FILM

ಚಾಪರ್ಕ ತಂಡದ 60 ನೇ ನಾಟಕಕ್ಕೆ ಮುಹೂರ್ತ

Share
ಕಾಪಿಕಾಡ್ ರಿಂದ ಮತ್ತೊಂದು ಕೌಟುಂಬಿಕ ನಾಟಕ “ಎನ್ನನೇ ಕಥೆ”
ಮಂಗಳೂರು: ತುಳು ರಂಗಭೂಮಿಯ ಹೆಸರಾಂತ ನಾಟಕ ಸಂಸ್ಥೆ ಚಾಪರ್ಕ ತಂಡದ 60ನೇ ನಾಟಕದ ಮುಹೂರ್ತ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು. ಶರವು ರಾಘವೇಂದ್ರ ಶಾಸ್ತೀ ಮುಹೂರ್ತ ನೆರವೇರಿಸಿದರು. ನಿರ್ದೇಶಕ ದೇವದಾಸ್ ಕಾಪಿಕಾಡ್,  ವ್ಯವಸ್ಥಾಪಕಿ ಶರ್ಮಿಳಾ ಕಾಪಿಕಾಡ್, ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸಂಗೀತ ನಿರ್ದೇಶಕ ಗುರು ಬಾಯಾರ್ ಚಾ ಪರ್ಕ ತಂಡದ ಸದಸ್ಯರು, ತಂತ್ರಜ್ಞರು ಉಪಸ್ಥಿತರಿದ್ದರು.
ತುಳುರಂಗಭೂಮಿಯಲ್ಲಿ ಹಾಸ್ಯದೊಂದಿಗೆ ಕೌಟುಂಬಿಕ ವಿಚಾರಗಳೊಂದಿಗೆ ಕಳೆದ 3 ದಶಕಗಳಿಂದ ದೇಶ ವಿದೇಶದ ತುಳು ಕಲಾಭಿಮಾನಿಗಳನ್ನು ರಂಜಿಸುತ್ತಿರುವ ತೆಲಿಕೆದ ಬೊಳ್ಳಿ ಡಾl ದೇವುದಾಸ್ ಕಾಪಿಕಾಡ್ ರವರ ಬತ್ತಳಿಕೆಯಿಂದ ಮೂಡಿಬರುತ್ತಿರುವ ಮತ್ತೊಂದು ಕೌಟುಂಬಿಕ ಹಾಸ್ಯ ನಾಟಕ “ಎನ್ನನೇ ಕಥೆ” ವಿಭಿನ್ನ ಕಥಾ ಹಂದರವನ್ನು ಹೊಂದಿದ್ದು ಈ ಬಾರಿ ಕಲಾಪ್ರೇಕ್ಷಕರನ್ನು ರಂಜಿಸಲು ಸಕಲ ತಯಾರಿಯಲ್ಲಿ ಚಾಪರ್ಕ ತಂಡ ನಿರತವಾಗಿದೆ.
ಕಾಪಿಕಾಡ್ ರವರ ದಶಕದ ಹಿಂದಿನ ಕೌಟುಂಬಿಕ ಸೂಪರ್ ಹಿಟ್ ನಾಟಕ “ಇಲ್ಲ ಇಲ್ಲದ ಕಥೆ”, “ಕಥೆ ನನ ಬರೆಯೋಡು” ಸಾಲಿಗೆ “ಎನ್ನನೇ ಕಥೆ” ಸೇರ್ಪಡೆಯಾಗಲಿದೆ ಎನ್ನುವುದು ಕಾಪಿಕಾಡ್ ರವರ ಅಭಿಮಾನಿಗಳ ನಿರೀಕ್ಷೆ.
ಎಂದಿನಂತೆ ಕಾಪಿಕಾಡ್ ರ ಬಳಗದಲ್ಲಿ ಹಾಸ್ಯ ದಿಗ್ಗಜರಾದ ಭೋಜರಾಜ್ ವಾಮಂಜೂರು, ಸಾಯಿಕೃಷ್ಷಕುಡ್ಲರ ಜೊತೆ ಸ್ವತ ಕಾಪಿಕಾಡ್ ಕಮಾಲ್ ಮಾಡಲಿದ್ದಾರೆ,
ಹಿರಿಯ ಕಲಾವಿದರಾದ ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸುಜಾತ ಶಕ್ತಿ ನಗರ, ಶರತ್ ಪೂಜಾರಿ ಮಾಲೆಮಾರ್ ಇವರು ಜೊತೆ ಉದಯೋನ್ಮುಖ ಕಲಾವಿದರಾದ ಚೇತನ್ ಜಿ.ಪಿಲಾರ್, ತಿಲಕ್ ರಾಜ್ ಕೊಯಿಲ, ಸಚಿನ್ ಅರ್ಕುಲ, ಚೈತ್ರ ಕಲ್ಲಡ್ಕ, ಪ್ರಕಾಶ್ ಶೆಟ್ಟಿ ಧರ್ಮನಗರ ಇವರು ಬಣ್ಣ ಹಚ್ಚಲಿದ್ದಾರೆ.
ಸಂಗೀತ ಗುರು ಬಾಯಾರ್, ದ್ವನಿ-ಬೆಳಕು ರಮಾನಂದ ಸಜಿಪ ಹಾಗೂ ಕಿಶೋರ್ ಮಂಗಳೂರು ಮೇಕಪ್ ರಾಜೇಶ್ ಮಂಜೇಶ್ವರ ರಂಗ ಸಜ್ಜಿಕೆ ಪ್ರಸನ್ನ ಬೋಳಾರ್ ಹಾಗೂ ಆಶಿಕ್ ಉಡುಪಿ ಕಾರ್ಯನಿರ್ವಹಿಸಲಿದ್ದಾರೆ.
ಕಳೆದ 35 ವರ್ಷಗಳಿಂದ ಚಾಪರ್ಕ ತಂಡವನ್ನು ಸದೃಡವಾಗಿ ಕಟ್ಟಿ ಬೆಳೆಸಿದ ಕೀರ್ತಿ ತಂಡದ ನಿರ್ವಾಹಕಿ ಶ್ರೀಮತಿ ಶರ್ಮಿಳಾ ಕಾಪಿಕಾಡ್ ರವರಿಗೆ ಸಲ್ಲುತ್ತದೆ.
ಚಾಪರ್ಕ ತಂಡದ 60ನೇ ನಾಟಕ “ಎನ್ನನೇ ಕಥೆ” ಯ  ಪ್ರಥಮ ಪ್ರದರ್ಶನ ಆಗಸ್ಟ್ 21 ಸಂಜೆ 5:00ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ.
Click to comment

Leave a Reply

Your email address will not be published. Required fields are marked *

To Top