ಯೂಟ್ಯೂಬ್ನಲ್ಲಿ ಸಿನಿಮಾಗಳ ಬಗ್ಗೆ ತಮ್ಮ ವಿಮರ್ಶೆಯಿಂದ ಅವರು ಜನಪ್ರಿಯತೆ ಸಾಧಿಸಿದ್ದ ಪುಲಾ ಚೊಕ್ಕಾ ನವೀನ್ ಎಂಬ ತೆಲುಗು ಯೂಟ್ಯೂಬರ್ ಜೈಲು ಕಂಬಿ ಎಣಿಸುತ್ತಿದ್ದಾನೆ.
ಇದೀಗ ಹೈದರಾಬಾದ್ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಉದ್ದೇಶಪೂರ್ವಕವಾಗಿ ನವೀನ್ ನೆಗೆಟಿವ್ ರಿವ್ಯೂ ಕೊಟ್ಟಿದ್ದಾನೆ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಹಾಗಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿನಿಮಾ ನಿರ್ಮಾಪಕರ ದೂರು ಆಧರಿಸಿ ಯೂಟ್ಯೂಬರ್ ಪೂಲ ಚೊಕ್ಕ ನವೀನ್ ಜೈಲು ಸೇರಿದ್ದಾನೆ.
“40 ಸಾವಿರ ರೂ. ಕೊಟ್ಟರೆ ಪಾಸಿಟಿವ್ ರಿವ್ಯೂ ಕೊಡ್ತೀನಿ, ಇಲ್ಲದಿದ್ದರೆ ನೆಗೆಟಿವ್ ಮಾಡ್ತೀನಿ” ಎಂದು ನವೀನ್ ಹೇಳಿದ್ದ
ಎನ್ನುವ ಆರೋಪ ಕೇಳಿಬಂದಿದೆ. ಫಿಲ್ಮ್ ನಗರ್ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ.
