DAKSHINA KANNADA

ಡಿ.5 ರಂದು ಸಾಣೂರು ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಕೃಷಿ ಉಪನ್ಯಾಸ, ವಿಚಾರಗೋಷ್ಠಿ

Share

ಸಾಣೂರು ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಕೃಷಿ ಉಪನ್ಯಾಸ, ವಿಚಾರಗೋಷ್ಠಿ

ಮೂಡುಬಿದಿರೆ: ಹಸಿರು ಕ್ರಾಂತಿಯ ಹರಿಕಾರ ಡಾ. ಸ್ವಾಮಿನಾಥನ್ ಅವರ ಕೃಷಿ ಸಾಧನೆಗಳ ವಿವರಿಸುವ ಉಪನ್ಯಾಸ ಸಾಣೂರು ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಡಿ. 5ರಂದು ನಡೆಯಲಿದೆ.

ರಾಜೇಶ್ವರಿ ವಿದ್ಯಾ ಸಂಸ್ಥೆಯು ಮೂಡಬಿದ್ರೆ ಸವಿ ಫೌಂಡೇಶನ್ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಿದೆ.
ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರಾಮಕೃಷ್ಣ ಶರ್ಮ ಲಾಭದಾಯಕ ಕೃಷಿಯ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಪೆರ್ವಾಜೆ ಶಾಲೆಯ ಶಿಕ್ಷಕಿ ಆಸ್ಮಾ ಭಾನು ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ವಿಚಾರಗೋಷ್ಠಿ ಆಯೋಜಿಸಲಾಗಿದೆ
ಎಂದು ರಾಜೇಶ್ವರಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, ಸವಿ ಫೌಂಡೇಶನ್ ಅಧ್ಯಕ್ಷ ಡಾ. ಸಂದೀಪ ನಾಯಕ ತಿಳಿಸಿದ್ದಾರೆ.

To Top