ಬೆಂಗಳೂರು: ಬಹು ಭಾಷಾ ಹಿರಿಯ ನಟಿ ಬಿ. ಸರೋಜಾದೇವಿ (87) ಇಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಕನ್ನಡ ತಮಿಳು ತೆಲುಗು ಹಿಂದಿ ಚಿತ್ರಗಳಲ್ಲಿ ಬಿ ಸರೋಜಾದೇವಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು
ಅಭಿನಯ ಸರಸ್ವತಿಯಂದೆ ಸರೋಜಾದೇವಿ ಖ್ಯಾತಿ ಹೊಂದಿದ್ದರು. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐದು ಭಾಷೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಸರೋಜಾ ದೇವಿ ನಟಿಸಿದ್ದಾರೆ.ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್ ಸೇರಿದಂತೆ ಅನೇಕ ಹಿರಿಯ ನಟರೊಂದಿಗೆ ಬಿ ಸರೋಜಾ ದೇವಿ ಅದ್ಭುತವಾಗಿ ನಟಿಸಿದ್ದರು.
ಕೈತುಂಬಾ ಸಿನಿಮಾಗಳಿರುವಾಗಲೇ, ಚಿತ್ರರಂಗದಲ್ಲಿ ನಂಬರ್ 1 ನಟಿ ಅಂತ ಯಶಸ್ಸಿನ ಉತ್ತುಂಗದಲ್ಲಿ ಮೆರೆಯುತ್ತಿರುವಾಗಲೇ ನಟಿ ಸರೋಜಾದೇವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಂಜಿನಿಯರ್ ಆಗಿದ್ದ ಶ್ರೀಹರ್ಷ ರವರೊಂದಿಗೆ ನಟಿ ಸರೋಜಾದೇವಿ ಮಾರ್ಚ್ 1, 1967 ರಂದು ಸಪ್ತಪದಿ ತುಳಿದರು. ಮದುವೆ ನಂತರ ಪತಿಯ ಸಹಕಾರದೊಂದಿಗೆ ನಟನೆಯನ್ನೂ ಮುಂದುವರಿಸಿಕೊಂಡು ಖುಷಿ ಖುಷಿಯಿಂದ ಸಂಸಾರ ಸಾಗಿಸುತ್ತಿದ್ದ ನಟಿ ಸರೋಜಾದೇವಿ ಬದುಕಿನಲ್ಲಿ ಬರಸಿಡಿಲು ಬಡಿದದ್ದು 1986 ರಲ್ಲಿ. ಹೃದಯಾಘಾತದಿಂದ ಶ್ರೀಹರ್ಷ 1986 ರಲ್ಲಿ ಮೃತಪಟ್ಟರು. ಅಲ್ಲಿಂದಲೇ ಸರೋಜಾದೇವಿಯವರ ಕಷ್ಟದ ದಿನಗಳು ಆರಂಭವಾಗಿದ್ದು.
ಜರ್ಮನಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಶ್ರೀ ಹರ್ಷ. ಅವರು ನನ್ನ ನೋಡೋಕೆ ಬಂದಿದ್ದರು. ‘ನಾನು ಇಂಜಿನಿಯರ್, ನೀವು ಆಕ್ಟರ್. ಇಬ್ಬರೂ ಅಡ್ಜಸ್ಟ್ ಆಗುತ್ತಾ’ ಅಂತ ನನಗೆ ಕೇಳಿದರು. ನಾನು ‘ಹ್ಹೂಂ’ ಅಂತ ತಲೆ ಅಲ್ಲಾಡಿಸಿದೆ. ಯಾಕಂದ್ರೆ ‘ಏನೂ ಮಾತಾಡಬಾರದು’ ಅಂತ ನನ್ನ ತಾಯಿ ಕಟ್ಟಪ್ಪಣೆ ಮಾಡಿದ್ದರು” –
ಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ್ವಿ. ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಿತು’
ಹನಿಮೂನ್ ಗೆ ನನ್ನ ತಾಯಿ ಕೂಡ ನನ್ನ ಜೊತೆ ಬಂದಿದ್ದರು. ಮೂರು ಟಿಕೆಟ್ ಬುಕ್ ಮಾಡಿದ್ದರು. ಕಾಶೀರ್ ಗೆ ಹೋಗಿದ್ವಿ. ಅವರು ಬೇರೆ ರೂಮ್. ನಾವು ಬೇರೆ ರೂಮ್ ನಲ್ಲಿ ಇದ್ವಿ” – ಡಾ.ಬಿ.ಸರೋಜಾದೇವಿ.
ಹನಿಮೂನ್ ಗೆ ನನ್ನ ತಾಯಿ ಕೂಡ ನನ್ನ ಜೊತೆ ಬಂದಿದ್ದರು. ಮೂರು ಟಿಕೆಟ್ ಬುಕ್ ಮಾಡಿದ್ದರು. ಕಾಶೀರ್ ಗೆ ಹೋಗಿದ್ವಿ. ಅವರು ಬೇರೆ ರೂಮ್. ನಾವು ಬೇರೆ ರೂಮ್ ನಲ್ಲಿ ಇದ್ವಿ” – ಡಾ.ಬಿ.ಸರೋಜಾದೇವಿ
ಮಗಳು ಹುಟ್ಟಿದ್ದು ಗಣರಾಜ್ಯೋತ್ಸವದಂದು. ನಾನು ಇಂದಿರಾ ಗಾಂಧಿ ಅಭಿಮಾನಿ ಆಗಿದ್ರಿಂದ ಮಗಳಿಗೆ ಇಂದಿರಾ ಅಂತ ಹೆಸರಿಟ್ಟೆ” –
ಮಗನ ಹೆಸರು ಗೌತಮ್ ರಾಮಚಂದ್ರನ್ ಅಂತ. ಎಂ.ಜಿ.ಆರ್ ರವರು ಮಗುನ ಎತ್ತಿಕೊಂಡು ರಾಮಚಂದ್ರ ಅಂತಿದ್ರು. ಅದಕ್ಕೆ ಆ ಹೆಸರನ್ನಿಟ್ಟೆ” – ಡಾ.ಬಿ.ಸರೋಜಾದೇವಿ
ಖುಷಿಯಿಂದ ನಾನು ಜೀವನ ಮಾಡಿಕೊಂಡು ಬಂದೆ. ಆದ್ರೆ, 1986 ರಲ್ಲಿ ಶ್ರೀಹರ್ಷ ರವರಿಗೆ ಹಾರ್ಟ್ ಅಟ್ಯಾಕ್ ಆಯ್ತು. ತೀರಿಕೊಂಡರು
ಖುಷಿಯಿಂದ ನಾನು ಜೀವನ ಮಾಡಿಕೊಂಡು ಬಂದೆ. ಆದ್ರೆ, 1986 ರಲ್ಲಿ ಶ್ರೀಹರ್ಷ ರವರಿಗೆ ಹಾರ್ಟ್ ಅಟ್ಯಾಕ್ ಆಯ್ತು. ತೀರಿಕೊಂಡರು.
ಹೋದಲ್ಲಿ ಬಂದಲ್ಲಿ ಅಶುಭ ಸೂಚಕ ಎಂಬಂತೆ ನೋಡ ತೊಡಗಿದರು.
ಸಮಾಜ ನನ್ನನ್ನ ಚುಚ್ತಾಯಿತ್ತು. ಇನ್ನೊಂದು ಮದುವೆ ಆಗ್ಬೇಕು ಅಂತ ತಾಯಿ ಹಠ ಹಿಡಿದರು. ಆದ್ರೆ, ಹರ್ಷ ಜಾಗಕ್ಕೆ ಮತ್ತೊಬ್ಬರನ್ನ ತರೋಕೆ ನನ್ನ ಮನಸ್ಸು ಒಪ್ಪಿಕೊಳ್ಳಲಿಲ್ಲ. ಅಲ್ಲಿಂದ ನಾನು ಪಟ್ಟ ಕಷ್ಟ ಮರೆಯೋಕೆ ಸಾಧ್ಯ ಇಲ್ಲ. ಅತ್ತು-ಅತ್ತು ನನ್ನ ಕಣ್ಣು ಬತ್ತಿಹೋಗಿತ್ತು” –
ಬಿ.ಸರೋಜಾದೇವಿ ನಟಿಸಿರುವ ಸಿನಿಮಾಗಳು
- ಕಿತ್ತೂರುರಾಣಿ ಚೆನ್ನಮ್ಮ,
ಅಮರಶಿಲ್ಪಿ ಜಕಣಾಚಾರಿ,
ಕಥಾಸಾಗರ,
ಬಬ್ರುವಾಹನ,
ಭಾಗ್ಯವಂತರು,
ಆಷಾಡಭೂತಿ,
ಶ್ರೀರಾಮಪೂಜಾ,
ಕಚ ದೇವಯಾನಿ,
ರತ್ನಗಿರಿ ರಹಸ್ಯ,
ಕೋಕಿಲವಾಣಿ,
ಸ್ಕೂಲ್ಮಾಸ್ಟರ್,
ಪಂಚರತ್ನ,
ಲಕ್ಷ್ಮೀಸರಸ್ವತಿ,
ಚಿಂತಾಮಣಿ,
ಭೂಕೈಲಾಸ,
ಅಣ್ಣತಂಗಿ,
ಜಗಜ್ಯೋತಿ ಬಸವೇಶ್ವರ,
ಕಿತ್ತೂರುಚೆನ್ನಮ್ಮ,
ದೇವಸುಂದರಿ,
ವಿಜಯನಗರದ ವೀರಪುತ್ರ,
ಮಲ್ಲಮ್ಮನ ಪವಾಡ,
ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ,
ಪೂರ್ಣಿಮಾ,
ಗೃಹಿಣಿ,
ಪಾಪಪುಣ್ಯ,
ಸಹಧರ್ಮಿಣಿ,
ಶ್ರೀನಿವಾಸಕಲ್ಯಾಣ,
ಚಾಮುಂಡೇಶ್ವರಿ ಮಹಿಮೆ,
ಚಿರಂಜೀವಿ,
ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
ಪ್ರಶಸ್ತಿಗಳು - ೨೦೦೯ – ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಚಿತ್ರಕ್ಕೆ ಜೀವಮಾನ ಸಾಧನೆ ಪ್ರಶಸ್ತಿ
೨೦೦೯ – ಕರ್ನಾಟಕ ಸರ್ಕಾರದಿಂದ ಡಾ.ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
೨೦೦೯ – ಎರಡನೇ ಬಾರಿಗೆ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
೨೦೦೧ – ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
೧೯೯೩ – ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
೧೯೮೮ – ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
೧೯೮೦ – ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
೧೯೬೯ – ಕುಲ ವಿಳಕ್ಕು ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
೧೯೬೫ – ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ
