ಮತ್ತೆ ಮಿಂಚಿದ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್
ಬೆಂಗಳೂರು: ರಾತೋ ರಾತ್ರಿ ಮನೆಗೆ ಬಂದು ಹಿರಿಯ ನಾಗರಿಕರ ಮನೆಗೆ ಬಂದು, ಸೆಲ್ಫಿ ತೆಗೆಯುತ್ತಿದ್ದ ಪೊಲೀಸರ ಕ್ರಮವನ್ನು ಟೀಕಿಸಿದ ನವೀನ್ ಕುಮಾರ್ ಜಿ ಮೇಲೆ ಕಡಬ ಪೊಲೀಸರು ಹಾಕಿದ ಎಫ್ಐಆರ್ ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಹಿಂದೂ ಹಿರಿಯ ಕಾರ್ಯಕರ್ತರ ಮನೆಗೆ ಬಂದು ಉಪಟಳ ನೀಡುತ್ತಿರುವ ಕ್ರಮವನ್ನ ಖಂಡಿಸಿ ಜೂನ್ 6 ರಂದು ಕಡಬ ಪೊಲೀಸ್ ಠಾಣೆಗೆ ಬಂದ ಹಿಂದೂ ಸಂಘಟನೆಯ ನಿಯೋಗದಲ್ಲಿದ್ದ ಕಡಬ ನಿವಾಸಿ, ಭಜರಂಗದಳ ರವಿಕುಮಾರ್ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕುರಿತು ಕಡಬ ಸಬ್ ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿದ್ದರು.
ಈ ಎಫ್ ಐ ಆರ್ ರದ್ದುಗೊಳಿಸುವಂತೆ ಕೋರಿ ದೂರುದಾರರ ಪರವಾಗಿ ಅರುಣ್ ಶ್ಯಾಮ್ ಅಸೋಸಿಯೇಟ್ಸ್ ಹೈಕೋರ್ಟ್ ಮೆಟ್ಟಿಲೇರಿತ್ತು.
- ವಾದ ವಿವಾದ ಆಲಿಸಿದ ಏಕಸದಸ್ಯ ಪೀಠ ನ್ಯಾಯಮೂರ್ತಿ ಕೃಷ್ಣ ಕುಮಾರ್ ಕಡಬ ಪೊಲೀಸರು ಹಾಕಿರುವ ಎಫ್ ಐ ಆರ್ ಕೆ ತಡೆಯಾಜ್ಞೆ ನೀಡಿದ್ದಾರೆ.
ದೂರುದಾರರ ಪರವಾಗಿ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದಿಸಿದ್ದರು. ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.
ಕರಾವಳಿಯ ಇಂತಹ ಪ್ರಕರಣಗಳನ್ನು ಸಮರ್ಥವಾಗಿ ವಾದಿಸಲು ಕರ್ನಾಟಕ ಸರ್ಕಾರವೇ 4 ನುರಿತ ವಕೀಲರ ತಂಡವನ್ನ ನೇಮಿಸಿ ಆದೇಶ ಹೊರಡಿಸಿತ್ತು.
ಇದಾದ ಬಳಿಕವೂ ಅರುಣ್ ಶ್ಯಾಮ್ ಅಸೋಸಿಯೇಟ್ಸ್ ವಾದ ಮಂಡನೆಗೆ ಜಯ ಲಭಿಸಿದೆ.
