DAKSHINA KANNADA

ಶುಭ್ರ ಶಿಕ್ಷಣದ ಸೂರ್ಯ ಕಿರಣ💢 ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜ್:

Share

 

ಕಾರ್ಕಳದ ಹಸಿರು ತಾಣಗಳ ನಡುವೆ, ಸಾಣೂರು ಗ್ರಾಮದ ಶಾಂತ ಪರಿಸರದಲ್ಲಿ ತಲೆಯೆತ್ತಿರುವ ರಾಜೇಶ್ವರಿ ನ್ಯಾಷನಲ್ ಸ್ಕೂಲ್ & ಪಿಯು ಕಾಲೇಜ್ ಎಂಬುದು ಶಿಕ್ಷಣದ ದೀಪಸ್ಥಂಭ ದಂತೆ ಕಾಣುತ್ತದೆ.

 

ರಾಜೇಶ್ವರಿ ಎಜುಕೇಶನ್ ಫೌಂಡೇಶನ್‌ ವಸತಿ ಸಹಿತ ಶಾಲೆ- ಪಿಯುಕಾಲೇಜು, ಇಲ್ಲಿ ಪಟೇಲ್ ಮುದ್ದಣ್ಣ ಶೆಟ್ಟಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವೂ ಕೂಡ ಲಭ್ಯ.
ಇಲ್ಲಿ ಶಿಕ್ಷಣ ಕೇವಲ ಪುಸ್ತಕಗಳಲ್ಲಿ ಸೀಮಿತವಲ್ಲ; ಅದು ಮಕ್ಕಳ ಚಿತ್ತವನ್ನು ಅರಳಿಸುವ, ಮುಂದಿನ ಜನಾಂಗವನ್ನು ಸಮಾಜಮುಖಿಯಾಗಿ ಬೆಳೆಸುವ ಸಂಪೂರ್ಣ ಸಮಗ್ರ ಶಿಕ್ಷಣದ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.


1ನೇ ತರಗತಿಯಿಂದ ಪಿಯುಸಿ ತನಕದ ಶಿಕ್ಷಣವನ್ನು ನೀಡುವ ಈ ಸಂಸ್ಥೆ, ಅಕಾಡೆಮಿಕ್ ಉತ್ಕೃಷ್ಟತೆಯೊಂದಿಗೆ ಭಾರತೀಯ ಮೌಲ್ಯಗಳನ್ನು ಸಮನ್ವಯಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರಾಗಿ ರೂಪಿಸುತ್ತದೆ.

ಕರಾವಳಿ ಶಿಕ್ಷಣದಲ್ಲಿ ಉತ್ಕೃಷ್ಟ ಸ್ಥಾನದಲ್ಲಿದೆ ಅದರಲ್ಲಿಯೂ ಕಾರ್ಕಳ ಮೂಡಬಿದರೆ ಪರಿಸರ ದಲ್ಲಿ ಶಿಕ್ಷಣದ ಮಟ್ಟ ಅತಿ ಉತ್ಕೃಷ್ಟವಾಗಿದೆ.
ಈ ವಿದ್ಯಾಸಂಸ್ಥೆಯಲ್ಲಿ 2025-26 ಸಾಲಿನ ದಾಖಲಾತಿಗಳು ಆರಂಭವಾಗಿವೆ –
ನಿಮ್ಮ ಮಕ್ಕಳ ಬದುಕಿನಲ್ಲಿ ಇದೊಂದು ಉತ್ತಮ ಆಯ್ಕೆಯಾಗಬಹುದು! ಹೆಚ್ಚಿನ ಮಾಹಿತಿಗೆ: 8095341169 ಅಥವಾ8762119917 ಸಂಪರ್ಕಿಸಿ. ಶಿಕ್ಷಣದ ಬೆಳಕಿನಲ್ಲಿ, ನಿಮ್ಮ ಮಕ್ಕಳ ಭವಿಷ್ಯ ಖಂಡಿತ ಬೆಳಗುತ್ತದೆ!

ಶಿಕ್ಷಣ ಬೋಧನಾ ಕ್ರಮ:
ಜ್ಞಾನದ ಜೊತೆಗೆ ಕೌಶಲ್ಯದ ಬೆಳವಣಿಗೆ, ಇಲ್ಲಿನ ಶಿಕ್ಷಣ ಕ್ರಮವು ರಾಜ್ಯ ಮತ್ತು ಸಿಬಿಎಸ್‌ಇ ಸಿಲೆಬಸ್‌ ಆಧರಿಸಿದೆ, ಮಕ್ಕಳ ಕೌಶಲ್ಯಗಳನ್ನು ಬಲಪಡಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಕೇವಲ ಪರೀಕ್ಷಾ ತಯಾರಿಯಲ್ಲ, ಬದಲಿಗೆ ಚಿಂತನಾತ್ಮಕ ವಿಷನ್, ಕೌಶಲ್ಯ ಅಭಿವೃದ್ಧಿ ಮತ್ತು ಜೀವನ ಮೌಲ್ಯಗಳನ್ನು ಬೆಳೆಸುವ ಸಮಗ್ರ ವ್ಯವಸ್ಥೆ ಶಿಕ್ಷಣದೊಳಗೆ ಅಡಕವಾಗಿದೆ.

ನೃತ್ಯ

-ಸಿಲಬಸ್ ಮತ್ತು ಕೋರ್ಸ್‌ಗಳು
ಮೂಲ ವಿಷಯಗಳಲ್ಲಿ ಸಮಗ್ರ ಜ್ಞಾನ ನೀಡುವ. ಪಿಯು ಕಾಲೇಜಿನಲ್ಲಿ ಸೈನ್ಸ್ (ಪಿಸಿಎಂಬಿ & ಪಿಸಿಎಂಸಿ) ಮತ್ತು ಕಾಮರ್ಸ್ ವಿಭಾಗಗಳು ಲಭ್ಯ.


  1. ಇದರೊಂದಿಗೆ ಮೌಲ್ಯ ವರ್ದಿತ ಕೋರ್ಸ್‌ಗಳು (ವ್ಯಾಲ್ಯೂ ಅಡೆಡ್ ಕೋರ್ಸ್‌ಗಳು) ವೃತ್ತಿಪರ ಜಗತ್ತಿನ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲ್ಪಟ್ಟಿವೆ.
    -ಬೋಧನಾ ವಿಧಾನಗಳು: ಅನುಭವಿ ಮತ್ತು ಕೌಶಲ್ಯಸಹಿತದ ಶಿಕ್ಷಕರು ಇಲ್ಲಿವರು. ಇಂಟರಾಕ್ಟಿವ್ ಕ್ಲಾಸ್‌ರೂಮ್‌ಗಳು, ಮಾಡರ್ನ್ ತಂತ್ರಜ್ಞಾನ (ಎಲ್‌ಸಿಡಿ ಪ್ರಾಜೆಕ್ಟರ್‌ಗಳು, ಡಿಜಿಟಲ್ ಟೂಲ್‌ಗಳು) ಬಳಸಿ ಕಲಿಕೆಯನ್ನು ಆಕರ್ಷಕಗೊಳಿಸುತ್ತಾರೆ. ಪುರಸ್ಕಾರಗಳು, ಗೋಲ್ ಸೆಟ್ಟಿಂಗ್, ಮೆಂಟರ್‌ಶಿಪ್ ಮೂಲಕ ಬೆಳವಣಿಗೆ ಮೈಂಡ್‌ಸೆಟ್ ಬೆಳೆಸುತ್ತಾರೆ. ವಿದ್ಯಾರ್ಥಿಗಳಿಗೆ ಮತ್ತು ರಕ್ಷಕರಿಗೆ ಫೀಡ್‌ಬ್ಯಾಕ್ ನೀಡಿ ಪ್ರೇರಣೆಯನ್ನು ಹೆಚ್ಚಿಸುತ್ತಾರೆ. ಇದು ಅಂತರರಾಷ್ಟ್ರೀಯ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡೇ ಸರಳ ಮತ್ತು ಸುಲಭವಾಗಿ ಕಲಿಯುವ ವಾತಾವರಣವನ್ನು ಸೃಷ್ಟಿಸಿದೆ.


ವಿಶೇಷ ತರಬೇತಿ: ನೀಟ್ (ಯುಜಿ), ಜೆಇಇ (ಮೇನ್ಸ್+ಅಡ್ವಾನ್ಸ್ಡ್), ಕೆಸಿಇಟಿ, ಒಲಿಂಪಿಯಾಡ್‌ಗಳು, ಎನ್‌ಟಿಎಸ್‌ಇ, ಸಿಎ, ಸಿಎಸ್ ಫೌಂಡೇಶನ್, ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆಗಳಿಗೆ ಫೌಂಡೇಶನ್ ಕೋರ್ಸ್‌ಗಳು. ಗಣಿತ ಮತ್ತು ವಿಜ್ಞಾನದಲ್ಲಿ ಸೂಕ್ಷ್ಮ ಅಧ್ಯಯನ ನೀಡಲಾಗುತ್ತದೆ, ವೃತ್ತಿ ಆಯ್ಕೆಯಲ್ಲಿ ಮಾರ್ಗದರ್ಶನ ನೀಡುತ್ತದೆ.

ಈ ಬೋಧನಾ ಕ್ರಮವು ವಿದ್ಯಾರ್ಥಿಗಳನ್ನು ಕೇವಲ ವಿಷಯಗಳಲ್ಲಿ ತೇರ್ಗಡೆ ಮಾಡುವ ತರಗತಿಗಳನ್ನು ಪಾಸ್ ಮಾಡುವ ಕೇವಲ ಉದ್ದೇಶವನ್ನು ಇಟ್ಟುಕೊಳ್ಳದೆ, ಬದುಕಿನಲ್ಲಿ ಸಮಸ್ಯೆ ಪರಿಹಾರ ಮಾಡುವ, ಸ್ವತಂತ್ರ ಸ್ವಾವಲಂಬಿ ಚಿಂತನೆಯ ಧೈರ್ಯವಂತ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ.

ಮೂಲಸೌಕರ್ಯಗಳು:
-ಕ್ಲಾಸ್‌ರೂಮ್‌ಗಳು: ವಿಶಾಲವಾದ ಎ/ಸಿ ಸೌಲಭ್ಯಗಳೊಂದಿಗೆ, ಚೆನ್ನಾಗಿ ಬೆಚ್ಚಗಿನ, ಆಧುನಿಕ ಗ್ಯಾಡ್ಜೆಟ್‌ಗಳು, ಎಲ್‌ಸಿಡಿ ಪ್ರಾಜೆಕ್ಟರ್‌ಗಳು, ಬ್ಲ್ಯಾಕ್/ವೈಟ್ ಬೋರ್ಡ್‌ಗಳು. ಡಸ್ಟ್-ಫ್ರೀ ಚಾಲ್ಕ್‌ಗಳು ಮತ್ತು ಆರಾಮದಾಯಕ ಫರ್ನಿಚರ್‌ಗಳೊಂದಿಗೆ ಕಲಿಕೆಗೆ ಸೂಕ್ತವಾಗಿ ರಚಿಸಲಾಗಿದೆ.

-ಲ್ಯಾಬ್‌ರೇಟರಿಗಳು: ಸೈನ್ಸ್ ಮತ್ತು ಕಂಪ್ಯೂಟರ್ ಲ್ಯಾಬ್‌ಗಳು ಆಧುನಿಕ ಸಾಧನಗಳೊಂದಿಗೆ ಸರ್ವ ಸಜ್ಜಿತವಾಗಿದೆ.
-ಕ್ರೀಡಾ ಸೌಲಭ್ಯಗಳು: 2೦೦ ಮೀಟರ್ ಸ್ಪೋರ್ಟ್ಸ್ ಟ್ರ್ಯಾಕ್, ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್, ಬಾಸ್ಕೆಟ್‌ಬಾಲ್, ಟೇಬಲ್ ಟೆನಿಸ್ ಇತ್ಯಾದಿ. ದೈಹಿಕ ಫಿಟ್‌ನೆಸ್‌ಗೆ ಉತ್ತಮ ಆಟದ ಅಂಗಳ.
-ವೈದ್ಯಕೀಯ ಸೌಲಭ್ಯ: 24/7 ಆನ್-ಕ್ಯಾಂಪಸ್ ಫೆಸಿಲಿಟಿ, ನಿತ್ಯವೂ ಡಾಕ್ಟರ್ ಸಂದರ್ಶನ, ತುರ್ತು ಸಂದರ್ಭಗಳಿಗೆ ಡಾಕ್ಟರ್ ಸೇವೆಯು ಅಲ್ಲೇ ಲಭ್ಯತೆ ಇರುವಂತೆ ನೋಡಿಕೊಳ್ಳಲಾಗುತ್ತದೆ..
ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ: ಜಿಪಿಎಸ್ ಟ್ರ್ಯಾಕಿಂಗ್, ಸಿಸಿಟಿವಿ ಸಹಿತದ ಬಸ್‌ಗಳು, ಅನುಭವಿ ಚಾಲಕರು ಇಲ್ಲಿದ್ದಾರೆ.
– ಹಾಸ್ಟೆಲ್‌ಗಳು: ಶಾಂತ ಸುತ್ತಲಿನಲ್ಲಿ ವಿಶಾಲ ಕಟ್ಟೋಣಗಳಿವೆ, ಸಿಸಿಟಿವಿ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳು. ಪೌಷ್ಟಿಕ ಆಹಾರಗಳು (ವೆಜ್ & ನಾನ್-ವೆಜ್), ಸ್ವಚ್ಛ ನೀರು, ನಿಯಮಿತ ಆರೋಗ್ಯ ಪರೀಕ್ಷೆಗಳು. ಅರ್ಹ ವಾರ್ಡನ್‌ಗಳು 24/7 ನೆರವು ನೀಡುತ್ತಾರೆ, ಮಾನಸಿಕ ಆರೋಗ್ಯಕ್ಕೂ ಒತ್ತು ನೀಡಲಾಗುತ್ತದೆ.

ಅಕಾಡೆಮಿಕ್‌ ಶಿಕ್ಷಣದ ಜೊತೆ ಭಾರತೀಯ ಮೌಲ್ಯಗಳು, ಧರ್ಮ, ಸಮುದಾಯ ಸೇವೆ. ಯೋಗ, ಧ್ಯಾನ, ಸ್ಕೇಟಿಂಗ್, ಸ್ವಿಮ್ಮಿಂಗ್, ಹಾರ್ಸ್ ರೈಡಿಂಗ್, ಕಾರಟೆ, ಭಾರತೀಯ ನೃತ್ಯ-ಸಂಗೀತ ತರಗತಿಗಳು. ಕನ್‌ಸ್ಟ್ರಕ್ಟಿವ್ ಔಟಿಂಗ್‌ಗಳು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕನನ್ನಾಗಿ ಬೆಳೆಸಲು ಸಹಕಾರಿಯಾಗಿವೆ.


.
ಕ್ಯಾರಿಯರ್ ಗೈಡನ್ಸ್: ಅರ್ಹ ಕೌನ್ಸೆಲರ್‌ಗಳು ಸಕಾಲದಲ್ಲಿ ವೃತ್ತಿ ಆಯ್ಕೆಯಲ್ಲಿ ಮಾರ್ಗದರ್ಶನ ನೀಡುತ್ತಾರೆ.

ಎಷ್ಟೇ ಸೌಲಭ್ಯಗಳಿದ್ದರೂ ಸುರಕ್ಷತೆ ಅತಿ ಆವಶ್ಯಕ.: ಇದಕ್ಕಾಗಿ ಸಿಸಿಟಿವಿ ಸರ್ವೇಲನ್ಸ್, ಎಲೆಕ್ಟ್ರಾನಿಕ್ ಆಕ್ಸೆಸ್ ಕಂಟ್ರೋಲ್, ರಿಯಲ್-ಟೈಮ್ ಮಾನಿಟರಿಂಗ್. ಎಲ್ಲಾ ಸ್ಥಳಗಳಲ್ಲಿ ಸುರಕ್ಷಾ ಮಾನದಂಡಗಳು ಅಳವಡಿಸಲಾಗಿದೆ.

 

To Top