ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ
ತಲೆಮರೆಸಿಕೊಡಿದ್ದ ಶ್ರೀಕೃಷ್ಣ ಜೆ.ರಾವ್(21) ಪತ್ತೆ ಯಾಗಿದ್ದಾನೆ.
ಮೈಸೂರಿನ ಟಿ.ನರಸೀಪುರ ಎಂಬಲ್ಲಿ ಶ್ರೀಕೃಷ್ಣ ವಶಕ್ಕೆ ಪಡೆದು
ಆರೋಪಿ ಕೃಷ್ಣನ ವಿಚಾರಣೆ ನಡೆದಿದೆ.
ದ.ಕ. ಮಹಿಳಾ ಪೊಲೀಸ್ ಠಾಣೆ ಪೊಲೀಸರಿಂದ ವಿಚಾರಣೆ ನಡೆಯುತ್ತಿದ್ದು.
ಸಹಪಾಠಿ ಗೆಳತಿಯೊಂದಿಗೆ ಪ್ರೇಮಾಂಕರವಾಗಿ ಅದರ ಫಲವಾಗಿ ಗರ್ಭಾಂಕುರವಾಗಿ ಪ್ರೇಮಿ ಮಗುವನ್ನು ಹೆತ್ತಿದ್ದರು.
ಸಂಧಾನಕ್ಕೂ ಎರಡು ಕಡೆಯಿಂದ ಪ್ರಯತ್ನ ನಡೆದಿತ್ತು.
ಯುವಕ ಪ್ರಾಯಕ್ಕೆ ಬಂದ ಮೇಲೆ ಯುವತಿಗೆ ಮದುವೆ ಮಾಡಿಸಿ ಕೊಡುವುದಾಗಿ ಯುವಕನ ಕಡೆಯವರು ಮಾತು ಕೊಟ್ಟಿದ್ದರು. 21 ವರ್ಷ ದಾಟಿದ ಬಳಿಕವೂ ಮದುವೆ ಮಾಡಿಸದ ಕಾರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತು.
ಕೇಸು ದಾಖಲಾಗಿ ಬಳಿಕ ರಾಜಕೀಯ ಪಕ್ಷಗಳು ಪ್ರಕರಣವನ್ನ ತಮಗೆ ಬೇಕಾದ ಹಾಗೆ ಬಳಸಿಕೊಂಡಿದ್ದು. ಯುವತಿಯ ತಾಯಿಯ ಜೊತೆ ಎಸ್ ಡಿ ಪಿ ಐ ಸೇರಿಕೊಂಡು ಪುತ್ತೂರಿನಲ್ಲಿ ಪ್ರತಿಭಟನೆಯನ್ನು ನಡೆಸಿತ್ತು.
ಇದು ಪುತ್ತೂರು ಮಾತ್ರವಲ್ಲದೆ ರಾಜ್ಯಾದ್ಯಂತ ಸುದ್ದಿಯಾಗಿ ಯುವಕ ತಲೆಮರೆಸಿಕೊಂಡಿದ್ದ. ಇದೀಗ ಯುವಕನನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ.
