KARNATAKA

ಮಂಗಳೂರು ಮತ್ತು ನನ್ನ ಮಧ್ಯೆ ದೇವರೇ ಮಾಡಿರುವ ಬೆಸುಗೆಯಿದೆ – ಸ್ಯಾಂಡಲ್ ವುಡ್ ನಟ ಶರಣ್

Share
ಮಂಗಳೂರು: ನಮ್ಮ ದೇಶದ ವಿವಿಧತೆಯಲ್ಲಿ ಏಕತೆಗೆ ಮಂಗಳೂರು ಉತ್ತಮ ಉದಾಹರಣೆ ಮಂಗಳೂರು ಆಗಿದೆ. ಹುಲಿವೇಷದ ಊದು ಪೂಜೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರುವುದು ನಿಜಕ್ಕೂ ಸಂತೋಷವಾಗಿದೆ ಎಂದು ಸ್ಯಾಂಡಲ್ ವುಡ್ನ ಖ್ಯಾತ ನಾಯಕನಟ ಶರಣ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ನೇತೃತ್ವದಲ್ಲಿ ಕುಂಪಲ ಆದಿಶಕ್ತಿ ಕ್ರಿಕೆಟರ್ಸ್ ವತಿಯಿಂದ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವ ಪ್ರಯುಕ್ತ ಶುಕ್ರವಾರದಂದು ಕುಂಪಲದ ಆದಿಶಕ್ತಿ ಕ್ಷೇತ್ರದಲ್ಲಿ ನಡೆದ ದ್ವಿತೀಯ ವರ್ಷದ ಹುಲಿವೇಷದ ಸಾಂಪ್ರದಾಯಿಕ ಊದು ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಮಂಗಳೂರಿಗೆ ನಾನಾ ಕಾರಣದಿಂದ ಬರುತ್ತಿರುತ್ತೇನೆ.ಮಂಗಳೂರು ಮತ್ತು ನನ್ನ ಮಧ್ಯೆ ದೇವರೇ ಮಾಡಿರುವ ಬೆಸುಗೆಯಾಗಿದೆ.
ನನ್ನ ಊರು ಹುಬ್ಬಳ್ಳಿಯಲ್ಲಿದ್ದಷ್ಟೇ ಸ್ನೇಹಿತರು ನನಗೆ ಮಂಗಳೂರಿನಲ್ಲೂ ಇದ್ದಾರೆ.ಪ್ರಕಾಶ್ ಕುಂಪಲ ಅವರು ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರೂ ತನ್ನ ಊರಿನ ಅಶಕ್ತರು,ಶಿಕ್ಷಣ ವಂಚಿತರು,ಅನೇಕ ಸಂಘ ಸಂಸ್ಥೆಗಳಿಗೆ ಸಹಾಯ ಹಸ್ತ ನೀಡುವುದರ ಜೊತೆಗೆ ,ಇಲ್ಲಿನ ಮಣ್ಣಿನ ಸಂಸ್ಕೃತಿಯ ಹುಲಿವೇಷ ಕುಣಿತಕ್ಕೂ ದೊಡ್ಡ ಕೊಡುಗೆಯನ್ನ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಪ್ರೇಕ್ಷಕರ ಅಪೇಕ್ಷೇಯ ಮೇರೆಗೆ ನಟ ಶರಣ್ ಅವರು ಕಾಲಿಗೆ ಧರಿಸಿದ್ದ ಶೂಗಳನ್ನ ಕಳಚಿ ಕಾಂತಾರ ಚಿತ್ರದ ವರಾಹರೂಪಂ ಹಾಡನ್ನ ವೇದಿಕೆಯಲ್ಲಿ ಸುಮಧುರವಾಗಿ ಹಾಡಿ ನೆರೆದವರನ್ನ ರಂಜಿಸಿದರು.

To Top