ಭಜನೆಯಿಂದ ದೈವಿಕ ಸಾಕ್ಷಾತ್ಕಾರ ಶ್ರೀಧರ ಹೊಳ್ಳ ಭಜನೆಗಳು ಮನಸ್ಸನ್ನು ಶಾಂತ ಗೊಳಿಸಲು ಭಕ್ತಿಯನ್ನು ಹೆಚ್ಚಿಸಲು ,ಅಲ್ಲದೆ ದೈವಿಕ ಸಾಕ್ಷಾತ್ಕಾರವನ್ನು ಪಡೆಯಲು ಸಹಕಾರಿಯಾಗುತ್ತದೆ. ಎಂದು ಕೂಟ ಮಹಜಗತ್ತು ಮಂಗಳೂರು ಅಂಗಸಂಸ್ಥೆಯ ಅಧ್ಯಕ್ಷ ಭರತಾಂಜಲಿಯ ಗುರು ಶ್ರೀಧರ ಹೊಳ್ಳ ಅಭಿಪ್ರಾಯ ಪಟ್ಟರು. ಅವರು ಕೂಟ ಮಹಾ ಜಗತ್ತು ಮಂಗಳೂರು ಅಂಗ ಸಂಸ್ಥೆ ವತಿಯಿಂದ ಗಾನ ತರಂಗಿಣಿ ಟ್ರಸ್ಟ್ ಇವರ ಸಹಕಾರದೊಂದಿಗೆ ಭಜನಾ ಸಾಮ್ರಾಟ್ ಎಂ ಎಸ್ ಗಿರಿಧರ್, ವಸುಧಾ ಗಿರಿಧರ್ ದಂಪತಿಗಳ 1495ನೇ ದಾಸ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಜನೆಯು ಕಲಿಯುಗದಲ್ಲಿ ಮನುಷ್ಯ ಜೀವನದಲ್ಲಿ ದೇವರನ್ನು ಅತಿ ವೇಗವಾಗಿ ಹೋಲಿಸುವ ಒಂದು ಅದ್ಭುತ ಶಕ್ತಿ ಎಂಎಸ್ ಗಿರಿಧರ ದಂಪತಿಗಳು ಕಳೆದ ಹಲವಾರು ವರ್ಷಗಳಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದ್ದು ಪ್ರತಿ ಹಿಂದೂ ಮನೆಯಲ್ಲೂ ಭಜನೆ ಸಂಭ್ರಮಿಸಬೇಕು ಆ ಮುಖಾಂತರ ಧರ್ಮ ಜಾಗೃತಿಯಾಗಬೇಕು ಎಂದು ಪಲಾಪೇಕ್ಷೆ ಬಯಸದೆ ಮನೆಯಂಗಳದಲ್ಲಿ ದಾಸ ಸಿಂಚನ ಎಂಬ ನಾಮಾಂಕಿತದೊಂದಿಗೆ ರಾಜ್ಯವ್ಯಾಪಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರ್ತಾ ಇರೋದು ಶ್ಲಾಘನೀಯ ನಾವುಗಳು ಇಂತಹ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕು ಎಂದರು. ಕೊನೆಯಲ್ಲಿ ಕಲಾವಿದ ದಂಪತಿಗಳನ್ನು ಗೌರವಿಸಲಾಯಿತು, ಕಾರ್ಯಕ್ರಮದಲ್ಲಿ ಅಂಗ ಸಂಸ್ಥೆಯ ಕಾರ್ಯದರ್ಶಿ, ಗೋಪಾಲಕೃಷ್ಣ ಮಯ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣಮಯ್ಯ ಕೋಶಾಧಿಕಾರಿ ಪದ್ಮನಾಭ ಮಯ್ಯ ಹಿರಿಯರಾದ ಶಿವರಾಮಯ್ಯ, ತಾರಾನಾಥ ಹೊಳ್ಳ ಚಂದ್ರಶೇಖರ ಮಯ್ಯ ಮ್ಯಾನೇಜರ್ ಶಿವರಾಮ ರಾವ್ ಸದಸ್ಯರಾದ ರಂಗನಾಥ ಐತಾಳ್, ಪ್ರವೀಣ್ ಮಯ್ಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಲಲಿತ ಉಪಾಧ್ಯಾಯ ಗೌರಿ ಆರ್ ಆರ್ ಹೊಳ್ಳ ಶಶಿಪ್ರಭಾ ಐತಾಳ್, ಅನುಪಮ ವೀಣಾ ಮಯ್ಯ, ಶಾಮಲಾ, ವಸಂತಿ, ಧನಲಕ್ಷ್ಮಿ, ವಸಂತಲಕ್ಷ್ಮಿ ಮೊದಲಾದವರು ಉಪಸ್ಥಿತರಿಸಿದರು. ಇದೇ ಸಮಯದಲ್ಲಿ ಮಹಿಳೆಯರಿಂದ ವರಮಹಾ ಲಕ್ಷ್ಮೀ ಪೂಜೆ ಜರಗಿತು.
