CRIME NEWS

ಬುರುಡೆ ತಂದದ್ದೇ ಸೌಜನ್ಯ ಮಾವ ವಿಠಲ್ ಗೌಡ ಪೊಲೀಸರ ಜೊತೆ ಸ್ಥಳ ಮಹಜರು!

Share

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು ಕಾಡಿನಿಂದ ತಂದಿರುವುದು ಸೌಜನ್ಯ ಮಾವ ವಿಠಲ್ ಗೌಡ ಎಂದು ಎಸ್.ಐ.ಟಿ ವಿಚಾರಣೆಯಲ್ಲಿ ಬಯಲಾಗಿದೆ.

ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯ ವೇಳೆ ನೇತ್ರಾವತಿ ಸ್ನಾನಘಟ್ಟದಲ್ಲಿ ವಿಠಲಗೌಡ ಅವರೊಂದಿಗೆ ಆಗಮಿಸಿದ ಎಸ್.ಐ.ಟಿ ತಂಡ ಸ್ಥಳ‌ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ವಿಠಲ್ ಗೌಡ ಮೊದಲು ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟದಲ್ಲಿರುವ ಬಂಗ್ಲಗುಡ್ಡೆ ಕಾಡಿನಿಂದ ಬುರುಡೆ ಯನ್ನು ತಂದು ನೀಡಿದ್ದು, ಅದನ್ನು ಚಿನ್ನಯ್ಯನಿಗೆ ಒಪ್ಪಿಸಿರುವುದು ಎಸ್.ಐ.ಟಿ ತನಿಖೆಯಲ್ಲಿ ಬಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೌಜನ್ಯ ಅತ್ಯಾಚಾರ ಪ್ರಕರಣದಲ್ಲಿ ಧರ್ಮಸ್ಥಳದ ವಿರುದ್ಧ ಆರೋಪ ಮಾಡಿದ ತಂಡದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದ ಸೌಜನ್ಯ ತಾಯಿ ಕುಸುಮಾವತಿಯ ಸಹೋದರ ವಿಠಲ ಗೌಡ ಧರ್ಮಸ್ಥಳದ ಹೆಸರು ಕೆಡಿಸಲೆಂದೇ ಬುರುಡೆ ಪ್ರಕರಣಕ್ಕಾಗಿ ಬುರುಡೆಯನ್ನ ಕಾಡಿನಿಂದ ತಂದಿರುವ ಮಾಹಿತಿ ಹೊರಬಿದ್ದಿದೆ.
ವಿಠಲ ಗೌಡನನ್ನು ಸೆಪ್ಟಂಬರ್ 5ರಂದು ಎಸ್ಐಟಿ ವಿಚಾರಣೆಗೆಂದು ಕರೆದಿತ್ತು

ಬುರುಡೆ ಚೆನ್ನಯ್ಯ ಜೊತೆಗೆ ಯೂಟ್ಯೂಬರ್ ಅಭಿಷೇಕ್, ಸೂತ್ರಧಾರಿ ಗಿರೀಶ್ ಮಟ್ಟಣ್ಣನವರು ಅವರನ್ನು ರಾತ್ರಿಯಿಡೀ ಪ್ರತ್ಯೇಕ ಕೋಣೆಗಳಲ್ಲಿ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದರು.

ಪರಿಣಾಮ ಬುರುಡೆಯನ್ನು ತಂದಿರುವುದು ಸೌಜನ್ಯ ತಾಯಿ ಕುಸುಮಾವತಿಯ ಸಹೋದರ ವಿಠಲ ಗೌಡ ಎನ್ನುವುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಶನಿವಾರ ಎಸ್ಐಟಿ ಪೊಲೀಸರು ನೇತ್ರಾವತಿ ಘಟ್ಟ ಮತ್ತು ಕಾಡಿನ ಬಳಿ ಸ್ಥಳ ಮಹಜರು ನಡೆಸಿದ್ದಾರೆ

To Top