ವಂಚಕನ ಮನೆಯೊಂದು ಮಾಯಾಲೋಕ
- ಸಮಗ್ರ ಸ್ಟೋರಿ
- ಸಿರಿವಂತ ಉದ್ಯಮಿಗಳಿಗೆ ಕೋಟಿಗಟ್ಟಲೆ ಪಂಗನಾಮ !
- ವಜ್ರ ಆಭರಣಗಳು ವಶ ವಿದೇಶಿ ಮದ್ಯಗಳ ಆಗರ
ಮಂಗಳೂರು: ಉದ್ಯಮಿಗಳಿಗೆ ನೂರಾರು ಕೋಟಿ ಸಾಲ ಕೊಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ ಮಾಡುತ್ತಿದ್ದ ಕಿಂಗ್ ಪಿನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಂಕನಾಡಿ ಬಜಾಲ್ ಬೊಲ್ಲಗಡ್ಡ ನಿವಾಸಿ ರೋಶನ್ ಸಲ್ಡಾನ (43 ) ಅಲಿಯಾಸ್ ರೋಹನ್ ಸಲ್ದಾನ ಬಂಧಿತ.
ಮಂಗಳೂರು ಹೊರವಲಯದ ಜಪ್ಪಿನಮೊಗರು ಎಂಬಲ್ಲಿನ ಐಷಾರಾಮಿ ಬಂಗಲೆಯ ಮೇಲೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಪೊಲೀಸರು ದಾಳಿ ನಡೆಸಿದ ವೇಳೆ ಆತ ವಾಸವಿದ್ದ ಮಂಗಳೂರಿನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಯ ರಹಸ್ಯಗಳು ಹೊರಬಿದ್ದಿವೆ.
ಆತ ಈ ಬಂಗಲೆಗೆ ಅನೇಕ ವಿದೇಶಿ ಯವತಿಯರನ್ನು ಕರೆಸಿಕೊಂಡು ಪಾರ್ಟಿ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ. ಗೆಸ್ಟ್ ರೂಮ್ನಲ್ಲಿ, ಫ್ರಿಡ್ಜ್ನಲ್ಲಿ ವಿದೇಶಿ ಮದ್ಯದ ಬಾಟಲ್ಗಳ ರಾಶಿಯೇ ಪತ್ತೆಯಾಗಿವೆ. ಅಲ್ಲದೆ, ಅಡಗಿಕೊಳ್ಳಲು ರಹಸ್ಯ ಕೋಣೆಯೊಂದೂ ಅಲ್ಲಿತ್ತು.
ಆಂಧ್ರ ಪ್ರದೇಶ ಮೂಲದ ಸಿಲ್ಕ್ ಸ್ಯಾರಿ ತಯಾರಿಕ ಕಂಪನಿ ಮಾಲೀಕ, ಸಾಲಕ್ಕಾಗಿ 2023ರಲ್ಲಿ ಬೆಂಗಳೂರಿನಲ್ಲಿ ಫೈನಾನ್ಸ್ ಕನ್ಸಲ್‌ಟೆನ್ಸಿ ನಡೆಸಿಕೊಂಡಿರುವ ವಿಮಲೇಶ್ ಎಂಬಾತನ ಬಳಿ
ಮೋಸ ಹೋಗಿದ್ದು ಅರಿವಾದ ಉದ್ಯಮಿ, ಕಳೆದ ವರ್ಷ ಜುಲೈ 16ರಂದು ಚಿತ್ರದುರ್ಗ ನಗರ ಠಾಣೆಗೆ ದೂರು ಕೊಟ್ಟಿದ್ದರು. ಆಗ ಈ ಇಬ್ಬರ ನಡುವೆ ಇದ್ದ ವಿಮಲೇಶ್ ಎಂಬಾತನನ್ನ ಮಂಗಳೂರಿನ ಪೊಲೀಸರು ಬಂಧಿಸಿದ್ದರು. ಆಗಲೇ ಈ ರೋಷನ್ನ ವಂಚನೆ ಬಯಲಾಗಿದೆ.
ರೋಹನ್, ದೇಶದ ದೊಡ್ಡ ದೊಡ್ಡ ಕುಳಗಳಿಗೆ ಗಾಳ ಹಾಕುತ್ತಿದ್ದ. ಐಷಾರಾಮಿ ವ್ಯಕ್ತಿಗಳು, ಉದ್ಯಮಿಗಳನ್ನ ಟಾರ್ಗೆಟ್ ಮಾಡುತ್ತಿದ್ದ. ಭೂ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಸಿ, ಮಂಗಳೂರಿನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಕುದುರಿಸುತ್ತಿದ್ದ.
ಮೋಸಕ್ಕೆ ಒಳಗಾದವರು ಹಣ ಕೇಳಿಕೊಂಡು ಮನೆಗೆ ಬಂದಾಗ ಈ ಕತರ್ನಾಕ್ ವಂಚಕ ಬೆಡ್ರೂಮ್ ಒಳಗೆ ಗುಪ್ತ ದ್ವಾರದಿಂದ ನಿರ್ಮಿಸಲಾಗಿದ್ದ ಅಡಗು ತಾಣದಲ್ಲಿ ಸೇರಿಕೊಳ್ಳುತ್ತಿದ್ದ ಹುಡುಕಿಕೊಂಡು ಬಂದವರು ಏನು ಸಿಗದೆ ಬರಿಗೈಯಲ್ಲಿ ವಾಪಸ್ ಆಗುತ್ತಿದ್ದರು.
ಹಿಂದೂ ಗುರೂಜಿ,ಬುದ್ಧನ ಮೂರ್ತಿ
ರೋಹನ್, ಕೈಸ್ತ ಸಮುದಾಯದವನಾದರೂ ಹಿಂದೂ ಗುರೂಜಿ ಫೋಟೋವನ್ನು ತನ್ನ ಮನೆಯಲ್ಲಿ ಹಾಕಿದ್ದಾನೆ. ಬುದ್ಧನ ಪ್ರಶಾಂತ ಮುದ್ರೆಯ ಮೂರ್ತಿಗಳು ಪತ್ತೆಯಾಗಿದೆ. ಆಫೀಸ್ ಲೈಬ್ರೆರಿಯಲ್ಲಿ ಬದುಕಲು ಕಲಿಯಿರಿ, ಸಾವರ್ಕರ್ ಪುಸ್ತಕಗಳು ಅಲಂಕರಿಸಿವೆ.
ಉತ್ತರ ಪ್ರದೇಶದ ಹಿಂದೂ ಗುರೂಜಿ ನೀಮ್ ಕರೋಲಿ ಬಾಬಾ ಫೋಟೋವನ್ನು ರೋಷನ್ ತನ್ನ ಕಚೇರಿಯಲ್ಲಿ ಹಾಕಿದ್ದಾನೆ. ಆ ಮೂಲಕ ಉತ್ತರ ಭಾರತದ ಬಹುಕೋಟಿ ಉದ್ಯಮಿಗಳನ್ನು ವಂಚನೆಗೆ ನಾನು ಬಾಬಾ ಭಕ್ತ ಅಂತ ನಂಬಿಸುತ್ತಿದ್ದ ಎನ್ನುವ ಸಂಶಯ ಮೂಡಿದೆ.
ಅಬಕಾರಿ ಕೇಸ್
: ಪೊಲೀಸರು ರೋಷನ್ ಸಲ್ದಾನನ ಮನೆಗೆ ದಾಳಿ ನಡೆಸಿದಾಗ ಮನೆಯ ಅಡಗುತಾಣದಲ್ಲಿ ಆತ ಪತ್ತೆಯಾಗಿದ್ದಾನೆ.
ಪೊಲೀಸರು ಮನೆ ತಪಾಸಣೆ ನಡೆಸಿದಾಗ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ರೂ 6,72,947/- ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ ದೊರೆತಿದೆ.
ಮಧ್ಯವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಸೆನ್ ಕ್ರೈಂ ಪೊಲೀಸ್ ಠಾಣಾ ಅ.ಕ್ರ. 39/2025 ಅಬಕಾರಿ ಕಾಯ್ದೆಯಂತೆ ಪ್ರಕರಣವನ್ನು ದಾಖಲಿಸಲಾಗಿದೆ.
ಚಿನ್ನ- ವಜ್ರಾಭರಣಗಳು
ಮನೆಯಿಂದ ದಾಖಲಾತಿಗಳನ್ನು, ಖಾಲಿ ಚೆಕ್ ಗಳನ್ನು ಹಾಗೂ 667 ಗ್ರಾಂ ಚಿನ್ನಭಾರಣಗಳು ಮತ್ತು ಅಂದಾಜು 2.75 ಕೋಟಿ ಮೌಲ್ಯದ ವಜ್ರದ ಉಂಗುರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ರೋಷನ್ ವಿರುದ್ದ ಚಿತ್ರದುರ್ಗ, ಮುಂಬೈ ಸೇರಿದಂತೆ ವಿವಿಧೆಡೆ ವಂಚನೆ ಪ್ರಕರಣಗಳು ದಾಖಲಾಗಿವೆ.
