CRIME NEWS

ಸೌಜನ್ಯ ಪ್ರಕರಣ: ಮರುತನಿಖೆ ಅರ್ಜಿಯಲ್ಲಿ ತಪ್ಪುಗಳೇ ತಪ್ಪುಗಳು

Share

#ಸೌಜನ್ಯ_ಪ್ರಕರಣ: ಮರುತನಿಖೆಗೆ ಕೋರಿದ್ದ ಅರ್ಜಿಗಳಲ್ಲಿ #ಲೋಪದೋಷ
ದೋಷಗಳನ್ನು ಸರಿಪಡಿಸಿ ಮತ್ತೆ ಅರ್ಜಿ ಸಲ್ಲಿಸುವಂತೆ
#ಸುಪ್ರೀಂ_ಕೋರ್ಟ್‌ ಸೂಚನೆ

ನವದೆಹಲಿ : 2012ರಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುವ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತಾತ್ಕಾಲಿಕ ಹಿನ್ನಡೆಯಾಗಿದೆ.
ಸೌಜನ್ಯ ತಾಯಿ ಕುಸುಮಾವತಿ ಮತ್ತು ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪಿಯಾಗಿ ತನಿಖೆ ಎದುರಿಸಿ ಖುಲಾಸೆಗೊಂಡಿದ್ದ ಸಂತೋಷ ರಾವ್ (ಪರಿಹಾರ ಕೆ) ಸಲ್ಲಿಸಿದ್ದ ಅರ್ಜಿಗಳಲ್ಲಿ ದೋಷಗಳು ಇರುವುದನ್ನು ಸುಪ್ರೀಂಕೋರ್ಟ್ ಗಮನಿಸಿದೆ.

  1. ಪ್ರತ್ಯೇಕವಾಗಿ ಸಲ್ಲಿಸಲಾಗಿದ್ದ ಈ ಎರಡು ವಿಶೇಷ ಅನುಮತಿ ಅರ್ಜಿಗಳನ್ನು (SLPs) ತಮ್ಮ ‘ದೋಷಗಳ ಪಟ್ಟಿ’ಗೆ (defect list) ಸುಪ್ರೀಂ ಕೋರ್ಟ್ ಸೇರಿಸಿದೆ.
    ಇಬ್ಬರು ಅರ್ಜಿದಾರರಿಗೂ ಈ ದೋಷಗಳನ್ನು ಸರಿಪಡಿಸಲು 90 ದಿನಗಳ ಕಾಲಾವಕಾಶ ನೀಡಲಾಗಿದೆ. ನಿಗದಿತ ಅವಧಿಯೊಳಗೆ ತಪ್ಪುಗಳನ್ನು ಸರಿಪಡಿಸದಿದ್ದರೆ, ಅವರ ಅರ್ಜಿಗಳನ್ನು ಸ್ವಯಂ ವಜಾಗೊಳ್ಳುವ ಭೀತಿ ಎದುರಾಗಿದೆ.
    2012ರ ಅ.9 ರಂದು ನಡೆದಿದ್ದು, ಧರ್ಮಸ್ಥಳದಲ್ಲಿ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ನಂತರ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
    ಬೆಳ್ತಂಗಡಿ ಪೊಲೀಸರು ಸಂತೋಷ್ ರಾವ್‌ನನ್ನು ಬಂಧಿಸಿದ್ದರು, ಸಿಐಡಿ ಸಿಬಿಐ ತನಿಖೆ ನಡೆಸಿ ಸಂತೋಷ ರಾವನೆ ಅತ್ಯಾಚಾರ ಆರೋಪಿ ಎಂದು ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಐದು ವರ್ಷಗಳ ಕಾಲ ಜೈಲಿನಲ್ಲಿದ್ದ ಸಂತೋಷ್ ರಾವ ನಿಗೆ ಜಾಮೀನು ಲಭಿಸಿತ್ತು. ಹೋರಾಟಗಾರರೇ ಈತನನ್ನ ಬಿಡುಗಡೆಗೊಳಿಸಿರುವುದಾಗಿ ಅಲ್ಲಲ್ಲಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
    ಸುಪ್ರೀಂ ಕೋರ್ಟ್ ವಿಚಾರಣೆ ವೇಳೆಗೆ ಪ್ರಮುಖ ಸಾಕ್ಷಿಗಳೇ ಉಲ್ಟಾ ಹೊಡೆದಿದ್ದ ರು. ಸುಧೀರ್ಘ ವಿಚಾರಣೆ ಬಳಿಕ ಜುಲೈ 2023ರ ಜುಲೈನಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಅತ್ಯಾಚಾರ ಕೊಲೆ ಆರೋಪಿಯ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ವಿಫಲವಾದ ಕಾರಣ ಆತನನ್ನು ಖುಲಾಸೆಗೊಳಿಸಿತ್ತು.
    ಈ ಹಿನ್ನೆಲೆಯಲ್ಲಿ, ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಕುಸುಮಾವತಿ ಮತ್ತು ಸಂತೋಷ್ ರಾವ್ ಇಬ್ಬರೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಎಸ್‌ಎಲ್‌ಪಿಗಳನ್ನು ಸಲ್ಲಿಸಿದ್ದರು.
    ರಾವ್ ಸೆಪ್ಟೆಂಬರ್ 2ರಂದು ಮತ್ತು ಕುಸುಮಾವತಿ ನವೆಂಬರ್ 19ರಂದು ಅರ್ಜಿ ಸಲ್ಲಿಸಿದ್ದರು.
    ಮೇಲ್ಮನವಿ ಸಲ್ಲಿಸಲು ನ್ಯಾಯಾಲಯದ ಅನುಮತಿ ಪಡೆಯುವುದೇ ಎಸ್‌ಎಲ್‌ಪಿಯ ಉದ್ದೇಶವಾಗಿದ್ದು, ವಿಚಾರಣೆಗೆ ಬರುವ ಮುನ್ನವೇ ಈ ಅರ್ಜಿಗಳು ದೋಷಪೂರಿತ ವಾಗಿ ಇರುವುದರಿಂದ ಸ್ಥಗಿತಗೊಂಡಿರುವುದು ಅರ್ಜಿದಾರರ ನಿರ್ಲಕ್ಷದ ಮೇಲೆ ಕನ್ನಡಿ ಹಿಡಿದಂತಿದೆ.
    ***
    ಅರ್ಜಿಗಳಲ್ಲಿ ಕಂಡುಬಂದಿರುವ ಪ್ರಮುಖ ದೋಷಗಳು
    ನ್ಯಾಯಾಲಯದ ದಾಖಲೆಗಳ ಪ್ರಕಾರ, ಅರ್ಜಿಗಳಲ್ಲಿ ಗಂಭೀರ ಸ್ವರೂಪದ ದೋಷಗಳಿವೆ.
    ಸಂತೋಷ್ ರಾವ್ ಅರ್ಜಿಯಲ್ಲಿನ ದೋಷಗಳು:
    * ಅತ್ಯಾಚಾರ ಪ್ರಕರಣಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಸಂತ್ರಸ್ತೆಯ ಗುರುತನ್ನು ಮರೆಮಾಚುವಲ್ಲಿ ವಿಫಲವಾಗಿರುವುದು.
    * ಅಫಿಡವಿಟ್‌ಗಳು ಮತ್ತು ದಾಖಲೆಗಳನ್ನು ನಿಯಮಾನುಸಾರ ಸೀಲ್ ಮಾಡಿದ ಕವರ್‌ನಲ್ಲಿ ಸಲ್ಲಿಸದಿರುವುದು.
    * ಅರ್ಜಿಯ ಪ್ರಮುಖ ಪ್ಯಾರಾಗಳಲ್ಲಿ ತಪ್ಪು ದಿನಾಂಕ ಮತ್ತು ಕಡ್ಡಾಯ ಮಾಹಿತಿಯ ಕೊರತೆ.
    * ಅರ್ಜಿ ಸಲ್ಲಿಸಲು ಆದ 276 ದಿನಗಳ ವಿಳಂಬವನ್ನು ಕ್ಷಮಿಸಲು ಕೋರಿ ಸಲ್ಲಿಸಲಾದ ಅಪೂರ್ಣ ಅರ್ಜಿ.
    ಕುಸುಮಾವತಿ ಅವರ ಅರ್ಜಿಯಲ್ಲಿ ಕಂಡುಬಂದ ದೋಷಗಳು:
    * ಪ್ರಕರಣದ ಮೂಲ ದಾಖಲೆಯಾದ C.R. ಸಂಖ್ಯೆ 250/12ರ ಪ್ರತಿಯನ್ನು ಸಲ್ಲಿಸದಿರುವುದು.
    * ಕೆಲವು ಅರ್ಜಿಗಳಿಗೆ ಸಹಿ ಹಾಕದಿರುವುದು ಮತ್ತು ರಿಜಿಸ್ಟ್ರಿಯ ಸೂಚನೆಗೆ ವಿರುದ್ಧವಾಗಿ ಸಂತ್ರಸ್ತೆಯ ವಿವರಗಳನ್ನು ಸೇರಿಸಿರುವುದು.
    * ವಿಳಂಬವನ್ನು ಕ್ಷಮಿಸಲು ಕೋರಿ ಸಲ್ಲಿಸಲಾದ ಅರ್ಜಿಯೊಂದಿಗೆ ಅಗತ್ಯ ಅಫಿಡವಿಟ್ ಮತ್ತು ನ್ಯಾಯಾಲಯದ ಶುಲ್ಕವನ್ನು ಪಾವತಿಸದಿರುವುದು.
    ಈಗ ಮುಂದಿನ ಹಾದಿ ಸಂಪೂರ್ಣವಾಗಿ ಅರ್ಜಿದಾರರ ವಕೀಲರ ತಂಡವನ್ನು ಅವಲಂಬಿಸಿದೆ. 90 ದಿನಗಳೊಳಗೆ ಗುರುತಿಸಲಾದ ಎಲ್ಲಾ ದೋಷಗಳನ್ನು ಅವರು ನಿಖರವಾಗಿ ಸರಿಪಡಿಸಿ, ಮರುಸಲ್ಲಿಸಬೇಕಾಗುತ್ತದೆ. ಆಗ ಮಾತ್ರ ಸುಪ್ರೀಂ ಕೋರ್ಟ್ ಮೇಲ್ಮನವಿಗೆ ಅನುಮತಿ ನೀಡುವುದನ್ನು ಪರಿಗಣಿಸಲಿದ್ದು, ಇಬ್ಬರೂ ಕೋರುತ್ತಿರುವ ಮರುತನಿಖೆಗೆ ಆದೇಶಿಸುವ ಸಾಧ್ಯತೆ ಇರುತ್ತದೆ.

 

To Top