ಸುಳ್ಯ:ಅರಂತೋಡು ಎನ್ ಎಂ ಪಿ ಯು ಕಾಲೇಜು ಬಳಿ ಕೆ.ಎಸ್ ಆರ್ ಟಿ ಸಿ ಬಸ್ಸುಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಒರ್ವ ಮಹಿಳೆ ಮೃತ ಪಟ್ಟ ಘಟನೆ ನಡೆದಿದೆ. ಅರಂತೋಡು ಎನ್ ಎಂ ಪಿ ಯು ಕಾಲೇಜ್ ಬಳಿ, ಸುಳ್ಯ ದಿಂದ ಮಡಿಕೇರಿ ಕಡೆ ಹಾಗೂ ಮೈಸೂರು ಭಾಗದಿಂದ ಸುಳ್ಯಕ್ಕೆ ಆಗಮಿಸುತ್ತಿದ್ದ ಸರಕಾರಿ ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಾಳುಗಳಲ್ಲಿ ಕುಶಾಲನಗರದ ಮಹಿಳೆ ಒಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಕುಶಾಲನಗರ ಮೂಲದ ಪಾರ್ವತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
15 ಗಾಯಾಳುಗಳನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಯಲ್ಲಿ ಹಾಗೂ 5 ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.