ವೀ ವನ್ ಅಕ್ವಾ ಸೆಂಟರ್ ನ 24 ಈಜು ಪಟುಗಳು ರಾಷ್ಟ್ರಮಟ್ಟಕ್ಕೆ
ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ಇದರ ಆಶ್ರಯದಲ್ಲಿ 69 ನೇ ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ಈಜು ಸ್ಪರ್ಧೆ ದಿನಾಂಕ ನವಂಬರ್ 30 ರಿಂದ ಡಿಸೆಂಬರ್ 5 ರ ವರೆಗೆ ಬಾಲಕರ ವಿಭಾಗದಲ್ಲಿ ಹಾಗೂ ಡಿಸೆಂಬರ್ 12 ರಿಂದ 17 ರವರೆಗೆ ಬಾಲಕಿಯರ ವಿಭಾಗದಲ್ಲಿ ಈಜು ಹಾಗು ಡೈವಿಂಗ್ ಸ್ಪರ್ಧೆ ನಡೆಯಲಿದೆ.
ಈ ಸ್ಪರ್ಧೆ ವಯೋಮಾನ 19, 17 ಹಾಗೂ 14ರ ವಿಭಾಗದಲ್ಲಿ ಜರಗಲಿದೆ.
ಈ ರಾಷ್ಟ್ರಮಟ್ಟದ ಸ್ಪರ್ಧೆಗೆ, ದಕ್ಷಿಣ ಕನ್ನಡದ ಅತ್ಯುತ್ತಮ ಈಜು ಕೇಂದ್ರಗಳಲ್ಲಿ ಒಂದಾದ ವೀ ವನ್ ಅಕ್ವಾ ಸೆಂಟರ್ ನಲ್ಲಿ ತರಬೇತಿ ಪಡೆದ 24 ಈಜುಪಟುಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈಜು ಪಟುಗಳ ವಿವರ ಈ ರೀತಿ ಇದೆ.
*ಬಾಲಕರ ವಿಭಾಗ*
ನೈತಿಕ್ N, ಸ್ನಿತಿಕ್ ಎನ್, ಪ್ರಹ್ಲಾದ್ ಶೆಟ್ಟಿ, M ತೀರ್ಧು ಸಾಮದೇವ್, M ಯಜ್ಞ ಸಾಯ್, S ಕಾರ್ತಿಕೇಯ.
ತನಯ್ K
*ಬಾಲಕಿಯರ ವಿಭಾಗ*
ರಿಯಾನ್ನ ಧೃತಿ ಫರ್ನಾಂಡಿಸ್, ಶ್ರಾವ್ಯ ಕೆ, ಅಲಿಸ್ಸಾ ಸ್ವೀಡಲ್ ರೇಗೊ, ರೆಬೆಕಾ ಮರಿಯ ಡಿ ಕುನ್ಹಾ, ಲಿಪಿಕಾ S, N ಪಾವನಿ ಸರಯೂ, ಸೈನಾ ಪಾಂಚೋಲಿ, ಕಾಗಿತಾ ಲಾಸ್ಯ ಶ್ರೀ, ದೇವಿಕಾ M, ಸಾನ್ವಿ ಕೆ, ಅನರ್ಘ್ಯ ಅಶೋಕ್, ಅನನ್ಯ ಅಶೋಕ್,
ಶ್ವಿತಿ ದಿವಾಕರ್,
ಡಿಸೆಂಬರ್ 18 ರಿಂದ 25 ರವರೆಗೆ ತಮಿಳುನಾಡಿನ ಚಂಗಾಲಾಪಟ್ಟು ನಲ್ಲಿರುವ ಎಸ್ ಆರ್ ಎಂ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಇದರ ಆಶ್ರಯದಲ್ಲಿ ಜರಗಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಎಕ್ವಾಟಿಕ್ ಚಾಂಪಿಯನ್ಶಿಪ್ 20 25 ರಲ್ಲಿ ಈ ಕೆಳಗಿನ ಈಜು ಪಟುಗಳು ಅರ್ಹತಾ ಸಮಯವನ್ನು ನೀಡಿ ನಾಲ್ಕು ಮಂದಿ ಆಯ್ಕೆಯಾಗಿದ್ದಾರೆ
ಅಲಿಸ್ಟರ್ ಸ್ಯಾಮ್ಯುಯೆಲ್ ರೇಗೊ, ಗಗನ್ ಜಿ ಪ್ರಭು, ಜಗದೀಶ, ಆದಿದೇವ ಪಿ ಪ್ರದೀಪ್.

ಈ ಎಲ್ಲಾ ಈಜುಪಟುಗಳು ವೀ ವನ್ ಅಕ್ವಾ ಸೆಂಟರ್ ನ ತರಬೇತಿ ಕೇಂದ್ರಗಳಾದ ಮಂಗಳೂರಿನ ಏಮ್ಮೆಕೆರೆಯಲ್ಲಿರುವ ಸ್ಮಾರ್ಟ್ ಸಿಟಿ ಈಜು ಕೊಳ, ಸಂತ ಅಲೋಷಿ ಯಸ್ ಕಾಲೇಜಿನ ಈಜುಕೊಳ, ಮಂಗಳೂರು ಮಹಾನಗರ ಪಾಲಿಕೆ ಈಜುಕೊಳ, ಉಡುಪಿ ಅಜ್ಜರಕಾಡಿನಲ್ಲಿರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಈಜುಕೊಳ, ಕಾರ್ಕಳ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಬಳಿ ಇರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಈಜುಕೊಳ ಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇವರಿಗೆ ಮುಖ್ಯ ತರಬೇತುದಾರರಾದ ಶ್ರೀ ಲೋಕರಾಜ್ ವಿಟ್ಲ ಹಾಗೂ ಶ್ರೀ ಅಭಿಲಾಶ್ ಮತ್ತು ತರಬೇತುದಾರರಾದ ಸ್ಕಂದ, ಸುಧೀನ್ ರಾಜ್ ಶೆಟ್ಟಿ, ಆರೋಮಲ್, ಗಗನ್ ಜಿ ಪ್ರಭು ಸಂಜು, ಸಂಜೀವ್ ಉಳ್ವೇಕರ್ ಇವರಲ್ಲಿ ತರಬೇತಿ ಪಡೆದಿದ್ದಾರೆ
ಸಂಸ್ಥೆಯ ನಿರ್ದೇಶಕರಾದ ಶ್ರೀ ನವೀನ್ ಹಾಗೂ ಶ್ರೀಮತಿ ರೂಪ ಜಿ ಪ್ರಭು ಇವರು ವಿಜೇತರನ್ನು ಅಭಿನಂದಿಸಿದ್ದಾರೆ.

