LATEST NEWS

ಕದ್ರಿ: ಸಾಂಸ್ಕೃತಿಕ ಕಾಲ ಕ್ಷೇಪ “ಅಂತ್ಯಾಕ್ಷರಿ

Share
ಮಂಗಳೂರು: ಶಿವಳ್ಳಿ ಸ್ಪಂದನ ಕದ್ರಿವಲಯ”ದ  ವತಿಯಿಂದ  ಸಾಂಸ್ಕೃತಿಕ ಕಾಲ ಕ್ಷೇಪ “ಅಂತ್ಯಾಕ್ಷರಿ”  ಕದ್ರಿ ದೇವಸ್ಥಾನದ ಆವರಣದ ಶ್ರೀಮಾತಾ ಕೃಪಾ ಸಭಾಂಗಣದಲ್ಲಿ  ನಡೆಯಿತು.
 ಅಹಲ್ಯಾ ವೆಂಕಟ್ರಾಜ್  ಅಂತ್ಯಾಕ್ಷರಿ ಕಾರ್ಯಕ್ರಮ ವನ್ನು ನಿರ್ವಹಿಸಿದರು. ಮೂರು ಗುಂಪು ಗಳನ್ನಾಗಿ ವಿಂಗಡಿಸಿ ಸ್ಪರ್ಧೆ ನಡೆಸಲಾಯಿತು. ವಿಜೇತರಿಗೆ ಬಹುಮಾನ ನೀಡಲಾಯಿತು.
 ಹಿರಿಯ ನಾಗರಿಕರಿಗೆ “ಆಯುಷ್ಮಾನ್” ಕಾರ್ಡು ಗಳನ್ನು ಶಿವಳ್ಳಿ ಸ್ಪಂದನ ಕದ್ರಿ ವಲಯದ ಉಪಾಧ್ಯಕ್ಷ ಸುಧಾಕರ ಭಟ್ ವಿತರಿಸಿದರು.
ಮಹಾ ಪೋಷಕ ಸದಸ್ಯರಾಗಿ ಸೇರ್ಪಡೆಯಾದ  ವಿನಯ ಕುಮಾರ ತಾಳಿಂಜ, ಕನ್ನಡ ಸಿನಿಮಾದಲ್ಲಿ ನಟಿಸರುವ ಬಾಲ ಪ್ರತಿಭೆ ರಿಶಿಕಾ ಕುಂದೇಶ್ವರ, ಸಹೋದರ ವಿಶ್ವತೇಜ  ಕುಂದೇಶ್ವರ  ಅವರನ್ನು ಅಭಿನಂದಿಸಲಾಯಿತು.
ನೋಡು ಮನೆ ಶ್ರೀನಿವಾಸ ಆಚಾರ್  ಉದ್ಘಾಟಿಸಿದರು.
ಶಿವಳ್ಳಿ ಸ್ಪಂದನ ತಾಲೂಕು ಅಧ್ಯಕ್ಷ ವಾಸುದೇವ ಭಟ್, ಕಾರ್ಯದರ್ಶಿ ಕೃಷ್ಣ ಭಟ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ರಮಾಮಣಿ, ಕದ್ರಿ ವಲಯದ ಗೌರವಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ಅಧ್ಯಕ್ಷೆ  ಗೀತಾ ಬೆಳ್ಳೆ, ಕಾರ್ಯದರ್ಶಿ ಶೀಲಾ ಜಯಪ್ರಕಾಶ ಖಜಾಂಚಿ  ರವಿಕಾಂತ ಭಟ್, ಮಾಧ್ಯಮ ಸಲಹೆಗಾರ ಜಿತೇಂದ್ರ ಕುಂದೇಶ್ವರ ಉಪಸ್ಥಿತರಿದ್ದರು.
1 Comment

1 Comment

  1. ರಮೇಶ್ ಮೂಡಿತಾಯ

    July 4, 2025 at 11:06 pm

    ಶಿವಳ್ಳಿ ಸ್ಪಂದನ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಇದೆ.
    ಆದರೆ ಇತ್ತೀಚೆಗೆ ಶಿವಳ್ಳಿ ಸ್ಪಂದನದ ಕುರಿತು ಕೆಲವರು ಕುಹಕವಾಡುತ್ತಿದ್ದಾರೆ. ಆದರೆ ಕಾರ್ಯಕ್ರಮಗಳನ್ನು ನೋಡಿದಾಗ ತುಂಬಾ ಸಂತೋಷವಾಗುತ್ತದೆ. ಶಿವಳ್ಳಿ ಸಮುದಾಯದ ಕುರಿತು ನಿಮ್ಮ ಕಾಳಜಿ ಮೆಚ್ಚ ತಕ್ಕದ್ದು, ಮುಂದುವರಿಸಿ.

Leave a Reply

Your email address will not be published. Required fields are marked *

To Top