ಗಂಡ ಹೆಂಡತಿ ಬೆಳಗ್ಗಿನ ಜಗಳ ಕೊಲೆ ಮಾಡುವ ತನಕ.
ಬೆಳ್ತಂಗಡಿ: ತೆಕ್ಕಾರು ಗ್ರಾಮ ಬಾಜಾರು ನಿವಾಸಿ ಪತಿ ರಫೀಕ್(45) ಎಂಬಾತ ಪತ್ನಿ ಝೀನತ್(38) ಎಂಬಾಕೆಯ ಜೊತೆ ಗಲಾಟೆ ಮಾಡಿದ ಬಳಿಕ ಚೂರಿಯಿಂದ ಇರಿದು ಕೊಂದಿದ್ದಾನೆ.
ಜುಲೈ 17 ರಂದು ಬೆಳಗ್ಗೆ 8:30 ಗಂಟೆಗೆ ಚೂರಿಯಿಂದ ಇದ್ದಿದ್ದು ಗಾಯಗೊಂಡ ಝೀನತ್ ಅವರನ್ನು
ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಪತ್ನಿ ಹಂತಕ ಆರೋಪಿ ರಫೀಕ್ ಕೂಲಿ ಕೆಲಸ ಮಾಡುತ್ತಿದ್ದು. ರಫೀಕ್ ಮತ್ತು ಝೀನತ್ ಮದುವೆಯಾಗಿ 18 ವರ್ಷವಾಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಝೀನತ್ ಮೃತದೇಹ ಪುತ್ತೂರು ಆಸ್ಪತ್ರೆಗೆ ಶವಪರೀಕ್ಷೆಗಾಗಿ ಸಾಗಿಸಲಾಗಿದೆ.
ಜಗಳದಲ್ಲಿ ಆರೋಪಿ ರಫೀಕ್ ಗೆ ತಲೆಗೆ ಗಾಯವಾಗಿದ್ದು ಬಂಟ್ವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿ ವೇಳೆ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ರಫೀಕ್ ವಿದೇಶದಲ್ಲಿ ಉದ್ಯೋಗಕ್ಕಿದ್ದು ಎರಡು ವರ್ಷಗಳ ಹಿಂದಷ್ಟೇ ಊರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದ.
