Business

ಬಿಲ್ ಮಾಂಗೆ ಮೋರ್! ಆನ್ಲೈನ್ ಪಾವತಿ ಆಗಿದ್ದರೂ ಇಲ್ಲ ಎಂದ MORE ಗೆ ದಂಡ

Share

ಮಂಗಳೂರು: ಮಳಿಗೆಗಳಲ್ಲಿ ಆನ್ಲೈನ್ ಪಾವತಿಸುವಾಗ ಹಣ ಬಂದಿಲ್ಲ ಎಂದು ಮಂಗ ಮಾಡುವ ಅಂಗಡಿ ಮಾಲೀಕರಿಗೆ ಚಾಟಿ ಏಟಿನಂತೆ ಗ್ರಾಹಕ ಕೋರ್ಟ್ ಆದೇಶ ಹೊರಡಿಸಿದೆ.

ಆನ್ಲೈನ್ ಪಾವತಿ ಆಗಿಲ್ಲ ಎಂದು ಎರಡೆರಡು ಬಾರಿ ಪಾವತಿ ಪಡೆದುಕೊಂಡು ಅದಾದ ಮೇಲೆ ಕ್ಯಾಶ್ ರೂಪದಲ್ಲಿಯೂ ಹಣ ತೆಗೆದು ಕೊಂಡ ಚಿಲಿಂಬಿಯ ಮೋರ್ ಮಳಿಗೆಗೆ ಬ್ಯಾಂಕ್ನಿಂದ ಹಣ ಕಡಿತವಾದ ಬಗ್ಗೆ ಪಾಸ್ ಬುಕ್ ದಾಖಲೆ ತೋರಿಸಿದರು ಹಣ ಮರುಪಾವತಿ ಮಾಡದ ಕಾರಣ ದಂಡ ಸಹಿತ ಹಣ ವಾಪಸ್ ನೀಡುವಂತೆ ಗ್ರಾಹಕ ಕೋರ್ಟ್ ಆದೇಶ ನೀಡಿದೆ.

ಗ್ರಾಹಕ ನ್ಯಾಯಾಲಯ ಆದೇಶ ಪ್ರತಿ

ಪ್ರಕರಣದ ವಿವರ

ಚಿಲಿಂಬಿಯಲ್ಲಿರುವ ಮೋರ್ ಸೂಪರ್ ಮಾರ್ಕೆಟ್ ನಿಂದ ಗ್ರಾಹಕರಿಗೆ ಸೇವಾ ನ್ಯೂನ್ಯತೆಗಾಗಿ 39,105 ದಂಡ ವಿಧಿಸಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.

ಸಾಮಾಜಿಕ ಹೋರಾಟಗಾರ ಶಶಿಧರ ಶೆಟ್ಟಿ

ಹೋರಾಟಗಾರ ಎಚ್. ಶಶಿಧರ್ ಶೆಟ್ಟಿ ಯವರು 2022ರಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸಲು ಮಂಗಳೂರಿನ ಚಿಲಿಂಬಿ ಬಳಿಯ ಸೂಪರ್ ಮಾರುಕಟ್ಟೆಗೆ ಹೋದಾಗ ಅಗತ್ಯ ವಸ್ತುಗಳನ್ನು ಖರೀದಿಸಿದ ನಂತರ 1890.89 ರೂ. ತಮ್ಮ ಕರ್ನಾಟಕ ಎಸ್‌ಬಿ ಖಾತೆಯಿಂದ ಹಣವನ್ನು ಆನ್ಲೈನ್ (on line) ಮೂಲಕ ವರ್ಗಾಯಿಸಿದ್ದರು.
ಆದರೆ ಬಿಲ್ಲಿಂಗ್ ಕೌಂಟರ್‌ನಲ್ಲಿರುವ ಸಿಬ್ಬಂದಿ ಈ ಮೊತ್ತ ನಿಮ್ಮ ಖಾತೆಯಿಂದ ನಮಗೆ ಪೇಮೆಂಟ್ ಬಂದಿರುವುದಿಲ್ಲ, ಇನ್ನೊಮ್ಮೆ ಪಾವತಿಸುವಂತೆ ವಿನಂತಿಸಿದಾಗ ಆಗ ಸಮಸ್ಯೆಯನ್ನು ಪರಿಹರಿಸಲು ದೂರುದಾರರು 20 ರೂ. ಮೌಲ್ಯದ ಮತ್ತೊಂದು ವಸ್ತು ಖರೀದಿಸಿ1890.89 ಕ್ಕೆ ಸೇರಿಸಿ ಪುನಃ
ತಮ್ಮ ಖಾತೆಯಿಂದ 1,910.89 ಅಯರೂ. ವರ್ಗಾಯಿಸಿದರು.

ಆದರೂ ಅಲ್ಲಿನ ಸಿಬ್ಬಂದಿ ತಮ್ಮ ಖಾತೆಗೆ ಇನ್ನೂ  1,910.89 ರೂ. ಬಂದಿಲ್ಲ ಎಂದು ಹೇಳಿರುವುದರಿಂದ  1911 ರೂ. ಕ್ಯಾಶ್ ರೂಪದಲ್ಲಿ ಕೊಟ್ಟು ಬಂದಿದ್ದರು.,
ತಮ್ಮ ಬ್ಯಾಂಕ್ ಖಾತೆಯಿಂದ ಎರಡು ಬಾರಿ ಮೋರ್ ಸೂಪರ್ ಮಾರ್ಕೆಟ್ ಖಾತೆಗೆ ಹಣ ವರ್ಗಾವಣೆ ಆದ ಬ್ಯಾಂಕ್ ಪಾಸ್ ಬುಕ್ ಪ್ರತಿ ತೋರಿಸಿದರೂ ಮೋರ್ ಸುಪರ್ ಮಾರ್ಕೆಟ್ ಸಿಬ್ಬಂದಿ ಹಣ ಹಿಂತಿರಿಗಿಸಿರಲಿಲ್ಲ,.

ಇದರಿಂದ ನೊಂದ ದೂರುದಾರ ಶಶಿಧರ್ ಶೆಟ್ಟಿ
ಮೋರ್ ಸುಪರ್ ಮಾರ್ಕೆಟ್ ವಿರುದ್ದ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ರ ಯು/ಎಸ್ 35 ದಾಖಲಿಸಿದ್ದರು

ಸಾಕ್ಷಿ ಆಧಾರಗಳನ್ನು ಪರಿಶೀಲನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಗ್ರಾಹಕ ರಕ್ಷಣಾ ಕಾಯಿದೆ (71&72 of consumer protection act- 2019 ) ಪ್ರಕಾರ

ಸೂಪರ್ ಮಾರ್ಕೆಟ್ ನ ಆಡಳಿತ ಮಂಡಳಿಯ ಸೇವೆಯ ಕೊರತೆ, ದೂರುದಾರರ ಮಾನಸಿಕ ಸಂಕಟ ಮತ್ತು ಅನಾನುಕೂಲತೆಗಾಗಿ ಒಟ್ಟು ಮೊತ್ತ 39,105 ರೂ. ದೂರುದಾರರಿಗೆ ನೀಡುವಂತೆ ಮೋರ್ ಆಡಳಿತ ಮಂಡಳಿಗೆ ದಂಡ ವಿಧಿಸಿ, ಆದೇಶ ನೀಡಿದೆ.
ದೂರುದಾರ ಎಚ್, ಶಶಿಧರ್ ಶೆಟ್ಟಿ ಯವರ ಪರವಾಗಿ ವಕೀಲರಾದ ಬಿಪಿ ಭಟ್ ವಾದ ಮಂಡಿಸಿದರು.

 

To Top