DAKSHINA KANNADA

ಶಿಕ್ಷಕನ ಕೊಳೆತ ಮೃತ ದೇಹ ಧರ್ಮಸ್ಥಳ ನೇತ್ರಾವತಿ ತಟದಲ್ಲಿ ಪತ್ತೆ

Share

ಮಂಗಳೂರು/ಕೊಪ್ಪಳ : ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ಬಸವರಾಜ್ ಪೊಲೀಸ್ ಪಾಟೀಲ್ (35) ಅವರು ಧರ್ಮಸ್ಥಳದಲ್ಲಿ ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ.

ಬಸವರಾಜ್  ಮಂಗಳವಾರ ಶಾಲೆಯಿಂದ ನಾಪತ್ತೆಯಾಗಿದ್ದರು. ಶಾಲೆಯ ಅಡುಗೆ ಕೋಣೆಯ ಕೀ ಅವರ ಬಳಿಯಲ್ಲಿತ್ತು. . ಊರು ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಇದರಿಂದ ಮನೆಯವರು ಆತಂಕಗೊಂಡಿದ್ದರು.

ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದು, ಅದರ ಮರುದಿನವೇ ಬಸವರಾಜ್ ಕಾಣೆಯಾಗಿದ್ದರು. ಜುಲೈ 20ರಂದು ಧರ್ಮಸ್ಥಳದ ನೇತ್ರಾವತಿ ಸೇತುವೆಯ ಕೆಳಭಾಗದ ಹಳೆಯ ರಸ್ತೆಯಲ್ಲಿ ಬಸವರಾಜ್ ಅವರ ಮೃತ ದೇಹ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯಿಂದ ಆತ್ಮ ತ್ಯೆಯ ಶಂಕೆ ವ್ಯಕ್ತವಾಗಿದ್ದು,  ಬಸವರಾಜ್ ನದಿಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಲೂ

Warning
Warning
Warning
Warning

Warning.

ಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

To Top