#ಕನಕನ_ಕಿಂಡಿಯೂ #ನವಗ್ರಹ_ಕಿಂಡಿಯೂ
ದಾನಿ #ವಿಜಯ_ಮಲ್ಯ ಎಲ್ಲಿ ಹೋದರು?
ಕೀರ್ತಿ ಶೇಷ ಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಪಾದರ ನಾಲ್ಕನೇ ಪರ್ಯಾಯ ಅವಧಿಯಲ್ಲಿ ಉದ್ಯಮಿ ವಿಜಯಮಲ್ಯ ಅವರು ಉಡುಪಿ ಶ್ರೀ ಕೃಷ್ಣ ಮಠದ ನವಗ್ರಹ ಕಿಂಡಿಗೆ ಸ್ವರ್ಣ #ಖಚಿತ ಕವಚ ಮಾಡಿಸಿದ್ದರು.
ಆಗ ನವಗ್ರಹ ಕಿಂಡಿ ಎಂದು ಕರೆಯುವುದಕ್ಕೆ ಆಕ್ಷೇಪ ವ್ಯಕ್ತವಾದಾಗ ಅದಕ್ಕೆ ಕನಕ ನವಗ್ರಹ ಕಿಂಡಿ ಎಂದೇ ಪೇಜಾವರ ಶ್ರೀಗಳು ನಾಮಕರಣ ಮಾಡಿದರು.
ಪ್ರಮೋದ್ ಮಧ್ವರಾಜ್ ಅವರು ಕನಕ ಗೋಪುರದ ಬಳಿಯ ಕನಕನ ಕಿಂಡಿಗೆ ಸ್ವರ್ಣ #ಲೇಪಿತ ಕವಚ ಮಾಡಿಸಿದ್ದಾರೆ! ಇಲ್ಲಿ ಉದ್ದನೆಯ ಮೂರು ಕಿಂಡಿಗಳಿವೆ.
ಇದಕ್ಕೆ ಕನಕನ ಕಿಂಡಿ ಅನ್ನಬಹುದು. ಇಲ್ಲ ಪೇಜಾವರ ಶ್ರೀಗಳು ಹಿಂದೆ ಘೋಷಣೆ ಮಾಡಿದಂತೆ, ಯಾರಿಗೂ ಬೇಸರ ಆಗಬಾರದು ಇದಕ್ಕೂ ನವಗ್ರಹ ಕನಕನ ಕಿಂಡಿ ಅಂತ ಕರೆಯಬಹುದು. ಅವರವರ ಭಾವಕ್ಕೆ ಅವರವರ ಭಕ್ತಿಗೆ.
ಬಹುಶಃ ಮಹಾದಾನಿ ವಿಜಯಮಲ್ಯರು ಕನಕನ ಕಿಂಡಿಗೆ ಸ್ವರ್ಣ ಖಚಿತ ಕವಚ ಮಾಡಿಸಿದ್ದು ಯಾರಿಗೂ ನೆನಪಿಲ್ಲ! (ಆದರೆ ಪಾಪ ಅವರು #ದಿವಾಳಿ ಯಾಗಿರುವುದು ಎಲ್ಲರಿಗೂ ನೆನಪಿದೆ).
ಇದೇ ರೀತಿ ಒಳಭಾಗದಲ್ಲಿ ತೀರ್ಥ ಮಂಟಪಕ್ಕೆ ಸ್ವರ್ಣ ಲೇಪನ ಒಬ್ಬರು ಮಹಾದಾನಿ ಮಾಡಿಸಿದ್ದಾರೆ. ಅವರ ಹೆಸರು ಕೂಡ ಪ್ರಚಾರಕ್ಕೆ ಬಂದಿಲ್ಲ.
ಆದರೆ ಅದೃಷ್ಟ ನೋಡಿ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನದಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರು ಈಗ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯಲಿದೆ.
ನೆನಪಿರಲಿ.. ಈ ಸಣ್ಣಪುಟ್ಟ ಅನುಮಾನ ಅವಮಾನ ಅದು ಯಾವುದು ನೆನಪಿನಲ್ಲಿ ಉಳಿಯುವುದಿಲ್ಲ. ಕನಕನ ಕಿಂಡಿಗೆ ಸ್ವರ್ಣ ಲೇಪನದ ಸಂದರ್ಭ ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕು ಎನ್ನುವ ಆಶಯ ಆಸೆ ಇದ್ದದ್ದು ಕೂಡ ಹೌದು.
ಕೃಷ್ಣಮಠದಲ್ಲಿ ಮಧ್ವರಾಜ್ ವಂಶಸ್ಥರ ಸೇವೆ ಅನನ್ಯ. ಇವರ ಭಕ್ತಿಯು ಅಚಲ. ಈ ಬಗ್ಗೆ ಪ್ರಶ್ನೆ ಇಲ್ಲ. ಇದನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ.
ಆದರೆ ಈ ಕೃಷ್ಣಮಠದ ಕ್ಷೇತ್ರದವರು ಈ ಕಾರ್ಯಕ್ರಮ ಸಂಘಟಿಸಿ ಮಠದ ಸಂಘಟಕರೆಲ್ಲ ಕೆಳಗೆ ಕುಳಿತುಕೊಂಡಿರುವುದನ್ನು ನಾವು ನೆನಪಿಸಿಕೊಳ್ಳಬೇಕು. ಅಂಥವರ ಮೇಲೆ ಮೊಗವೀರ ಮುಖಂಡನಿಗೆ ಅನ್ಯಾಯ ಆಗಿದೆ ಎಂಬ ಅವಮಾನದ ಭಾರವನ್ನು ಹೊರಿಸುವುದು ತರವಲ್ಲ ಎನ್ನುವುದಷ್ಟೇ ನನ್ನ ಉದ್ದೇಶ. ಇಲ್ಲಿಯೂ ರಾಜಕೀಯ ಮಾಡಬಾರದು ಎನ್ನುವುದು ನನ್ನ ಆಶಯ.


