Share

x

ತುಳುನಾಡಿನ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಕಾಸರಗೋಡಿನವರು ಕನ್ನಡಕ್ಕೆ ಗೌರವ ಕೊಟ್ಟು ಮಾತನಾಡುವವರಲ್ಲಿ ಮೊದಲಿಗರು.
ನಾವು ಮೊದಲು ಕಲಿತ ಅಕ್ಷರ #ಕನ್ನಡ ಅ ಆ ಇ ಈ
ಆದರೆ ನಾವು ಮೊದಲು ಮಾತನಾಡಿದ ಶಬ್ದ #ತುಳು…
ಮಾತೃಭಾಷೆ ತುಳು, ನಮ್ಮ ತಾಯಿಯನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಮೊದಲಕ್ಷರ ಬರೆದ ಕಾರಣ ಕನ್ನಡವು ಮಾತೃ ಸ್ವರೂಪಿಯೇ ..
ಆದರೆ ನೀವು ತುಳು ಮಾತನಾಡಬೇಡಿ ಎಂದು ಸುತ್ತೋಲೆ ಹೊರಡಿಸುವ ದುಸ್ಸಾಹಸ ಮಾಡಬೇಡಿ.
ಗ್ರಾಮ ಸಭೆಗಳಲ್ಲಿ ತುಳು ಮಾತಾಡಬಾರದು ಎಂದು
ಜಿಲ್ಲಾ ಪಂಚಾಯತ್ ಹೊರಡಿಸಿದ ಸುತ್ತೋಲೆ ನೋಡಿ… ಲಗತ್ತಿಸಿದ್ದೇನೆ.
#ಯಾನು_ಕುಡ್ಲದ_ಡಿಸಿ ಎಂದು ಕನ್ನಡ ಮಾತೃಭಾಷೆ ಅಲ್ಲದ ತುಳು ಮಾತೃಭಾಷೆ ಅಲ್ಲದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ #ಮುಲ್ಲೈ_ಮುಗಿಲನ್ ಎದೆಯುಬ್ಬಿಸಿ ವಿದೇಶದಲ್ಲಿಯೂ ಹೇಳಬೇಕಾದರೆ ಜಿಲ್ಲಾ ಪಂಚಾಯತ್ ಯಾಕೆ ಈ ರೀತಿ ಮಾಡುತ್ತಿದೆ?
ಕನ್ನಡಕ್ಕೆ ಆದ್ಯತೆ ಇರಲಿ ಎಂದು ವಿನಂತಿ ಮಾಡಿ, ಆದರೆ ತುಳು ಭಾಷೆಗೆ ನಿಷೇಧ ಹೇರಬೇಡಿ. ಮತ್ತೊಂದು ಕ್ರಾಂತಿಗೆ ಹಾದಿ ಮಾಡಿಕೊಡಬೇಡಿ.
ವಿಧಾನಸಭೆಯಲ್ಲಿ ತುಳು ಮಾತಾಡುವ #ಸ್ಪೀಕರ್ ಯುಟಿ ಖಾದರ್ ಶಾಸಕ ಅಶೋಕ್ ಕುಮಾರ್ ಮತ್ತು  ಶಾಸಕರು- ಸಂಸದರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಮಾತೃಭಾಷೆ ತುಳುವಿಗೆ ಅ ಗೌರವ ಆಗದಂತೆ ನೋಡಿಕೊಳ್ಳಬೇಕಾಗಿ ಕಳಕಳಿಯ ವಿನಂತಿ.
Vedavyas Kamath
Harish Poonja
Brijesh Chowta
Nalinkumar Kateel
UT Khader
ತುಳುನಾಡಿನಲ್ಲಿ ತುಳು ಮಾತನಾಡಬಾರದು ಎನ್ನುವ ದುಸ್ಸಾಹಸ ಬೇಡ..
Click to comment

Leave a Reply

Your email address will not be published. Required fields are marked *

To Top