INDIA

ಭಾರತ ಸಹಿತ 8 ರಾಷ್ಟಗಳಲ್ಲಿ ಜಾಗ್ರತಿ

Share
ಸ್ತ್ರೀ ಸಬಲೀಕರಣಕ್ಕಾಗಿ ಬೈಕ್ ಏರಿದ ಅಮೃತಾ 
ಕೆ ಟಿ ಎಂ ಬೈಕ್! 50,000 ಕಿ. ಮೀ ಸವಾರಿ 
ಕುಂಬಳೆ : ಕಳೆದ ನಾಲ್ಕು ವರ್ಷಗಳಿಂದ ಅತೀ ಕಿರಿಯ ವಯಸ್ಸಿನಲ್ಲಿ ಕುಂಬಳೆಯ ಅಮೃತಾ ಜೋಶಿಯವರು ಜಗತ್ತಿನಾ ದ್ಯಂತ ಏಕಾಂಗಿಯಾಗಿ ಬೈಕ್ ರೈಡ್ ಮಾಡುತ್ತಿದ್ದು ಮಹಿಳಾ ಸಬಲೀಕರಣದ ಸದುದ್ದೇಶವನ್ನು ಇರಿಸಿಕೊಳ್ಳಲಾಗಿದೆ.
KL-14 ಎ ಎ 6550 ಎಂಬ ಕೆ ಟಿ ಎಂ ಡ್ಯೂಕ್ ಬೈಕ್ ನಲ್ಲಿ ಭಾರತದಲ್ಲಿ 23,000 ಕಿಲೋಮೀಟರ್ ಬೈಕ್ ಚಲಾಯಿಸಲಾಗಿದೆ.ಅಲ್ಲದೆ ಈ ಮೊದಲು ಭಾರತ ಸೇರಿ 8 ರಾಷ್ಟಗಳು  ಹಾಗೂ ಕೊನೆಯದಾಗಿ, 2025 ಮೇ 5 ರಂದು ಪ್ರಾರಂಭಿಸಿದ ಬೈಕ್ ಯಾತ್ರೆಯು ಯು ಎ ಇ ಯ ( 7 ಎಮಿರೆಟ್ಸ್ )ಮತ್ತು ಓಮನ್ ನ ಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೋಳಿಸಿದ್ದಾರೆ. 2025 ಜೂನ್ 23 ರಂದು ದುಬೈಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸವಾರಿಗಾಗಿ “ಅಚೀವರ್”ಎಂಬ ಬಿರುದಿನೊಂದಿಗೆ ವಿಶ್ವಾದ್ಯಂತವಿರುವ ಪುಸ್ತಕಕ್ಕೆ ಸೇರ್ಪಡೆಗೊಂಡಿದೆ.ಒಟ್ಟಾಗಿ ಇಲ್ಲಿಯವರೆಗೆ 50,000 ಕಿಲೋಮೀಟರ್ ಬೈಕ್ ಸವಾರಿ ಮಾಡಿ ಸಾಧನೆಗೈದಿದ್ದಾರೆ.ಅಮೃತಾ ಜೋಶಿಯವರು ಅಪ್ಪನ ಆಸೆಯಂತೆ ತನ್ನ 21 ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಬೈಕ್ ನಲ್ಲಿ ಭಾರತ ಪರ್ಯಟನೆ ಮಾಡಿದರು. ಫೆಬ್ರವರಿ 5 2021 ರಂದು ಕೇರಳದ ಕಲ್ಲಿಕೋಟೆಯಿಂದ ಸಂಚಾರ ಆರಂಭಿಸಿ ಪ್ರತಿ ನಿತ್ಯ 10 ರಿಂದ 12 ಗಂಟೆ ಬೈಕ್ ರೈಡ್ ಮಾಡಿ ಭಾರತದ ಎಲ್ಲಾ ರಾಜ್ಯಗಳನ್ನು,ಇದರೊಂದಿಗೆ ಬಾಂಗ್ಲಾದೇಶ, ಮ್ಯಾನ್ಮರ್ ಹಾಗೂ ನೇಪಾಳ ದೇಶಗಳನ್ನು ಯಶಸ್ವಿಯಾಗಿ ಸಂದರ್ಶಿದ್ದಾರೆ. 2023 ರಲ್ಲಿ ಶ್ರೀಲಂಕಾ ದೇಶವನ್ನು, 2024 ರಲ್ಲಿ ಭೂತನ್ ದೇಶದಲ್ಲಿ ಸಂಚಾರ ನಡೆಸಿದ್ದಾರೆ.ಈಗಾಗಲೇ 2 ಇಂಡಿಯಾ ಬುಕ್ ಒಫ್ ರೆಕಾರ್ಡ್, 1 ಏಷ್ಯಾ ಬುಕ್ ಒಫ್ ರೆಕಾರ್ಡ್ ಮತ್ತು 2 ಅಂತಾರಾಷ್ಟ್ರೀಯ ಬುಕ್ ರೆಕಾರ್ಡ್ ನೊಂದಿಗೆ ಇಲ್ಲಿಯವರೆಗೆ ಒಟ್ಟು 6 ರೆಕಾರ್ಡ್ ಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.ಕುಂಬಳೆಯ ಸಿ ಎಚ್ ಸಿ ಕ್ರಾಸ್ ರಸ್ತೆ ನಿವಾಸಿ ದಿ. ಅಶೋಕ್ ಜೋಶಿ ಹಾಗೂ ಅನ್ನಪೂರ್ಣ ಜೋಶಿಯವರ ಪುತ್ರಿಯಾದ ಅಮೃತಾ ಜೋಶಿಯವರು ಸಹೋದರ ಅತ್ರೇಯ ಜೋಶಿ, ಸಹೋದರಿಯದ  ಅಪೂರ್ವ ಜೋಶಿ ಯವರ ಸಂಪೂರ್ಣ ಬೆಂಬಲದೊಂದಿಗೆ ಬೈಕ್ ಯಾತ್ರೆ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
To Top