DAKSHINA KANNADA

ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ದ್ವೇಷ ರಾಜಕೀಯ :ರಹೀಮ್ ಉಚ್ಚಿಲ್

Share

ಬ್ಯಾರಿ ಅಕಾಡೆಮಿಯ ಅಧ್ಯಕ್ಷರ ದ್ವೇಷ ರಾಜಕೀಯ ತಾರತಮ್ಯ ನೀತಿ ಖಂಡನಾರ್ಹ :ರಹೀಮ್ ಉಚ್ಚಿಲ

ಮಂಗಳೂರು: ಬ್ಯಾರಿ ಅಕಾಡೆಮಿಯ ಎಲ್ಲ ಅಧ್ಯಕ್ಷರು ತನ್ನ ಅವಧಿಯ ಕೊನೆಯಲ್ಲಿ ತಮ್ಮ ಸಾಧನೆಯ ಕುರಿತು ಪುಸ್ತಕವನ್ನು ರಚಿಸುವುದು ರೂಡಿಯಾಗಿದ್ದು .ಬ್ಯಾರಿ ಅಕಾಡೆಮಿಯ ಎಲ್ಲ್ಲಾ ಅವದಿಲ್ಲೂ ಇದು ಪ್ರಕಟವಾಗಿದೆ.

ರಹೀಂ ಉಚ್ಚಿಲ್

ನಿಕಟಪೂರ್ವ ಅಧ್ಯಕ್ಷರಾಗಿದ್ದ ರಹೀಮ್ ಉಚ್ಚಿಲ್ ರವರ ತಂಡದ ಸಾಧನೆಯ ನೋಟ ಪುಸ್ತಕ ಪ್ರಕಟವಾಗುವ ಸಮಯ ಅವರು ಪದ ಮುಕ್ತರಾದ ಕಾರಣ ಪ್ರಕಟಣೆಗೆ ತಯಾರಾಗಿದ್ದ ಪುಸ್ತ್ತಕ ಪ್ರಕಟಣೆ ಆಗಿರಲಿಲ್ಲ .

ಉಮರ್  ಅಧ್ಯಕ್ಷರಾಗಿ ವರ್ಷಗಳೇ ಕಳೆದರೂ ಹಲವು ಮನವಿ ಬಳಿಕವೂ ಇದನ್ನು ಪ್ರಕಟಿಸದೇ ಸಾಹಿತ್ಯ ಕ್ಷೇತ್ರದಲ್ಲೂ ಸೇಡಿನ ರಾಜಕೀಯ ನಡೆಸುತ್ತಿದ್ದಾರೆ.  ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಮ್ ಉಚ್ಚಿಲ್ ಆರೋಪ ಮಾಡಿದ್ದಾರೆ.

ಜನಗಣತಿ ಕಾಲಂ ನಲ್ಲಿ ಯಾವುದೇ ಭಾಷೆ ನಮೂದು ಆಗಬೇಕಾದರೆ ಆ ಭಾಷೆ ಲಿಪಿ ಹೊಂದಿರಬೇಕು ಯ. ರಾಜ್ಯ ಭಾಷೆಯ ಸ್ಥಾನಮಾನ ಹೀಗೇ ಕೆಲವು ಮಾನದಂಡ ಒಳಗೊಂಡಿರಬೇಕು.

ಈ ನಿಟ್ಟಿನಲ್ಲಿ ರಹೀಮ್ ಉಚ್ಚಿಲ್ ತನ್ನ ಅವಧಿಯಲ್ಲಿ ಬ್ಯಾರಿ ಲಿಪಿ ಸಂಶೋಧನೆ, ರಚನೆ ,ಹಾಗೂ ಅನುಷ್ಠಾನ ಸಮಿತಿಯನ್ನು ರಚಿಸಿ ಸರಳವಾಗಿ ಬ್ಯಾರಿ ಲಿಪಿ ಯನ್ನು ರಚಿಸಿ ಅನಾವರಣೆ ಗೊಳಿಸಿದ್ದು ಇದು ಬಳಕೆಗೆ ಅರ್ಹವಾಗಿರತ್ತದೆ.

ಈ ಸತ್ಯ ತಿಳಿದಿದ್ದರೂ ಈ ಲಿಪಿಯನ್ನು ಜಗತ್ತಿಗೆ ಪರಿಚಯಿಸದೆ ಇದಕ್ಕೆ ಪ್ರೋತ್ಸಾಹ ನೀಡದೆ ಬ್ಯಾರಿ ಭಾಷೆಗೆ ಮತ್ತು ಬ್ಯಾರಿಗಳಿಗೆ ವಂಚಿಸಿ ಮುಂದಿನ ಜನಗಣತಿ ಕಾಲಂ ನಲ್ಲಿ ಬ್ಯಾರಿ ಭಾಷೆ ನಮೂದು ಆಗದಂತೆ ತಡೆಯುವ ಎಲ್ಲ ಪ್ರಯತ್ನ ನಡೆಸುತ್ತಿದ್ದಾರೆ .
ತಾನು ಅಧಿಕಾರ ಬಿಟ್ಟು ಹೋಗುವಾಗ ಒಂದು ಕೋಟಿ ಮೊತ್ತ ಅಕಾಡೆಮಿಯಲ್ಲಿ ಉಳಿಕೆಯಾಗಿದ್ದು ಅನುದಾನದ ಕೊರತೆ ಇಲ್ಲದಿದ್ದರೂ ಬ್ಯಾರಿ ಭಾಷೆ ಕಲೆ ಸಾಹಿತ್ಯದ ಅಭಿವೃದ್ಧಿಗೆ ಬಳಸದೆ ಸಾವಿರಾರು ಬ್ಯಾರಿ ಸಂಗೀತ ಕಲಾವಿದರಿಗೆ, ಸಾಹಿತಿಗಳಿಗೆ, ಹಾಡುಗಾರರಿಗೆ ಅವಕಾಶನೀಡದೆ ಸಮಯ ವ್ಯರ್ಥಮಾಡ ಲಾಗಿದೆ.

ರಹೀಂ ಉಚ್ಚಿಲ್ ಹುಲಿ ಜೊತೆ ಫೋಟೋ ಶೂಟ್

ತಕ್ಷಣ ಕಲೆ ಸಾಹಿತ್ಯದ ಬಗ್ಗೆ ಒಲವು ಹೊಂದಿರುವ ನೂತನ ಅಧ್ಯಕ್ಷರನ್ನು ನೇಮಿಸಿ,ಬ್ಯಾರಿ ಭಾಷಿಗರಿಗೆ ನ್ಯಾಯ ಒದಗಿಸಬೇಕು. ಇದು ಮುಖ್ಯಮಂತ್ರಿ ಮತ್ತು ಸ್ಪೀಕರ್ ಯು ಟಿ ಖಾದರ್ ಅವರಿಗೆ ನನ್ನ ಮನವಿ ಪತ್ರ

-ರಹೀಮ್ ಉಚ್ಚಿಲ್, ಮಾಜಿ ಅಧ್ಯಕ್ಷರು, ಬ್ಯಾರಿ ಸಾಹಿತ್ಯ ಅಕಾಡೆಮಿ

To Top