ಧರ್ಮಸ್ಥಳ: ಧರ್ಮಸ್ಥಳದಲ್ಲಿ ಅಸ್ಥಿ ಉತ್ಖನನದ ವೇಳೆ 6ನೇ ಪಾಯಿಂಟ್‌ನಲ್ಲಿ ಸಿಕ್ಕ ಮೂಳೆ 40-50 ವರ್ಷ ಹಳೆಯದ್ದು ಎಂಬ ಮಾಹಿತಿ ಲಭ್ಯವಾಗಿದೆ.
ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ಅಸ್ಥಿ ಉತ್ಖನನ ನಡೆಯುತ್ತಿದೆ. ಈವರೆಗಿನ ಉತ್ಖನನದಲ್ಲಿ ಪಾಯಿಂಟ್ 6ರಲ್ಲಿ ಮಾತ್ರ ಅಸ್ಥಿ ಲಭ್ಯವಾಗಿದೆ. ಗುಂಡಿ 6ರಲ್ಲಿ ಸಿಕ್ಕ ಮೂಳೆಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದ್ದು, ಸಿಕ್ಕಿರುವ ಅಸ್ಥಿ 40-50 ವರ್ಷಗಳ ಹಿಂದಿನದ್ದು ಎಂಬ ಮಾಹಿತಿ ಲಭ್ಯವಾಗಿದೆ.
40 ವರ್ಷಗಳ ಹಿಂದೆ ಶವ ಹೂತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಇದು ಪುರುಷನ ಅಸ್ಥಿಪಂಜರ. ಇನ್ನೊಂದು ವಾರದಲ್ಲಿ ಅಧಿಕೃತ ಮಾಹಿತಿ ಹೊರಬರಲಿದೆ.
ಸೋಮವಾರ ಮತ್ತೆ ಕಾರ್ಯಾಚರಣೆ
ಅಸ್ಥಿ ಉತ್ಖನನಕ್ಕೆ ಭಾನುವಾರ ವಿರಾಮ ನೀಡಲಾಗಿದೆ. ಇದುವರೆಗೂ 10 ಸಮಾಧಿ ಪಾಯಿಂಟ್ ಗಳಲ್ಲಿ ಉತ್ಖನನ ನಡೆದಿದೆ. ಆದರೆ, 6ನೇ ಸಮಾಧಿ ಪಾಯಿಂಟ್ ಬಿಟ್ಟರೆ ಯಾವುದರಲ್ಲೂ ಕುರುಹು ಪತ್ತೆಯಾಗಿಲ್ಲ. ಮತ್ತೆ ಸೋಮವಾರ ಸಮಾಧಿ ಪಾಯಿಂಟ್ ನಂ. 11, 12, 13ರಲ್ಲಿ ಶೋಧ ಕಾರ್ಯಾಚರಣೆ ನಡೆಯಲಿದೆ. ಈ ಮೂರು ಸ್ಪಾಟ್‌ಗಳ ಬಗ್ಗೆ ಕುತೂಹಲ ಹೆಚ್ಚಿದೆ.
