ಅಪ್ಪನಿಂದ ಪಾಶವಿ ಕೃತ್ಯ
ಮಗಳ ಆದಾಯದಲ್ಲಿ ಬದುಕುತ್ತಿದ್ದೀಯಾ ಅಂತಾ ಜನ ಲೇವಡಿ
ಗುಂಡಿಕ್ಕಿ ಕೊಂದ ಕಟುಕ ತಂದೆ
ಹೆತ್ತ ತಂದೆಯೇ ಟೆನ್ನಿಸ್ ಆಟಗಾರ್ತಿ ಯ ಗುಂಡಿಕ್ಕಿ ಜೀವ ತೆಗೆದ ಘಟನೆ ಹರಿಯಾಣದ ಗುರುಗ್ರಾಮ್ ಸೆಕ್ಟರ್ 75 ರಲ್ಲಿ ನಡೆದಿದೆ. ರಾಧಿಕ ಯಾದವ್ (25) ಅಪ್ಪನಿಂದಲೇ ಪ್ರಾಣ ಕಳೆದುಕೊಂಡವಳು.
ರಾಷ್ಟ್ರೀಯ ಟೆನಿಸ್ ಆಟಗಾರ್ತಿ:
ದೀಪಕ್ ಯಾದವ್ , ಮಗಳ ಜೀವ ಬಳಿ ಪಡೆದ ಅಪ್ಪ. ಪೊಲೀಸರಿಗೆ ಆರೋಪಿ ತಪ್ಪೊಪ್ಪಿಗೆ ನೀಡಿದ್ದಾನೆ. ಅದರಲ್ಲಿ ಮಗಳ ಆದಾಯ ಹಾಗೂ ಆಕೆಯ ಕ್ಯಾರೆಕ್ಟರ್ ಬಗ್ಗೆ ಸ್ಥಳೀಯರು ನಿಂದಿಸುತ್ತಿದ್ದರು. ಅಲ್ಲದೇ ಮಗಳ ಆದಾಯದಿಂದ ನಾನು ಜೀವ ಸಾಗಿಸುತ್ತಿದ್ದೇನೆ ಎಂದು ಗೇಲಿ ಮಾಡುತ್ತಿದ್ದರು. ಇದರಿಂದ ಅವಮಾನಕ್ಕೆ ಒಳಗಾಗಿ ಇಂಥ ಕೆಲಸ ಮಾಡಿದೆ. ನಾನು ಹಲವು ಬಾರಿ ಟೆನ್ನಿಸ್ ಅಖಾಡಮಿ ಮುಚ್ಚುವಂತೆ ಕೇಳಿಕೊಂಡಿದ್ದೆ. ಅದಕ್ಕೆ ಆಕೆ ಒಪ್ಪಿರಲಿಲ್ಲ ಅಂತಲೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಮಗಳು ಮಾಡಿದ ರೋಮ್ಯಾಂಟಿಕ್ ವಿಡಿಯೋ ನೋಡಿ ಆಕ್ರೋಶಗೊಂಡ ಅಪ್ಪ ಈ ಕೃತ್ಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅದರ ಪ್ರಕಾರ, ಚಿಕ್ಕಪ್ಪ ಕುಲ್ದೀಪ್ ಯಾದವ್, ಆಕೆಯ ಬಗ್ಗೆ ಪದೇ ಪದೆ ದೂರು ನೀಡುತ್ತಿದ್ದ. ಆದರೂ ರಾಧಿಕಾ ಯಾದವ್ ವಿವಾದಿತ ಅಕಾಡೆಮಿಯನ್ನು ಮುಂದುವರಿಸಿದ್ದಕ್ಕೆ ತಂದೆ ಬೇಸತ್ತುಗೊಂಡಿದ್ದ. ಇದೇ ಕೋಪದಲ್ಲಿ ಗುಂಡು ಹಾರಿಸಿದ್ದಾನೆ. ಅಲ್ಲದೇ ಕೌಟುಂಬಿಕ ಕಲಹ ಕೂಡ ಇತ್ತು ಎಂದು ದಾಖಲಾಗಿದೆ…!
. ಮೊದಲ ಮಹಡಿಯ ಕಿಚನ್ನಲ್ಲಿ ರಾಧಿಕಾ ಆಹಾರ ತಯಾರು ಮಾಡುತ್ತಿದ್ದಾಗ ಗುಂಡು ಹಾರಿಸಿದ್ದಾನೆ. ದೀಪಕ್, ಪರವಾನಗಿ ಇರುವ ಗನ್ ಹೊಂದಿದ್ದ. ಅದರಲ್ಲೇ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬದುಕುಳಿಯಲಿಲ್ಲ.
ರಾಧಿಕಾ ಟೆನ್ನಿಸ್ನಲ್ಲಿ ನ್ಯಾಷನಲ್ ಲೇವಲ್ವರೆಗೆ ಆಡಿದ್ದರು. ಹಲವು ಟ್ರೋಫಿಗಳಲ್ಲಿ ಗೆಲುವು ಸಾಧಿಸಿದ್ದರು. ಪಂದ್ಯದ ವೇಳೆ ಭುಜಕ್ಕೆ ಗಂಭೀರವಾಗಿ ಗಾಯಮಾಡಿಕೊಂಡಿದ್ದಳು. ಇದರಿಂದ ಆಡೋದನ್ನು ನಿಲ್ಲಿಸಿದ್ದಳು. ನಂತರ ಟೆನ್ನಿಸ್ ಅಖಾಡೆಮಿ ತೆರೆದು, ಮಕ್ಕಳಿಗೆ ತರಬೇತಿ ನೀಡುತ್ತಿದ್ದಳು ಎನ್ನಲಾಗಿದೆ.
