DAKSHINA KANNADA

ಅಹಲ್ಯ ವೆಂಕಟ್ ರಾಜ್, ಪದ್ಮನಯನ ಆದರ್ಶ ಶಿಕ್ಷಕಿಯರಿಗೆ ಶಿವಳ್ಳಿ ಸ್ಪಂದನ ಸನ್ಮಾನ

Share

 

ಮಂಗಳೂರು: ಶಿವಳ್ಳಿ ಸ್ಪಂದನ ಕದ್ರಿವಲಯದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕಿಯರಾದ ಅಹಲ್ಯ ವೆಂಕಟರಾಜ್ ಮತ್ತು ಪದ್ಮನಯನ ಸಂಪತ್ ಕುಮಾರ್ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.


ಮಂಗಳೂರು ಶಿವಳ್ಳಿ ಸ್ಪಂದನ ಉಪಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ದ.ಕ. ಜಿಲ್ಲಾ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಶಿವಳ್ಳಿ ಸ್ಪಂದನ ಮಹಿಳಾಘಟಕದ ಅಧ್ಯಕ್ಷೆ ಶ ರಮಾಮಣಿ, ಶಿವಳ್ಳಿ ಸ್ಪಂದನ ಕದ್ರಿವಲಯದ ಕಾರ್ಯದರ್ಶಿ ಶೀಲಾ ಜಯಪ್ರಕಾಶ, ಜೊತೆಕಾರ್ಯದರ್ಶಿ ವನಿತಾ ಎಲ್ಲೂರು, ಕೋಶಾಧಿಕಾರಿ ರವಿಕಾಂತ ಭಟ್, ಕಾರ್ಯಕಾರಿ ಸಮಿತಿಯ ಸದಸ್ಯ ಸದಾನಂದ ರಾವ್ ಪೇಜಾವರ ಉಪಸ್ಥಿತರಿದ್ದರು.

ಅಹಲ್ಯಾ ವೆಂಕಟರಾಜ್:
ಕೊಯಮತ್ತೂರಿನಲ್ಲಿ ಹುಟ್ಟಿ ಬೆಳೆದು, ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂಫಿಲ್ ಶಿಕ್ಷಣ ಪಡೆದರು. ಕೊಯಮತ್ತೂರು ಮತ್ತು ಚೆನ್ನೈನ ಮಹಿಳಾ ಕಾಲೇಜಿನಲ್ಲಿ ಭೌತಶಾಸ್ತ್ರ ಅದ್ಯಾಪಕಿಯಾಗಿ ಸುಮಾರು 20 ವರ್ಷಗಳ ಸೇವಾ ಅನುಭವ ಪಡೆದವರು. ಪತಿಯ ವರ್ಗಾವಣೆಯಿಂದಾಗಿ ಅವರು ಮಂಗಳೂರಿಗೆ ಆಗಮಿದರು. ಆರಂಭದಲ್ಲಿ ಒಂದು ವರ್ಷ ಅವರು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು, ಅಲ್ಲಿ ಕೆಲಸ ಮಾಡುತ್ತಲೇ ಕಂಪ್ಯೂಟರ್ ವಿಜ್ಞಾನದಲ್ಲಿ ಪಿಜಿಡಿಸಿಎ ಪಡೆದರು. ಮುಂದಿನ ವರ್ಷ ಅವರು ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಸೇವೆ ಸಲ್ಲಿಸಿದರು. 2014 ರಲ್ಲಿ ಅವರು ಅಸೋಸಿಯೇಟ್ ಪ್ರೊಫೆಸರ್ ಮತ್ತು ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥರಾಗಿ ನಿವೃತ್ತರಾದರು.
1983 ರಲ್ಲಿ ಅವರು ಕರ್ನಾಟಕ ಬ್ಯಾಂಕಿನ ಎಜಿಎಂ ಶ್ರೀ ಎನ್. ವೆಂಕಟ್ರಾಜ್ ಅವರೊಂದಿಗೆ ಸಂತೋಷದ ದಾಂಪತ್ಯ ಜೀವನವನ್ನು ಪ್ರವೇಶಿಸಿದರು. ಪ್ರಸ್ತುತ ಒಬ್ಬ ಗಂಡು ಮಗ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳು ಇದ್ದಾರೆ.

ಪದ್ಮನಯನ : ಇವರು ಪಡುಬಿದ್ರಿಯ ಶಾಂತಾ ಮತ್ತು ಪಾರ್ಥಸಾರಥಿ ರಾವ್ ದಂಪತಿ ಪುತ್ರಿ. ಸಂಪತ್ ಕುಮಾರ್ ಬೆಳ್ಮಣ್ ಅವರ ಪತ್ನಿ. ಇವರು ಬಿ.ಇ. ಎಂ.ಟೆಕ್ ಸ್ನಾತಕೋತ್ತರ ಪದವೀಧರೆ. ಕಂಪ್ಯೂಟರ್ ಸಾಯನ್ಸ್ ಮತ್ತು ಇಂಜಿನಿಯರಿಂಗ್ ನಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ.
ಇವರು ಮುಂಬೈ ಟಾಕೂರ್ ಇಂಜಿನಿಯರಿಂಗ್ ಕಾಲೇಜ್ 10 ವರ್ಷಗಳ ಕಾಲ ಉಪನ್ಯಾಸಕಿಯಾಗಿ ಸೇವೆಯನ್ನು ಸಲ್ಲಿಸಿ, ಬಳಿಕ ಮಂಗಳೂರು ಶ್ರೀನಿವಾಸ ಇನ್ಸ್ ಟ್ಯೂಟ್ ಆಫ್ ಟೆಕ್ನಾಲಜಿಯ ಲ್ಲಿ 18 ವರ್ಷ ಗಳ ಸೇವಾ ಅನುಭವ. ಪ್ರಸ್ತುತ ಮಂಗಳೂರಿನ ಎ.ಜೆ.ಇನ್ಸ್ ಟ್ಯೂಟ್ ಆಫ್ ಇಂಜನಿಯರಿಂಗ್ ಎಂಡ್ ಟೆಕ್ನಾಲಜಿ ಸಂಸ್ಥೆಯಲ್ಲಿ ಆರ್ಟಿಫಿಷಿಯಲ್ ಇಂಟಲಿಜನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಆದಿತ್ಯ
ಮತ್ತು ಅರ್ಜುನ್ ಎಂಬ ಇಬ್ಬರು ಗಂಡು ಮಕ್ಕಳು.

ಇಬ್ಬರು ಪ್ರತಿಭಾನ್ವಿತ ಶಿಕ್ಷಕರು ಶಿವಳ್ಳಿ ಸ್ಪಂದನ ಕದ್ರಿವಲಯದ ಹೆಮ್ಮೆ.

To Top