DAKSHINA KANNADA

ಧರ್ಮಸ್ಥಳ: ಅವರು ಗುರಿ ಮುಟ್ಟಬಹುದೇ? ಯಾರು ಇಟ್ಟ ಗುರಿ?

Share

 

“ಧರ್ಮಸ್ಥಳದಲ್ಲಿ ಅಡಗಿರುವ ತಲೆ ಬುರುಡೆ ರಹಸ್ಯ’ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತ ಜಿತೇಂದ್ರ ಕುಂದೇಶ್ವರ ಅವರು ಮಾಡಿರುವ ವಿಶ್ಲೇಷಣೆ ಯಥಾವತ್ ಅವರ ಅನುಮತಿಯ ಮೇಲೆ ಇಲ್ಲಿ ಪ್ರಕಟಿಸುತ್ತಿದ್ದೇವೆ – ಸಂ.

ಧರ್ಮಸ್ಥಳ: ಹೂತಿಟ್ಟ  13ಸ್ಥಳ ಗಳನ್ನು ಅಜ್ಞಾತ ವ್ಯಕ್ತಿ ಗುರುತಿಸಿದ್ದಾನೆ.! ಈಗ ಮೊದಲನೆಯ ಸಮಾಧಿಯಲ್ಲಿ ಯಾವುದೇ ಕುರುಹು ಮೂಳೆ, ಎಲುಬು, ಸಹಿತ ಯಶಸ್ಸು ಸಿಕ್ಕಿಲ್ಲ!

  • ಆಗೆಯುವಾಗ ಆಳದಲ್ಲಿ ಥಳ್ ಎನ್ನುವ ಸದ್ದು ಕೇಳಿ ಬಂತು ಆದರೆ ಅದು pvs ಪೈಪಿನದು ಎಂಬುದು ಬಳಿಕ ಗೊತ್ತಾಯ್ತು! ಇರಲಿ ಬಿಡಿ…
    ಈತ ಹೇಳಿರುವ 13 ಕಡೆಗಳಲ್ಲಿ 10 ಕಡೆಗಳಲ್ಲಿ ಶವ/ ಕಳೇಬರ ಸಿಗಲಿಲ್ಲ… ಎಂದಿಟ್ಟುಕೊಳ್ಳೋಣ.
    ಕನಿಷ್ಠ 3 ಕಡೆಯಾದರೂ ಸಿಗಬಹುದು ಎಂದಿಟ್ಟುಕೊಳ್ಳಿ!

*ಹಾಗಾದರೆ ಇದು ಯಾರಿಗೆ ಜಯ? ಯಾರಿಗೆ ಸೋಲು?*
ಎಣಿಸಿದಂತೆಯೇ ಆದರೆ..
*ಆತ ನೆನಪಿನ ಶಕ್ತಿ ಪರೀಕ್ಷೆಯಲ್ಲಿ ಫೇಲು ಅಥವಾ ತೇರ್ಗಡೆಯಾಗುವ ಅಂಕ ಗಳಿಸಿಲ್ಲ ಎಂದು ಹೇಳಬಹುದು.*
ಅಂದರೆ..

ಅಜ್ಞಾತ ವ್ಯಕ್ತಿ ಅಸ್ಪಷ್ಟ ಚಿತ್ರ

ಇದರಲ್ಲಿ ಯಾರಿಗೂ ಜಯ ಇಲ್ಲ! ಒಂದು ದಶಕ ಕಾಲ ಧರ್ಮಸ್ಥಳ ಆಸುಪಾಸಿನಲ್ಲಿ ಅಪರಿಚಿತ, ಅನಾಥ ನೇತ್ರಾವತಿಯಲ್ಲಿ ಮುಳುಗಿದ ಆತ್ಮಹತ್ಯೆಗೈದ… ಇತ್ಯಾದಿ

  • *ಮೃತದೇಹಗಳ ಹೂತುಹಾಕುತ್ತಿದ್ದ ಕಾರ್ಮಿಕನೊಬ್ಬ ಊರಲ್ಲಿ ಕೆಲಸ ಬಿಟ್ಟು ಒಂದು ದಶಕದ ಬಳಿಕವೂ ಆ ಸಮಾಧಿ ಸ್ಥಳವನ್ನು ನೆನಪಿಟ್ಟುಕೊಳ್ಳುವಲ್ಲಿ ಶೇಕಡಾ (23%) ಜಯಗಳಿಸಿದ್ದಾನೆ ಎಂದರ್ಥ*.
    ಎಸ್ಐಟಿ ತನಿಖೆ ದೀರ್ಘಕಾಲ ಮುಂದುವರೆಯುವ ಸೂಚನೆ ಅಷ್ಟೇ.
    ಒಂದು ವೇಳೆ ಅರ್ಧಕ್ಕಿಂತಲೂ ಹೆಚ್ಚು ಜಾಗದಲ್ಲಿ ಕಳೇಬರಗಳು ಸಿಕ್ಕಿದರೆ ಆತನ ನೆನಪಿನ ಶಕ್ತಿ ಪರವಾಗಿಲ್ಲ, ಚೆನ್ನಾಗಿದೆ ಎನ್ನಬಹುದು.
    *ಹತ್ತಕ್ಕೂ ಹೆಚ್ಚು ಕಡೆ ಕಳೆಬರ ಪತ್ತೆಯಾದರೆ ನೆನಪಿನ ಶಕ್ತಿ ಅತ್ಯುತ್ತಮ ಎನ್ನಬಹುದು.*
    ನೇತ್ರಾವತಿಯ ತಟದ ಅಕ್ಕಪಕ್ಕದಲ್ಲಿ ಎರಡು ದಶಕಗಳ ಹಿಂದೆ ಅನಾಥ ಶವಗಳನ್ನು ಹೂಳಲು ಬಳಸಲಾಗುತ್ತಿತ್ತು. *ಇದಕ್ಕೆ ಪಂಚಾಯತ್ ಮತ್ತು ಪೊಲೀಸ್ ಠಾಣೆಯ ಯುಡಿಆರ್ ಪ್ರಕರಣ ದಾಖಲೆಗಳು ಇರುತ್ತವೆ. ಇಲ್ಲವಾದರೆ ಆ ಲೋಪವನ್ನು ಕಂಡು ಹುಡುಕಬೇಕು*.
    ಇದ್ದರೆ ಆಯ್ತಲ್ಲ. ಇಲ್ಲವಾದರೆ
    ಕಳೇಬರ, ತಲೆ ಬುರುಡೆಗಳ ಎಫ್ಎಸ್ಎಲ್ ರಿಪೋರ್ಟ್ ಅಧ್ಯಯನ ನಡೆಸಿ ಯಾವ ಕಾಲದೆಂದು ಹೇಳಬಹುದು.
    50/ 100 ವರ್ಷಗಳ ಹಿಂದಿನ ಪ್ರಕರಣಗಳಾದರೆ ದೂರುದಾರನ ಹೆಸರಿಸಿದ ಪ್ರಕರಣಗಳು ಅಲ್ಲ ಎನ್ನುವುದು ಖಚಿತ.

*ದೂರುದಾರ ಆರೋಪಿ ಹೇಳಿರುವಂತೆ ಬಾಲಕಿಯ ಕಳೆಬರ ಇನ್ಯಾವುದು ಸಿಕ್ಕಿದ್ದಲ್ಲಿ ಅದು ಎಫ್ ಎಸ್ ಎಲ್ ವರದಿಯಲ್ಲಿ ಸಾಬೀತಾಗಬೇಕು. ಇದಕ್ಕೆ ಸಂಬಂಧಿಸಿದಂತೆ ಸಂಬಂಧಿಗಳ ಡಿಎನ್ಎ ಟೆಸ್ಟ್ ಕೂಡಾ ಮಾಡಿಸಬೇಕು. ಅಲ್ಲಿ ಕೊಲೆ/ ಅತ್ಯಾಚಾರ ಆಗಿರುವ ಏನಾದರೂ ಸಾಕ್ಷ್ಯ ಹೊರ ತೆಗೆಯಲು ಸಾಧ್ಯವೇ ಎನ್ನುವುದನ್ನು ವಿಧಿ ವಿಜ್ಞಾನ ತಜ್ಞರು ಹೇಳಬೇಕು.*

ಅಜ್ಞಾತ ವ್ಯಕ್ತಿ ಹೇಳಿದಂತೆ..
ಅಲ್ಲಿ ಬಾಲಕಿ/ ಯುವತಿಯ ಅತ್ಯಾಚಾರ/ ಕೊಲೆಯಾಗಿ ಮೃತಪಟ್ಟಿದ್ದಾಳೆ ಎನ್ನುವುದಾದರೆ..
ವಿಧಿ ವಿಜ್ಞಾನ ಎಫ್ ಎಸ್ಸೆ ಎಲ್ ಇತ್ಯಾದಿ ಸಂಶೋಧನಾ /ಪ್ರಯೋಗಾಲಯ ವ್ಯವಸ್ಥೆಯ ಮೂಲಕ ದೃಢೀಕರಿಸುವ ಸಾಧ್ಯತೆಗಳು ಇದ್ದರೆ ನಂತರವಷ್ಟೇ ಪ್ರಕರಣ ಕ್ಕೆ ಜೀವ ಬರುತ್ತದೆ.
ಅಲ್ಲಿಯವರೆಗೆ ಸೂಕ್ಷ್ಮವಾಗಿ ಗಮನಿಸುವುದು ಒಳ್ಳೆಯದು!

*ತನಿಖಾ ತಂಡದ #ಪೊಲೀಸರ #ಪರಿಶ್ರಮ #ಛಲ ಮಂಗಳವಾರ ನಡೆದ ಕಾರ್ಯಾಚರಣೆ ವೇಳೆ ಸ್ಪಷ್ಟವಾಗಿದೆ.
ಆರು ಅಡಿ ಆಳದಲ್ಲಿ ಶವ ಹೂತಿಟ್ಟಿದ್ದೇನೆ ಎಂದ ಆಜ್ಞಾತ ವ್ಯಕ್ತಿಯ ಮಾಹಿತಿಯಂತೆ ಅಗೆದರೂ ಕಳೆಬರ ಸಿಗದಿದ್ದಾಗ ಎಸ್ಐಟಿಯವರು ಅಲ್ಲಿಗೆ ಕೈ ಚೆಲ್ಲಿ ಕುಳಿತುಕೊಳ್ಳಲಿಲ್ಲ.
ತಕ್ಷಣ ಹಿಟಾಚಿ ಜೆಸಿಬಿಯನ್ನು ಕರೆತಂದು ಅಕ್ಕಪಕ್ಕ, ಸುತ್ತಮುತ್ತ 20- 25 ಅಡಿ ಸುತ್ತಳತೆಯಲ್ಲಿ ಜೆಸಿಬಿಯಿಂದ ಆಗೆಯಿಸಿದರು*.
ಕೆಲವೆಡೆ ಹತ್ತರಿಂದ ಹದಿನೈದು ಅಡಿ ಆಳದವರೆಗೂ ಅಗೆದರು ಎಂಬ ಮಾಹಿತಿಗಳಿವೆ.
ಅದರ ಬೆನ್ನಿಗೆ *#ಪೊಲೀಸ್_ನಾಯಿ ಗಳನ್ನ ಕರೆಸಿ, ಸುತ್ತಮುತ್ತಲ ಜಾಗದಲ್ಲಿ #ವಾಸನೆ ಬಂದರೆ ಸಾಕು ಅಗೆದು ಬಗೆದು ಹುಡುಕಿ ತೆಗೆಯಬಹುದು/ ತೆಗೆಯಬೇಕು ಎನ್ನುವ ಅವರ ಬದ್ಧತೆಗೆ ಸಲಾಂ*.
_*ಅವರಿಗೂ ಕಳೇಬರ ಸಿಗಲೇಬೇಕು ಎನ್ನುವ ಛಲ ಇದೆ ಎನ್ನುವುದು ಇದರಿಂದ ಅರ್ಥವಾಗುತ್ತದೆ. ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ, ಸರ್ಕಾರದ ಸಂಪೂರ್ಣ ಸಹಕಾರ ಇದೆ ಎನ್ನುವುದು ದಿಟ.*_

ಇದರ ಮಧ್ಯ ಒಂದೊಂದು ತಲೆ ಬುರುಡೆ ಸಿಕ್ಕರೆ ಯುಟ್ಯೂಬ್, ‌ ಮಾಧ್ಯಮ ಗಳಿಗೆ ಸುದ್ದಿಯ ಆಹಾರವಷ್ಟೇ… ಬಿಸಿ ಬಿಸಿ ಸುದ್ದಿ ಮಾಡಲು #BBC ಅವರು ಬರಬಹುದು ಆದರೆ ಈ ಪ್ರಕರಣಕ್ಕೆ ನ್ಯಾಯ ಸಿಗುವುದು ಇಂತಹ ಸುದ್ದಿಗಳಿಂದಲ್ಲ..

  • ಏಕೆಂದರೆ *#ಸೌಜನ್ಯ ಪ್ರಕರಣದಲ್ಲಿ ಹಸಿ ಹಸಿ #ಸಾಕ್ಷಿ #ಎವಿಡೆನ್ಸ್ ಮೃತ ದೇಹದ ಗಾಯ, ಅತ್ಯಾಚಾರಿಯ ಮೈ ಮೇಲೆ ಇದ್ದ ಗಾಯ #ವಿಧಿ_ವಿಜ್ಞಾನ ವರದಿ, ಪ್ರಯೋಗಾಲಯ ವರದಿ..*
    _*ಪೊಲೀಸರು ಆರೋಪ ಪಟ್ಟಿ ದಾಖಲಿಸಿ ಕೊಲೆ ಅತ್ಯಾಚಾರ ಮಾಡಿದವನು ಇವನೇ ಎಂದು ವ್ಯಕ್ತಿಯನ್ನು ಪತ್ತೆ ಹಚ್ಚಿ..‌ ಹಂತಕ ಯಾವ ರೀತಿ ಕುತ್ತಿಗೆ ಒತ್ತಿ ಹಿಡಿದ, ಹೇಗೆ ಅತ್ಯಾಚಾರ ಮಾಡಿದ ಎಂಬುದಾಗಿ ಪೊಲೀಸರು ಅದೇ ವ್ಯಕ್ತಿಯೇ ಆತನೇ ಜಾಗಗಳಿಗೆ ಕರೆದುಕೊಂಡು ಹೋಗಿ ಅಲ್ಲಿ #ಮಹಜರು‌ ಮಾಡಿ…!! #ಪೋಲಿಸ್ ತನಿಖೆ, #ಸಿಐಡಿ ತನಿಖೆ, #ಸಿಬಿಐ ತನಿಖೆ ಸಾವಿರ ಪುಟಗಳ ಆರೋಪ ಪಟ್ಟಿ ಎಲ್ಲವೂ ಆದರೂ…
    *ಕೊನೆಗೂ ಅತ್ಯಾಚಾರಿಗೆ ಶಿಕ್ಷೆಯಾಗಲಿಲ್ಲ… ವ್ಯವಸ್ಥೆಯ ಲೋಪಗಳಿಂದಾಗಿ ಅತ್ಯಾಚಾರಿ ರಕ್ಷಣೆ ಆಯ್ತಲ್ಲ!*
  • ಸಾಕ್ಷಿಗಳು ಉಲ್ಟಾ ಹೊಡೆಯುವುದಲ್ಲ…
    ಆತ್ಮಸಾಕ್ಷಿ ಉಲ್ಟಾ ಹೊಡೆಯಬಾರದು ಅಷ್ಟೇ!
    -ಜಿತೇಂದ್ರ ಕುಂದೇಶ್ವರ*

 

To Top