇದೆ
-ಪತ್ರಕರ್ತರ ವಿರುದ್ದ ಗುಡುಗಿದ ಪ್ರತಾಪ್‌ಸಿಂಹ ನಾಯಕ್

To Top