ಶಿವಮೊಗ್ಗ: ತಾಯಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಮಕ್ಕಳಿಬ್ಬರು ಸೇರಿಕೊಂಡು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ತಾಲೂಕಿನ ಕುಂಸಿಯ ಕುಂಬೇಶ್ವರ್ ಬೀದಿಯಲ್ಲಿ ನಡೆದಿದೆ.
ವಾಸು ಅಲಿಯಾಸ್ ವಸಂತ್ (35) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕುಂಸಿ ಪಟ್ಟಣದ ಕುಂಬೇಶ್ವರ ಬೀದಿಯಿಂದ ಎಕೆ ಕಾಲನಿಯ ವರೆಗೆ ಮಚ್ಚಿನಿಂದ ಅಟ್ಟಾಡಿಸಿಕೊಂಡು ಆಕಾಶ್ ಮತ್ತು ಹರೀಶ್ ಸಹೋದರಿಬ್ಬರು ಸೇರಿ ನಿನ್ನೆ ವಸಂತನನ್ನು ಹತ್ಯೆ ಮಾಡಿದ್ದಾರೆ.
ಮೃತ ಮಲ್ಲೇಶಪ್ಪನ ಎರಡನೇ ಪತ್ನಿ ಜೊತೆ ವಸಂತ ಅನೈತಿಕ ಸಂಬಂಧ ಹೊಂದಿದ್ದು, ನಿನ್ನೆ ಕುಡಿದು ಆಕೆಯ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಈ ವಿಚಾರದಿಂದ ಮೃತ ಮಲ್ಲೇಶಪ್ಪನ ಹಿರಿಯ ಹೆಂಡತಿ ಮಗ ಹರೀಶ್ ಮತ್ತು ಕಿರಿಯ ಹೆಂಡತಿಯ ಪುತ್ರ ಆಕಾಶ್ ಸೇರಿಕೊಂಡು ವಸಂತ್ ನನ್ನು ಹೊಡೆದು ಕೊಂದಿದ್ದಾರೆ.
