CRIME NEWS

ಬಹುಕೋಟಿ ವಂಚಕ ಅರೆಸ್ಟ್: ಈತನ ಮನೆಯೊಂದು ಮಾಯಾಲೋಕ! ಜೆಪ್ಪಿನ ಮೊಗರು ಮನೆಗೆ ಮಂಗಳೂರು ಪೊಲೀಸರ ದಾಳಿ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತ್ರತ್ವ

Share

ಮಂಗಳೂರಿನಲ್ಲಿ #ಬಹುಕೋಟಿ ವಂಚಕ ಪೊಲೀಸ್ ಬಲೆಗೆ
ಮಂಗಳೂರು: ಸಾಲ ನೀಡುವುದಾಗಿ ಜಾಗ ವಿಕ್ರಯ ಮಾಡುವುದಾಗಿ ಹೇಳಿ ಶ್ರೀಮಂತ ಉದ್ಯಮಿಗಳಿಂದ ಹಣ ಪಡೆದು ಕೋಟಿಗಟ್ಟಲೆ ವಂಚಿಸುತ್ತಿದ್ದ ಬಹುಕೋಟಿ ವಂಚಕ ಜಪ್ಪಿನಮೊಗರು ನಿವಾಸಿ ರೋಹನ್ ಸಲ್ದಾನ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.

ಗುರುವಾರದ ತಡರಾತ್ರಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ
500 ಕೋಟಿ ವರೆಗೂ ಸಾಲ ಕೊಡುವ ಆಮಿಷ. ಬಲೆಗೆ ಬಿದ್ದವರಿಂದ 50 ಲಕ್ಷದಿಂದ ನಾಲ್ಕು ಕೋಟಿ ವರೆಗೆ ಹಣ ಪಡೆದು ಮಾಡಿ ಆಮೇಲೆ ಯಾರಿಗೂ ಕಾಣದಂತೆ ನಿಗೂಢವಾಗಿ ತಪ್ಪಿಸಿಕೊಳ್ಳುತ್ತಾನೆ.
ಈತನ ಮನೆಯಲ್ಲಿ ಒಂದೊಂದು ಗಿಡಗಳು ಮೂರು ಲಕ್ಷ, ನಾಲ್ಕು ಲಕ್ಷ ಐದು ಲಕ್ಷ ಬೆಲೆಬಾಳುವಂತಹುದು. ಈತನ ಒಂದೊಂದು ಶಾಂಪೇನ್ ಗಳು, ಕುಡಿತದ ಮಾದಕ ಪೇಯಗಳ ದಾಸ್ತಾನುಗಳಿವೆ.
3 ತಿಂಗಳ ವ್ಯವಹಾರ ಒಂದು ಖಾತೆಯಲ್ಲಿ 40 ಕೋಟಿ! ಇರುವುದು ಬೆಳಕಿಗೆ ಬಂದಿದೆ.

ಈತನ ಅಡಗುತಾಣ ಮಾಯಾಲೋಕವೇ ಒಂದು ಅದ್ಭುತ.
ಈತನ ಮನೆಯಲ್ಲಿ ಒಂದೊಂದು ಗಿಡಗಳು ಮೂರು ಲಕ್ಷ, ನಾಲ್ಕು ಲಕ್ಷ ಐದು ಲಕ್ಷ, ಈತನ ಒಂದೊಂದು ಶಾಂಪೇನ್ ಗಳು, ಕುಡಿತದ ಮಾದಕ ಪೇಯಾಗಳ ರೇಟ್ ಕೇಳಿದ್ರೆ ತಲೆ ತಿರುಗುತ್ತೆ ಒಮ್ಮೆ ವಿಡಿಯೋ ನೋಡಿ !
ಬಂದವರಿಗೆ ಕೋಟಿಗಟ್ಟಲೆಯ ಜಾಗ ತೋರಿಸ್ತಾನೆ. 500 ಕೋಟಿ 600 ಕೋಟಿ 400 ಕೋಟಿ ಸಾಲ ಕೊಡ್ತೇನೆ ಹೇಳುತ್ತಾನೆ. ಆರಂಭದಲ್ಲಿ ಕಮಿಷನ್, ಸ್ಟ್ಯಾಂಪ್ ಡ್ಯೂಟಿ ಹೇಳಿ ನಾಲ್ಕರಿಂದ ಐದು ಕೋಟಿ ವರೆಗೂ ಒಳಗೆ ಹಾಗುತ್ತಾನೆ.
,3 ತಿಂಗಳ ವ್ಯವಹಾರ ಒಂದು ಖಾತೆಯಲ್ಲಿ 40 ಕೋಟಿ! ಅನಧಿಕೃತ ಎಷ್ಟು ಇರಬಹುದು?
ಹಾಗಂತ ಇವನ ಐಷಾರಾಮಿ ಮನೆಗೆ ಇವನನ್ನು ಹುಡುಕಿಕೊಂಡು ಬಂದರೆ ಇರುವುದೇ ಇಲ್ಲ.
ಯಾಕೆಂದರೆ ಇವನ ಮನೆ ಅನ್ನೋದು ಸಾಮಾನ್ಯವಲ್ಲ. ಅದೊಂದು ಭವ್ಯ ದಿವ್ಯ ಬಂಗಲೆ. ಒಳಗಿಂದೊಳಗೆ ನೋಡಿದರೆ ಐಷಾರಾಮಿ ವ್ಯವಸ್ಥೆ.
ಎರಡು ಮೂರು hide out ಗಳು ಅಲ್ಲಲ್ಲಲ್ಲಿ ಸಿಸಿ ಕ್ಯಾಮೆರಾ ಗಳು.

ಆರೋಪಿಯ ಮನೆಯೊಳಗಿನ ಐಷಾರಾಮಿ ವಸ್ತುಗಳು

ಇವರನ್ನು ಹುಡುಕೊಂಡು ಹಣ ಕೇಳಿಕೊಂಡು ಜಾಗ ಕೇಳಿಕೊಂಡು ಬರ್ತಾರೆ.‌ ಬರುವ ಮಿಕಗಳನ್ನು ಸಿ ಸಿ ಕ್ಯಾಮೆರಾದಲ್ಲೇ ನೋಡಿ ತಾನು ಬೆಡ್ರೂಮ್ ನಿಂದ ಸೀದಾ ಗುಪ್ತ ಕೋಣೆಗೆ ಜಾರುತ್ತಾನೆ..
ಅವನ ರೂಮ್ನಲ್ಲಿ ಗೋಡೆಗಳಿದ್ದರೂ ಅದು ಕೆಲವೊಮ್ಮೆ ರಹಸ್ಯ ಕೋಣೆಯ ಬಾಗಿಲುಗಳು ಆಗಿರುತ್ತದೆ.
ಕಬೋರ್ಡ್ಗಳ ರೀತಿ ಕಾಣುತ್ತವೆ ಆದರೆ ಒಂದನ್ನ ತಟ್ಟಿದರೆ ಅದು ಇನ್ನೊಂದು ಕೋಣೆಯತ್ತ ನಿಗೂಢವಾಗಿ ಮೆಟ್ಟಿಲುಗಳನ್ನು ತೋರಿಸುತ್ತದೆ.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತಿದ್ದಾರೆ.

To Top