ದಿಗ್ವಿಜಯ ನ್ಯೂಸ್ ಬ್ಯೂರೊ ವರದಿ
ಹಿಂದೂ ಯುವಕನ ಮೇಲೆ ಮುಸ್ಲಿಂ ಯುವಕರಿಂದ ಪೊಲೀಸ್ ನೈತಿಕಗಿರಿ ಪ್ರಕರಣ ದಾಖಲಾಗಿದೆ.
ಈ ಬಾರಿ ಈ ಸುದ್ದಿ ದಕ್ಷಿಣ ಕನ್ನಡ ಜಿಲ್ಲೆಯಿಂದಲ್ಲ. ಉತ್ತರ ಕರ್ನಾಟಕದ ಕಲಬುರಗಿ ನಗರದ ಸಂತ್ರಾಸವಾಡಿ ಪ್ರದೇಶದಿಂದ. ಎಂಬಿ ನಗರ ಠಾಣೆ ಪೊಲೀಸರಿಂದ ಆರು ಜನರನ್ನು ಈ ಪ್ರಕರಣದಲ್ಲಿ ಈವರೆಗೂ ಬಂಧಿಸಲಾಗಿದೆ.
ಹಲ್ಲೆಗೆ ಕಾರಣವೇನು?:
ಮುಸ್ಲಿಂ ಯುವಕರಿಂದ ಹಲ್ಲೆಗೆ ಒಳಗಾಗಿದ್ದ ಬೈಲಪ್ಪ ಎನ್ನುವ ವ್ಯಕ್ತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವರಿಗೆ ಬೈಕ್ ಅಲ್ಲಿ ಬೈಲಪ್ಪ ಡ್ರಾಪ್ ಮಾಡಿದ್ದ. ಈ ವೇಳೆ ಬೈಕ್ ಅಡ್ಡಗಟ್ಟಿ ಹದಿನೈದು ಜನರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಘಟನೆಯ ಬಗ್ಗೆ ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಜೈಲಿಗೆ ತಳ್ಳಲಾಗಿದೆ.
ಬಂಧಿತರು:
ಮೊಹಮದ್ ಸಲ್ಮಾನ್, ಮಹ್ಮದ್ ಆದಿಲ್, ಮಹ್ಮದ್ ರೆಹಾನ್, ಮಹ್ಮದ್ ಉಜೈರ್, ಮಹ್ಮದ್ ಫೈಜ್, ಮಹ್ಮದ್ ಆಸಿಫ್ ಬಂಧಿತರು.
