CRIME NEWS

Share

ಬುರುಡೆ ಗ್ಯಾಂಗ್ ತಾವು ಮಾಡುತ್ತಿರುವುದು ಮೋಸ ಸುಳ್ಳು ತಪ್ಪು ಎಂದು ಗೊತ್ತಿದ್ದ ಬಳಿಕವೂ ಷಡ್ಯಂತ್ರ ಹೆಣೆದದ್ದಲ್ಲವೇ?

ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ, ಹತ್ಯೆ ನಡೆಸಿ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಚಿನ್ನಯ್ಯ ನೀಡಿದ ದೂರಿನ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಇದೀಗ ಸರ್ಕಾರಕ್ಕೂ ವರದಿ ನೀಡಿದೆ ಎಂದು ತಿಳಿದು ಬಂದಿದೆ.
ಚಿನ್ನಯ್ಯ, ತಿಮರೋಡಿ, ಮಟ್ಟಣ್ಣವರ್, ಜಯನ್ ಟಿ, ವಿಠಲ ಗೌಡ, ಸುಜಾತ ಭಟ್ ಆರೋಪಿಗಳು ಎಂದು ಹೆಸರಿಸಲಾಗಿದೆ


ಆದರೆ ಧರ್ಮ ಕ್ಷೇತ್ರದ ವಿರುದ್ಧ ಯುಟ್ಯೂಬ್ ಮತ್ತು ಜಾಲತಾಣಗಳ ಮೂಲಕ ಧರ್ಮ ಕ್ಷೇತ್ರ ಮತ್ತು ಧರ್ಮಾಧಿಕಾರಿ ಕುಟುಂಬದ ವಿರುದ್ಧ ತೇಜೋವಧೆ ಮಾಡಿದ್ರು. ಅವಹೇಳನಕಾರಿಯಾಗಿ ಸುಳ್ಳೇ ಸುಳ್ಳು, ಹಸಿ ಹಸಿ, ಕಪೋಲ ಕಲ್ಪಿತ *ತ್ಯಾಚಾರ ಅನಾಚಾರದ ಆರೋಪವನ್ನು ಹೊರಿಸಿದ ಬುರುಡೆ ಗ್ಯಾಂಗಿನ ಮುಖವಾಣಿಗಳು ಅದರ ಸೂತ್ರದಾರರು ಆರೋಪ ಪಟ್ಟಿಯಲ್ಲಿ ಬಾರದೆ ಇದ್ದರೆ…
ಮುಂದೆ ದೇಶಕ್ಕೆ, ಸಮಾಜಕ್ಕೆ ಇದು ಖಂಡಿತ ತಪ್ಪು ಸಂದೇಶ ಹೋಗಬಹುದು.
ಇದೇ ರೀತಿ ಸುಳ್ಳಿನ ಮೋಸದ ಜಾಲಗಳು ಬೆಳೆದು ಸತ್ಯಕ್ಕೆ ಸೋಲಾಗಬಹುದು. ಇದೊಂದು ವಿಶೇಷ ಪ್ರಕರಣ ಎಂದು ಸುಳ್ಳು ಸುದ್ದಿ ಹಬ್ಬಿಸಿದ, ಹುಟ್ಟಿಸಿದ ಎಲ್ಲವನ್ನು ಸಮಾಜ ದ್ರೋಹ (ದೇಶದ್ರೋಹ )ಎಂದು ಪರಿಗಣಿಸಿ ಶಿಕ್ಷೆ ನೀಡಬೇಕು.

ಆದರೆ ಸಿಎಂ ಸಿದ್ದರಾಮಯ್ಯ ನಾನು ಇನ್ನೂ ವರದಿಯನ್ನ ನೋಡಿಲ್ಲ ಎಂದಿದ್ದಾರೆ. ನಾನು ಮೊದಲೇ ಹೇಳಿದ್ದೆ ಧರ್ಮಸ್ಥಳದವರ ಮೇಲೆ ನನಗೆ ನಂಬಿಕೆ ಇತ್ತು ಎಂದು ಹೇಳಿರುವ ಡಿಸಿಎಂ ಡಿಕೆ ಶಿವಕುಮಾರ್, ಇನ್ನೂ ವರದಿ ಓದಿಲ್ಲ. ಸರ್ಕಾರ ಏನ್ ಮಾಡಬೇಕು ಅದನ್ನು ಮಾಡುತ್ತದೆ. ಈ ಬಗ್ಗೆ ಸರಕಾರಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ಎಸ್ ಐ ಟಿ ರಚನೆ ಆಗೋದಕ್ಕಿಂತ ಮೊದಲೇ ನಾನು ಈ ಫಲಿತಾಂಶ ಹೇಳಿದ್ದೆ ಎಂದು ಸಿಟಿ ರವಿ ಆರೋಪಿಸಿದ್ದಾರೆ.
ಇದೊಂದು ಕಪೋ ಕಲ್ಪಿತ ಆರೋಪ ಎಂದಾಗ ನನ್ನನ್ನು ಅನೇಕ ಜನ ಹಿಯ್ಯಾಳಿಸಿದ್ರು.
ಎಸ್ ಐ ಟಿ ಪ್ರಾಥಮಿಕ ತನಿಖೆಯಲ್ಲಿ ಇದು ಷಂಡ್ಯಂತ್ರ ಅಂತ ಹೇಳಿದೆ, ಆರೋಪಿಗಳನ್ನು ಪಟ್ಟಿ ಮಾಡಿದೆ.
ಆದರೆ ಏನು ಮಾಡೋಣ ಸರ್ಕಾರ ಅಂದು ಬುರುಡೆ ಗ್ಯಾಂಗ್ ಮೇಲೆ ಹೆಚ್ಚು ನಂಬಿಕೆ ಇಟ್ಟಿತು ಎಂದು ಬಿಜೆಪಿ ಮುಖಂಡ ಸಿಟಿ ರವಿ ಆರೋಪಿಸಿದ್ದಾರೆ.

 

To Top