ಕಾರ್ಕಳ : ಎರ್ಲಪಾಡಿ ಗ್ರಾಮದ ಕಾಂತರಗೋಳಿ ಬಸ್‌ಸ್ಟ್ಯಾಂಡ್ ಬಳಿ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ನಿಖಿಲ್ ತನ್ನ ಮೊಬೈಲ್‌ನಲ್ಲಿ PARKER ಎಂಬ ಮೊಬೈಲ್ ಆಪ್ ಸಹಾಯದಿಂದ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ಆಟ ಆಡುತ್ತಿದ್ದ.
ಈ ಬಗ್ಗೆ ಕಾರ್ಕಳ ನಗರ ಠಾಣೆ ಎಸ್ಐ ಶಿವಕುಮಾರ್ ಎಸ್ ಆರ್ ತನಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ಆಟಕ್ಕೆ ಬಳಸಿದ ಮೋಬೈಲ್ ಪೋನ್ ನ್ನು ವಶಪಡಿಸಿಕೊಂಡಿದ್ದಾರೆ.
ನಿಖಿಲ್ ಜೊತೆಗೆ ಮತ್ತೆ ಇಬ್ಬರು ಆರೋಪಿಗಳಾದ ಚರಣ್, ಜಮೀರ್ ಎಂಬವರು ಮೊಬೈಲ್ ಫೋನ್ ಮೂಲಕ ಜನರಿಂದ ಹಣವನ್ನು ಪಣವಾಗಿ ಪಡೆದು ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ಆಟ ಆಡುತ್ತಿದ್ದರು. , ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
