ಮಂಗಳೂರು:
ಜಪಾನಿನ ಹಿಮೇಜಿ ಎಂಬಲ್ಲಿ ನಡೆಯುತ್ತಿರುವ ಏಷ್ಯಾ, ಆಫ್ರಿಕನ್, ಪೆಸಿಫಿಕ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಮಂಗಳೂರಿನ ಆದರ್ಶ್ ಅತ್ತಾವರ್ ಡೆಡ್ ಲಿಫ್ಟ್ ವಿಭಾಗದಲ್ಲಿ 59 ಕೆ. ಜಿ ದೇಹತೂಕ ವರ್ಗದಲ್ಲಿ 276 ಕೆ.ಜಿ ಭಾರ ಎತ್ತುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿ ಮಂಗಳೂರಿಗೆ ಕೀರ್ತಿ ತಂದಿದ್ದಾರೆ.
ಭಾರತದ ಕ್ರೀಡಾಪಟುಗಳ ಪೈಕಿ ವಿಶ್ವ ದಾಖಲೆ ಮಾಡಿರುವ ಎರಡನೇ ವ್ಯಕ್ತಿ ಇವರಾಗಿದ್ದು, 1993 ರಲ್ಲಿ ರೈಲ್ವೇಸ್ ನ ಸಜೀವನ್ ಭಾಸ್ಕರನ್ ವಿಶ್ವ ದಾಖಲೆ ನಿರ್ಮಿಸಿದ್ದರು.
ಆದರ್ಶ್ ಅತ್ತಾವರ್ ಮಂಗಳೂರಿನ ಬಾಲಾಂಜನೇಯ ಜಿಮ್ನಾಸಿಯಂ ನ ಸದಸ್ಯರಾಗಿದ್ದು ಪ್ರಸ್ತುತ ರೈಲ್ವೆ ಇಲಾಖೆ ಉದ್ಯೋಗಿ.
