ಉಡುಪಿ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಹೆಜಮಾಡಿ ಎನ್.ಎಸ್. ರೋಡ್ ಬೇಂಗಲೆಯ ಕಲಂದರ್ ಹಾಗು ಮುಮ್ರಾಜ್ ದಂಪತಿಯ ಪುತ್ರಿ ಫಾತಿಮಾ ಮಾಹಿರಾ (6) ಮೃತ ಬಾಲಕಿ.
ಹೃದಯ ಸಂಬಂಧಿ ಕಿಯಿಲೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.
