ಪುತ್ತೂರು: ಬಿಜೆಪಿ ಮುಖಂಡನಾ ಪುತ್ರ ಕೃಷ್ಣ ರಾವ್ ಯುವತಿಯನ್ನು ಪ್ರೀತಿಸಿ ಬಸುರಿ ಮಾಡಿದ್ದ ಪ್ರಕರಣದಲ್ಲಿ ಭೂಗತ ಪಾತಕಿ ಕಲಿ ಯೋಗೀಶ ಪ್ರವೇಶಿಸಿದ್ದಾನೆ.
ಭೂಗತ ಪಾತಕಿ ಕಲಿ ಯೋಗೇಶ್ ಹೆಸರಿನಲ್ಲಿ ಕನ್ನಡದ ವಾಹಿನಿಯೊಂದರ ವರದಿಗಾರರಿಗೆ ಕರೆ ಮಾಡಿದ ವ್ಯಕ್ತಿ, ಕೃಷ್ಣ ಜಿ.ರಾವ್ ಜೈಲಿನಿಂದ ಹೊರ ಬಂದ ಮೇಲೆ ಬಸಿರಾದ ಯುವತಿಯನ್ನ ಮದುವೆ ಆಗಿಲ್ಲ ಎಂದಾದರೆ ಗುಂಡು ಹೊಡೆದು ಮುಗಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಕರೆ ಮಾಡಿ ಹೇಳಿದ್ದೇನು?
ಮಾಧ್ಯಮ ವರದಿಗಾರನಿಗೆ ಭೂಗತ ಪಾತಕಿ ಕಲಿ ಯೋಗೀಶ್ ಹೆಸರಿನ ವ್ಯಕ್ತಿ ಕರೆ ಮಾಡಿ, ಬಿಜೆಪಿ ಮುಖಂಡನ ಪುತ್ರನ ಪ್ರಕರಣದ ಬಗ್ಗೆ ನಮಗೂ ದೂರು ಬಂದಿದೆ.
ಯುವತಿಯನ್ನು ಗರ್ಭಿಣಿ ಮಾಡಿ ಮೋಸ ಮಾಡಿದ್ದು. ಈಗ ಜೈಲಿನಲ್ಲಿ ಇರಬೇಕು. ಅನ್ಯಾಯವಾಗಿದೆ ಎಂದು ದೂರು ಬಂದಿದೆ. ಸಂತ್ರಸ್ತೆ ಮನೆಯವರ ಪರ ರಾಜಕೀಯದವರು ಯಾರೂ ನಿಲ್ಲುತ್ತಿಲ್ಲ
ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಹಿಂದೂ ಅಲ್ಲವೇ? ಅವರ ಬಳಿ ಹಣವಿಲ್ಲ ಅಂತ ಬಿಟ್ಟುಬಿಡುವುದಾ ಹಿಂದೂ ಸಂಘಟನೆ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಸಿನಿಮಾನಟ ಗಣೇಶ್ ಮದುವೆ ಮಾಡಿಸಿದಂತೆ ಬೆದರಿಸಿ ಮದುವೆ ಮಾಡಿಸುವುದಾಗಿ ಉಸುರಿದ್ದಾನೆ.
