ಮುಂಬೈ: ಭಾರತದಲ್ಲಿ ಬ್ರೋಕರೇಜ್ ಸಂಸ್ಥೆಯಾಗಿ ಕಾರ್ಯಾಚರಣೆ ಪ್ರಾರಂಭಿಸಲು ಜಿಯೋ ಬ್ಲ್ಯಾಕ್ರಾಕ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್ (ಜಿಯೋಬ್ಲಾಕ್ರಾಕ್ ಬ್ರೋಕಿಂಗ್) ಸೆಬಿಯಿಂದ ಅನುಮೋದನೆ ಪಡೆದಿದೆ. ಅಂದಹಾಗೆ ಇದು ಜಿಯೋ ಬ್ಲ್ಯಾಕ್ರಾಕ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ (ಜಿಯೋಬ್ಲಾಕ್ರಾಕ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್)ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಆಗಿದೆ. ಕೈಗೆಟುಕುವ, ಪಾರದರ್ಶಕ, ಹಾಗೂ ತಂತ್ರಜ್ಞಾನ ಚಾಲಿತ ಅನುಷ್ಠಾನ ಸಾಮರ್ಥ್ಯ ಇರುವಂಥದ್ದನ್ನು ಭಾರತೀಯ ಹೂಡಿಕೆದಾರರಿಗೆ ತರಬೇಕು ಎಂಬ ಗುರಿಯನ್ನು ಇರಿಸಿಕೊಂಡಿದೆ.
