ಬೆಂಗಳೂರು: ಕವಿ ಎಚ್ಎಸ್ ವೆಂಕಟೇಶಮೂರ್ತಿ ಬರೆದ
ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಹಾಡಿನ ಗಾಯಕ ರಾಘವೇಂದ್ರ ಬೀಜಾಡಿ ಅವರಿಗೆ ಸೃಷ್ಟಿ ಕಲಾ ವಿದ್ಯಾಲಯ NR ಕಾಲನಿಯ ಅಶ್ವತ್ಥ್ ಕಲಾಭವನದಲ್ಲಿ ಆಯೋಜಿಸಿದ ಎಚ್ಎಸ್ವಿ ಭಾವನಮನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಚ್.ಎಸ್.ವಿ ಅವರು ತಾನು ನೋವನ್ನುಂಡು ನಗುವ ಹಂಚಿದವರು, ಅವರ ರಚನೆಗಳಲ್ಲಿಯೂ ಇದನ್ನು ಕಾಣಬಹುದು ಎಂದು ಪ್ರಶಸ್ತಿ ಸ್ವೀಕರಿಸಿದ ಬೀಜಾಡಿ ನುಡಿದರು.
ಸಾಹಿತಿ ಶ್ರೀಪತಿ ಮಂಜನಬೈಲು, ಎಚ್.ಎಸ್.ವಿ.ಅವರ ಅನಾತ್ಮಕಥನ ಎಲ್ಲರೂ ಓದಲೇಬೇಕು ಎಂದರು.
ಆನಂದರಾಮ ಉಪಾಧ್ಯರು ಎಚ್.ಎಸ್.ವಿ.ಅವರ ಪ್ರಾಧ್ಯಾಪಕ ವೃತ್ತಿ ಹಾಗೂ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡ ದಿನಗಳನ್ನು ನೆನೆದರು.
ಕಾರ್ಯಕ್ರಮದಲ್ಲಿ ಎಚ್.ಎಸ್.ವಿ.ಮಕ್ಕಳಾದ ಸುಮಂತ್ ಹೊದಿಗೆರೆ,ಸುಹಾಸ್ ಹೊದಿಗೆರೆ ಹಾಗೂ ಸಂಜಯ್ ಹೊದಿಗೆರೆ ಮತ್ತು ಕುಟುಂಬದವರು ಉಪಸ್ಥಿತರಿದ್ದರು.
ಪ್ರತಿ ವರ್ಷಜೂನ್ ತಿಂಗಳಲ್ಲಿ ಎಚ್.ಎಸ್.ವಿ.ಸಮ್ಮಾನ್ ಪ್ರಶಸ್ತಿ ಪ್ರದಾನ ಎಚ್.ಎಸ್.ವಿ.ಅವರ ನೆನಪಲ್ಲಿ ಆಯೋಜಿಸಲಿದ್ದೇವೆ
– ಛಾಯಾಪತಿ ಕಂಚಿಬೈಲು, ಸೃಷ್ಟಿ ಕಲಾವಿದ್ಯಾಲಯ ಸಂಸ್ಥಾಪಕರು
ಸೃಷ್ಟಿಯ ಗೌರವ ಅಧ್ಯಕ್ಷ ಶ್ರೀಕಾಂತ್ ಎಂ.ಜಿ. ಅವರು ಎಚ್.ಎಸ್.ವಿ. ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು.
ಸೃಷ್ಟಿಯ ಪ್ರತಿಭೆಗಳು ಎಚ್.ಎಸ್.ವಿ.ಅವರ ಗಾಯನ ಹಾಗೂ ನೃತ್ಯ ಪ್ರದರ್ಶಿಸಿದರು. ಅರ್ಪಿತಾ ಬೆಂಕಿಪುರ್ ನಿರೂಪಿಸಿದರು.
ಎ.ಪಿ.ಎಸ್.ಶಾಲೆ,ಮಹಿಳಾ ಮಂಡಳಿ ಶಾಲೆ ಹಾಗೂ ಮೂಕಾಂಬಿಕಾ ಶಾಲಾ ಮಕ್ಕಳು ಗೀತ ನಮನ ನೆರವೇರಿಸಿದರು

ಉಮೇಶ್ ಕಾಂಚನ್
July 4, 2025 at 11:03 pm
ಛಾಯಾಪತಿಯವರು ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುತ್ತಿರಬೇಕು ಈ ಮೂಲಕ ನಾಡು ಕಂಡ ರಸ ಕವಿ ಎಚ್ಚೆಸ್ವಿಯವರ ಕಾರ್ಯವನ್ನು ಮತ್ತು ನೆನಪಿಸುವಂತೆ ಆಗಬೇಕು.
Anonymous
July 4, 2025 at 11:31 pm
ಧನ್ಯವಾದಗಳು ಸರ್..ಖಂಡಿತಾ ಸರ್..ಸದಾ ಕಲೆಯ ಸೇವೆಯಲ್ಲಿ..