ಕಾರ್ಕಳ ಶಾಸಕ ಸುನಿಲ್ ಕುಮಾರ್ ತಂದೆ ವಾಸುದೇವ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಕಾರ್ಕಳ: ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ರ ತಂದೆ ನಿವೃತ್ತ ಶಿಕ್ಷಕ ಎಂ.ಕೆ. ವಾಸುದೇವ (87) ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಸ್ಪಂದಿಸದೆ ಇಂದು ಬೆಳಗಿನ ಜಾವ ನಿಧನರಾದರು
ಇಂದು ಸಂಜೆ ಕಾರ್ಕಳದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಎಂ.ಕೆ. ವಾಸುದೇವ್ ಅವರು ಶಿಕ್ಷಕರು. ವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನಷ್ಟೇ ಅಲ್ಲ, ಮೌಲ್ಯಾಧಾರಿತ ಜೀವನದ ಮಾರ್ಗದರ್ಶನವನ್ನೂ ನೀಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.
ಕಾರ್ಕಳದ ರಾಮಪ್ಪ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಸವನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಸೇವೆಯ ಮೂಲಕ ಹಲವಾರು ವಿದ್ಯಾರ್ಥಿಗಳ ಜೀವನ ರೂಪಿಸಿದ್ದರು.
ಎಂ.ಕೆ. ವಾಸುದೇವರ ಪುತ್ರ ವಿ. ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ (ಬಿಜೆಪಿ) ಶಾಸಕರಾಗಿದ್ದಾರೆ.
ಆಘಾತ: “ನನ್ನ ತಂದೆಯವರು ಕೇವಲ ಶಿಕ್ಷಕರಾಗಿರದೆ, ನನಗೆ ಜೀವನದ ಮೌಲ್ಯಗಳನ್ನು ಕಲಿಸಿದ ಗುರುವಾಗಿದ್ದರು. ಅವರ ಅಗಲಿಕೆಯಿಂದ ಉಂಟಾದ ನಷ್ಟವನ್ನು ತುಂಬಲಾಗದು,” ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಅಂತಿಮ ದರ್ಶನ
ವಾಸುದೇವ ಅವರ ಮೃತ ದೇಹ ಇಂದು ಮಧ್ಯಾಹ್ನ 1 ಗಂಟೆಗೆ ಕಾರ್ಕಳದ ಕಲಂಬಾಡಿಪದವಿನಲ್ಲಿ ಇರುವ ಶಾಸಕರ ನಿವಾಸಕ್ಕೆ ಆಗಮಿಸಲಿದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಂಜೆ 4 ಗಂಟೆಗೆ ಅಂತಿಮ ವಿಧಿವಿಧಾನ ನಡೆಯಲಿದೆ
ಅಂತಿಮ ಸಂಸ್ಕಾರದಲ್ಲಿ ಸ್ಥಳೀಯ ಜನರು, ರಾಜಕೀಯ ಮುಖಂಡರು ಮತ್ತು ಶಿಕ್ಷಕ ಸಮುದಾಯದವರು ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲೆಯ ಬಿಜೆಪಿ ಘಟಕವು ಶೋಕ ಸಂದೇಶ ಬಿಡುಗಡೆ ಮಾಡಿದ್ದು, ವಾಸುದೇವ್ರ ಕುಟುಂಬಕ್ಕೆ ಸಾಂತ್ವನ ಸೂಚಿಸಿದೆ.
