DAKSHINA KANNADA

ದೈವ ವನ್ನು ದೆವ್ವ ಎಂದು ಅಣಕಿಸಿದ ರಣವೀರ್ ಸಿಂಗ್ ಕ್ಷಮಾಪಣೆ

Share

#ಕಾಂತಾರ’ ಚಿತ್ರದ ‘ದೈವ’ವನ್ನು ‘ದೆವ್ವ’ ಎಂದು ಕರೆದು ಮೂರ್ಖತನ ತೋರಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ತಪ್ಪನ್ನು ಅರಿತು #ಕ್ಷಮೆ ಯಾಚಿಸಿದ್ದಾರೆ.
ಇದು ತುಳು #ಭೂತಾರಾಧನೆ, ಸಂಸ್ಕೃತಿಗೆ #ಅವಮಾನ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು. ನೆಟ್ಟಿಗರ ತೀವ್ರ ಟೀಕೆಗಳ ನಂತರ, ರಣವೀರ್ ಸಿಂಗ್ ಇದೀಗ ತಮ್ಮ ಹೇಳಿಕೆಗಳಿಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ದೇಶದ ಸಂಸ್ಕೃತಿ, ಸಂಪ್ರದಾಯಗಳಿಗೆ ತೀವ್ರ ಗೌರವವಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ಆದರೆ ಈ ನಡುವೆ ರಣವೀರ ಸಿಂಗ್ ಮಾಡಿರುವ ಕೃತ್ಯಕ್ಕೆ ರಿಷಬ್ ಶೆಟ್ಟರನ್ನು ಹೊಣೆ ಮಾಡುವ ತಥಾ ಕಥಿತ ವರ್ಗಕ್ಕೆ ರಣವೀರ ಸಿಂಗ್ ಕ್ಷಮಾಪಣ ಕೇಳಿರುವುದು ನಿರಾಸೆ ಮೂಡಿಸಿದೆ.
ರಿಷಬ್ ಶೆಟ್ಟರನ್ನು ನಿಂದಿಸುವ ಅವಕಾಶ ತಪ್ಪಿ ಹೋಯಿತಲ್ಲ ಮುಂದೆ ಎಂದಾದರೂ ಸಿಗಬಹುದೇ ಎಂದು ಕಾಯುತ್ತಿದ್ದಾರೆ.
#ದೇಶಾದ್ಯಂತ_ಜಾಗೃತಿ:
ಇಡೀ ಪ್ರಕರಣದಿಂದ ದೇಶದಲ್ಲಿ ಒಂದು ಸ್ಪಷ್ಟತೆ ಸಿಕ್ಕಿದೆ.
ತುಳುನಾಡಿನ ಭೂತಾರಾಧನೆ ಮಹತ್ವ ಅರಿವಾಗತೊಡಗಿದೆ.
ಇಡೀ ದೇಶದಲ್ಲಿ ಕೇಳಿ ಬಂದ ಆಕ್ರೋಶದಿಂದ ರಣವೀರ್ ಸಿಂಗ್ ತಪ್ಪನ್ನು ಅರಿತುಕೊಂಡು ಕ್ಷಮೆ ಕೇಳುವ ವರೆಗೆ ದೈವದ ಮಹಾತ್ಮೆ ಪಸರಿಸಿರುವುದು ಲೋಕಕ್ಕೆ ಗೊತ್ತಾಗಿದೆ.
ಇದಕ್ಕೆ ಕಾರಣವಾಗಿರುವುದು ಕಾಂತಾರ ಸಿನಿಮಾದ ರಿಷಬ್ ಶೆಟ್ಟಿ Rishab Shetty Films ಎನ್ನುವುದು ಸರ್ವ ವಿಧಿತ.

#ಅಮೃತ ಬರುವ ಮುಂಚೆ #ಹಾಲಾಹಲ #ವಿಷ ಬರುವುದು. ಅದಕ್ಕಾಗಿ ಸಮುದ್ರ ಮಥನ ಮಾಡಿದ್ದೆ ತಪ್ಪು ಎಂದರಾದಿತೇ?
ಈಗ ದೈವಾರಾಧನೆ ಮಹತ್ವ ದೇಶದ ಜನರಲ್ಲಿಯೂ ಅರಿವು ಮೂಡ ತೊಡಗಿದೆ. ಇದಕ್ಕೆ ಕಾರಣವಾಗಿರುವುದು ಕಾಂತಾರ ಸಿನಿಮಾ ಮತ್ತು ತುಳುನಾಡಿನ ಜನರು.
ಕಾಂತಾರ ಸಿನಿಮಾ ಮಾಡದಿದ್ದರೂ ಈ ಇಂಟರ್ನೆಟ್ ಯುಗದಲ್ಲಿ ತುಳುನಾಡಿನ ಭೂತಾರಾಧನೆ ಹೊರಜಗತ್ತಿನಿಂದ ಮುಚ್ಚಿಟ್ಟುಕೊಳ್ಳುವುದು ಅಸಾಧ್ಯ. ಕ್ರಮೇಣ ನಿಧಾನವಾಗಿಯಾದರೂ ವಿಡಂಬನೆಗೆ ಕಾರಣವಾಗುತ್ತಿತ್ತು.. ಕಾಂತರಾ ಸಿನಿಮಾದಿಂದಾಗಿ ಬಹುಬೇಗನೆ ಭಕ್ತಿ ಮತ್ತು ಅಭಿಮಾನದ ಪರಾಕಾಷ್ಟೆಯಿಂದ ಪ್ರೀತಿಯಿಂದಲೇ ವೇಷಗಳನ್ನು ಮಾಡಿದ್ದರೂ ನೋಡುಗರ ಕಣ್ಣಿಗೆ ಅದು ವಿಡಂಬನೆಯಂತೆ ಕಾಣುತ್ತಿತ್ತು.
ತುಳುನಾಡಿನ ಜನರು ಮಾತ್ರ ಬೀದಿಯಲ್ಲಿ ವೇಷದಲ್ಲಿ ಹೋಗುವ ವರ ದೈವಾರಾಧನೆ ವಿಡಂಬನೆ ಮಾಡುವವರನ್ನು ಪ್ರಶ್ನೆ ಮಾಡುತ್ತಿದ್ದರು. ಇದೀಗ ಕರುನಾಡಿನ ಜನರು ಮಾತ್ರವಲ್ಲದೆ ದೇಶದ ಜನರು ಕೂಡ ವಿಡಂಬನೆಯನ್ನು ಪ್ರಶ್ನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.

 

To Top